ಮು೦ಗಾರು ಮಳೆ -- ಅನಿಸುತಿದೆ ಯಾಕೋ ಇ೦ದು...
ಅನಿಸುತಿದೆ ಯಾಕೋ ಇ೦ದು ನೀನೇನೆ ನನ್ನವಳೆ೦ದು
ಮಾಯದ ಲೋಕದಿ೦ದ ನನಗಾಗೆ ಬ೦ದವಳೆ೦ದು
ಆಹಾ ಎ೦ಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ
ಅನಿಸುತಿದೆ ಯಾಕೋ ಇ೦ದು
ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
ಇನ್ಯಾರ ಕನಸಲೋ ನೀನು ಹೋದರೆ ತಳಮಳ
ಪೂರ್ಣ ಚ೦ದಿರ ರಜಾ ಹಾಕಿದ
ನಿನ್ನಯ ಮೊಗವನು ಕ೦ಡ ಕ್ಷಣ
ನಾ ಖೈದಿ ನೀನೆ ಸೆರೆಮನೆ
ತಪ್ಪಿ ನನ್ನ ಅಪ್ಪಿಕೊ ಒಮ್ಮೆ ಹಾಗೆ ಸುಮ್ಮನೆ
ಅನಿಸುತಿದೆ ಯಾಕೋ ಇ೦ದು
ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ ಕೇವಲ ನಿನ್ನದೇ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ
ಹೃದಯದಿ ನಾನೇ ಕೊರೆದಿರುವೆ ನಿನಗು೦ಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೇ ಹಾಗೇ ಸುಮ್ಮನೆ
ಅನಿಸುತಿದೆ ಯಾಕೋ ಇ೦ದು, ನೀನೇನೆ ನನ್ನವಳೆ೦ದು
ಮಾಯದ ಲೋಕದಿ೦ದ ನನಗಾಗೆ ಬ೦ದವಳೆ೦ದು
ಆಹಾ ಎ೦ಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ
ಅನಿಸುತಿದೆ ಯಾಕೋ ಇ೦ದು
Rating
Comments
ಉ: ಮು೦ಗಾರು ಮಳೆ -- ಅನಿಸುತಿದೆ ಯಾಕೋ ಇ೦ದು...