ಸವಾರಿ

ಸವಾರಿ

ನನ್ನ ಸ್ನೇಹಿತ ರಮೇಶ್ ಆಫೀಸ್ಗೆ ಬೆಳಿಗ್ಗೆ ರೆಡಿ ಆಗಿ ಇನ್ನೇನು ಬೈಕ್ ಹಾತ್ತಬೇಕು ಅನ್ನುವಸ್ಟರಲ್ಲಿ ಅವನ ಸ್ನೇಹಿತ ಉಲ್ಲಾಸ್ ಅವನನ್ನು ಕೇಳಿದ.
"ಯಾವ ಕಡೆಯಿಂದ ಹೋಗ್ತಾ ಇದಿಯಾ ಮಗ ? "
ರಮೇಶ್: "ಶಿವಾಜಿನಗರ್ ಕಡೆಯಿಂದ ಹೋಗ್ತಾ ಇದೀನಿ.. "
ಉಲ್ಲಾಸ್: "ನಾನು ನಿನ್ ಜೊತೆ ಬರ್ತೀನಿ. ಶಿವಾಜಿನಗರ್'ಗೆ ಹೋಗ್ಬೇಕು."
ರಮೇಶ್: "ಸರಿ, ಹೋಗೋಣ ಬಾ.."

ಹತ್ತಿರದ ಹೋಟೆಲ್ಲಿನಲ್ಲಿ ಟಿಫಿನ್ ಮಾಡಿ ರಮೇಶ್ ಬೈಕ್ ಹತ್ತಿ, ಅವನನ್ನು ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿಕೊಂಡು ಹೊರಟ.
ದಾರಿಯಲ್ಲಿ ಒಂದು ಕುಣಿ ಬಂದಾಗ ಜೋರಾಗಿ ಬೈಕನ್ನು ಎಗ್ಗರಿಸಿದ.
ಜೋರಾಗಿ ಬೈಕ್ ಹೊಡೆಯುತ್ತಿದ್ದ ರಮೇಶನಿಗೆ, ನಿಧಾನವಾಗಿ ಓಡಿಸೋ ಅಂತ ಉಲ್ಲಾಸ ಕೇಳಿಕೊಂಡ.

ಹೋಗುತ್ತಿರುವಾಗ ದಾರಿಯಲ್ಲಿ ಪೆಟ್ರೋಲ್ ಹಾಕಿಸಲು ಪೆಟ್ರೋಲ್ ಬಂಕ್ ನ ಒಳ ನಡೆದು, ಪೆಟ್ರೋಲ್ ಹಾಕಿಸಿದ.
ಮತ್ತೆ, ಸವಾರಿ ಹೊರಟಿತು...
ಜೋರಾಗಿ ಓಡಿಸುತಿದ್ದ...
೬ ಕಿಲೋಮೀಟರು ಚಲಿಸಿದ ಬಳಿಕ, ಒಂದು ದೊಡ್ಡ ಕುಣಿ ಬಂತು. ಅದನ್ನು ನೋಡದೆ ಮತ್ತೆ ಜೋರಾಗಿ ಎಗ್ಗರಿಸಿದ..
ಆಗ ರಮೇಶ್, ಉಲ್ಲಾಸನ ಉದ್ದೇಶಿಸಿ "ಸಾರೀ ಮಗ, ಕುಣಿ ಕಾಣಲಿಲ್ಲ, ಎಗ್ಗರಿಸಿಬಿಟ್ಟೆ" ಎಂದು ಕ್ಷಮೆ ಕೇಳಲು ಹಿಂತಿರಿಗಿದ...
ಹಿಂದೆ ಉಲ್ಲಾಸ ಇಲ್ಲ...
ಆಯ್ಯೋ ದೇವರೇ...
ಎಲ್ಲಿ ಬಿದ್ದನೋ ಉಲ್ಲಾಸ ?.ಅಂತ ಹಿಂತಿರಿಗಿ ನೋಡಿದ. ಅಲ್ಲೆಲ್ಲೂ ಅವನಿಲ್ಲ.
ಎಲ್ಲಿ ಹೋದ ಮಾರಾಯ. ಅಂತ ಅವನ ಮೊಬೈಲ್ಗೆ ಕರೆ ಮಾಡಲು ಮೊಬೈಲ್ ಹೊರ ತೆಗೆದ.
ನೋಡಿದರೆ ೩ missed calls. ಅದು ಉಲ್ಲಸಾನಿಂದ.
ತಿರುಗಿ ಉಲ್ಲಾಸನ ಮೊಬೈಲ್ ಗೆ ಕರೆ ಮಾಡಿದ....
ರಮೇಶ್: "ಲೋ, ಎಲ್ಲಿದಿಯೋ ?"
ಉಲ್ಲಾಸ್: "ಮಗನೆ, ಪೆಟ್ರೋಲ್ ಬಂಕ್ ಹತ್ರ ಇದೀನಿ. ನೀನು ಪೆಟ್ರೋಲ್ ಹಾಕಿಸುವಾಗ ನಾನು ಕೆಳಗಡೆ ಇಳಿದಿದ್ದೆ.. ನಾನು ಅತ್ತ ಕಡೆ ನೋಡುವಾಗ, ಇತ್ತ ನೀನು ಮಾಯಾ... ದೊಡ್ಡ ನಮಸ್ಕಾರ ನಿನಗೆ... ಇನ್ನೊದು ಬಾರಿ ನಿನ್ನ ಬೈಕ್ನಲ್ಲಿ ಬರಲ್ಲಾ ಗುರು. ಇನ್ನೇನು ಮಾಡೋದು, ಬಡವರ ಬಂಧು BMTC ಹತ್ತಿ ಹೊರಡ್ತಾ ಇದೀನಿ.. ಚನ್ನಾಗಿ ಡ್ರಾಪ್ ಮಾಡದಲ್ಲ, ತುಂಬಾ ಥ್ಯಾಂಕ್ಸ್....ಫೋನ್ ಇಡ್ತೀನಿ ಮಗ, BYE "

Rating
No votes yet

Comments