ಬದಲಾದ ನಿರ್ಧಾರ

ಬದಲಾದ ನಿರ್ಧಾರ

ನಿನ್ನೆ ಮೊದಲ ಸಲ ನನಗೆ ಸಂಪದದಲ್ಲಿ ಬೇಜಾರಾಯಿತು,

ಮೊದಲು "ಅನಂದರಾಮನ್ ಸತ್ತ ಸುದ್ದಿ" ಓದಿ ಛೇ ಅನ್ಸಿ ಮುಂದ್ಹೊದಾಗ,ಅರವಿಂದ್ ಅವರು ವಿರಹ ಕವನ ಬರೆದು ನಾನು ಪ್ರತಿದಿನ ಮರೆಯಬೇಕು ಅನ್ನೋ ವಿಷಯವನ್ನೇ ನೆನಪು ಮಾಡಿಕೊಟ್ರು.

ನಂತರ ನಾ. ಶೆಟ್ಟಿಯವರ "ಅಮ್ಮ ನಿನ್ನ ಬಿಟ್ಟು" ಕಣ್ಣಲ್ಲಿ ನೀರು ತರಿಸಿತು. ನರಂದ್ರರವರ "ತಾಯಿ" ಓದಿದ ಮೇಲಂತೂ, ಆಫೀಸ್ ನಲ್ಲಿ ಕೂಡೋದಕ್ಕಾಗಲಿಲ್ಲ.
ರಜೆ ಹಾಕಿ ರೂಂಗೆ ಹೋಗಿ ಮಲ್ಕೊಂಡೆ, ಎದ್ದಾಗ ಸಾಯಂಕಾಲ ೬ ಗಂಟೆ, ಹಾಸಿಗೆ ತೆಗೆಯುತಿದ್ದೆ, ತಲೆದಿಂಬು ನೋಡಿ ನಿಶ್ಚಯಿಸಿ ಬಿಟ್ಟೆ ನಾಳೆ ಸಂಪದಕ್ಕೆ ಹೋಗಲೆಬಾರದು.

ಆದರೂ ಮನದ ಮುಲೆಯಲ್ಲೇನೋ ಆಸೆ, ಎಲ್ಲಿ ಶಾಸ್ತ್ರಿಯವರು ಕೇಳದಿರಿ-೧೧ ಬರೆದಿರಬಹುದೇ? ಅರವಿಂದ್ಗೆ ಅವನ ಪ್ರೀತಿ ಸಿಗಬಹುದೇನೋ(ಒಂದು ವೇಳೆ ಅವಳು ಸಂಪದ ಓದ್ತಾ ಇದ್ರೆ)? ಅದಕ್ಕೆ ಮತ್ತೆ ಬಂದೆ........-

ಶಶಿ ಬಿರ್ಗೆ

Rating
No votes yet

Comments