ನಾಲ್ಕು ಹನಿ

ನಾಲ್ಕು ಹನಿ

ಗೆಳತಿ ಮಹಾಭಾರತದ
ಶ್ರೀಕೃಷ್ಣನಂತೆ ನಾನು
ಎನ್ನುವ ನಿನಗೆ!
ಅದೇ ಮಹಾಭಾರತದಲ್ಲಿ
ದೌಪಧಿಯು ಇದ್ದಾಳೆ
ಎನ್ನುವುದು ತಿಳಿದಿಲ್ಲವೇ?!

----------------

ಇದ್ದಿದ್ದು ಇಲ್ಲದಂತೆ
ಇಲ್ಲದಿರುವುದು ಬೇಕೆನ್ನುವಂತೆ
ಬೇಕೆನ್ನುವುದು ಹೇಗಾದರೂ
ಪಡೆಯುವುದೇ ಬದುಕು!!

------------------

ರಾಮಾಯಣದಲ್ಲಿ
ಶ್ರೀರಾಮನೇ
ಸೀತೆಯನ್ನು ವನದಲ್ಲಿ
ಬಿಟ್ಟನಂತೆ!
ಪ್ರೀಯೆ ನಾನೇನು
ಮಹಾ! ನಿನ್ನ ತವರಿನಲ್ಲಿ
ಬಿಟ್ಟಿದ್ದು ತಾನೇ?!

--------------

ಗೆಳೆಯ ನೀನು
ಬಿಸಿಲಾದಾಗ
ನಾನು ಬೆಣ್ಣೆಯಾಗಿ
ಕರಗಿ ಹೋದೆ!
ನಾನು ಬೆಳದಿಂಗಳಾದಾಗ
ನೀನು ಹಿಮದಂತೆ
ಕಲ್ಲಾಗಿ ಹೋದೆ!!

Rating
No votes yet

Comments