ನಾನೇಕೆ ಸಂಪ'ದನ'?

ನಾನೇಕೆ ಸಂಪ'ದನ'?

ಸಂಪದದ ರಾಜಮಾರ್ಗದಲ್ಲಿ (ಮುಖಪುಟದಲ್ಲಿ)  ಬಿಡುಬೀಸಾಗಿ ದಾಪುಗಾಲಿಟ್ಟುಕೊಂಡು ಮೆಲ್ಲ ಮೆಲ್ಲ ಬರುವದು ನನ್ನ ದಿನಚರಿ! ಬರ್ತಾ ಬರ್ತಾ ಪೌಷ್ಟಿಕವಾಗಿರುವ ಆಹಾರ ಕಾಣಿಸ್ತಾ ಇರತ್ತೆ (ಸೋಮಶೇಖರಯ್ಯನವರದೋ, ಜ್ಞಾನದೇವ್ ಅವರದೋ, ಕನ್ನಡಕಂದರದೋ, ಓಂಶಿವಪ್ರಕಾಶರದೋ, ಸವಡಿಯವರದೋ, ಶೈಲಾ ಮೇಡಂ ಅವ್ರದ್ದೋ, ಅಶೋಕರದೋ .. ...ಇತ್ಯಾದಿ..) - ಇದು ಒಳ್ಳೆ ಆಹಾರ ಅಂತ ಅನ್ನಿಸ್ತಿದ್ದಾಗ್ಲೆ, ಅಲ್ಲೇ ಪಕ್ಕದಲ್ಲೇ, ಭಲ್ಲೆ (ಅವರ) ಇಲ್ಲ ಶಾಸ್ತ್ರಿ (ಯವರ)....ಇತ್ಯಾದಿ ಇತ್ಯಾದಿ ...ಕುರುಕಲು ಸ್ನಾಕ್ಗಳು ಕೈ ಬೀಸಿ, ಬೀಸಿ ಕರೆಯತ್ವೆ, ಜೊತೇಗೆ ಪಕ್ಕದಲ್ಲೇ ಒಂದೊಂದ್ಸಲ ಹೆಗಡೆ (ಅವರ) ಇಲ್ಲಾ ಹುಡುಗಿಯರ (ಕವನಗಳ) ಮೈಸೂರ್ ಪಾಕ, ಜಾಮೂನ್ಗಳ ಆಕರ್ಷಣೆ! ಮೇಲೋಗರವಾಗಿ  ಚಿತ್ರ ನೋಡಿ ಕಥೆ ಬರೆಯಿರಿ, ಸುಭಾಷಿತ ಅನುವಾದ ನೋಡಿ, ತೀರ್ಥಕ್ಷೇತ್ರ ನೋಡಿ, ಹಕ್ಕಿ-ಪಿಕ್ಕಿ ನೋಡಿ,  ಪತ್ರೊಡೆ ಮಾಡಿ ನೋಡಿ ಅಂತ ಹಪ್ಪಳ, ಸಂಡಿಗೆಗಳು! ಇರಿ ಸ್ವಲ್ಪ ಇದನ್ನೆಲ್ಲಾ ಅಷ್ಟಿಷ್ಟು ಬಾಯಾಡಿಸಿ, ನಿಧಾನಕ್ಕೆ ಸಾವಧಾನವಾಗಿ ಪೌಷ್ಟಿಕ ಆಹಾರಕ್ಕೂ ಬರ್ತೀನಿ ಅಂತ ನೆಪ ಹೇಳ್ಕೊಂಡು, ದನ ಅಂಗಡಿಯಲ್ಲಿನ ಬಾಳೆ ಗೊನೆಗೆ ಅರ್ಜೆಂಟಾಗಿ ಬಾಯ್ ಹಾಕಿದ್ ಹಾಗೆ ಕವನ, ಚುಟುಕ, ಗಬ ಗಬ ಅಂತ ಮೆದ್ದು ಎದ್ದಾಗ ಕಣ್ಣು ತೂಗಿ ಬಂದು ಮಲಗಿ, ತಿಂದದ್ದನ್ನು ಮೆಲಕು ಹಾಕ್ತಿದ್ದಾಗ ಆಗುವ ಸಂತೋಷ ,ಸಂತೃಪ್ತಿ, ಬರುವ ಐಡಿಯಾಗಳು, ಹೇಳಲಿಕ್ಕೆ ಸಾಧ್ಯವಿಲ್ಲ! ಅದಕ್ಕೆ ನಾನೂ ಸಂಪ'ದನ' :-)

 (ಸುಮ್ನೆ ತಮಾಷೆಗೆ!) 

ಶಾಮಲ

Rating
No votes yet

Comments