ಒಂದು ನೈಜ ಜೋಕು

ಒಂದು ನೈಜ ಜೋಕು

ಎಲ್.ಎಮ್.ನಾಯ್ಕ ನನ್ನ ಚಡ್ಡಿ ದೋಸ್ತ. 'ನನಗೂ ಇಂಗ್ಲೀಷಿನಲ್ಲಿ ಮಾತನಾಡುವಂತಾಗಬೇಕು ಎಂಬ ಆಸೆ. ಹೇಗೆ ಸಾಧ್ಯ?' ಎಂದು ನನ್ನಲ್ಲಿ ಕೇಳಿದ.

'ಯಾರಲ್ಲೂ ಮಾತನಾಡುವಾಗ, ಮಾತನಾಡಿದ್ದನ್ನು ಮನಸಿನಲ್ಲೇ ಆಂಗ್ಲ ಭಾಷೆಗೆ ಅನುವಾದಿಸುವ ಪ್ರಯತ್ನ ಮಾಡು. ಗೊತ್ತಾಗದ ಪದಗಳನ್ನು ನಂತರ ಶಬ್ದಕೋಶ ನೋಡಿ ತಿಳಿದುಕೋ' ಎಂದು ಸಲಹೆ ನೀಡಿದೆ. 'ಹಾಗಿದ್ದಲ್ಲಿ ಒಂದು ವಾಕ್ಯ ಹೇಳು, ನಾನು ಆಂಗ್ಲ ಭಾಷೆಗೆ ಅನುವಾದಿಸುವೆ' ಎಂದ. 

'ನನ್ನ ಗೆಳೆಯ ಮುಗ (ಮಾತು ಬರದವ)' ಎಂಬ ಸಣ್ಣ ವಾಕ್ಯವನ್ನು ಆತನ ಮುಂದಿರಿಸಿದಾಗ, 'ಮೈ ಫ್ರೆಂಡ್ ಇಸ್ .... ಮೈ ಫ್ರೆಂಡ್ ಇಸ್....' ಎಂದು ತಡವರಿಸಿತೊಡಗಿದ. 'ಮಾತು ಬರದವನಿಗೆ ಕನ್ನಡದಲ್ಲಿ ಮುಗ ಎನ್ನುತ್ತಾರೆ. ಇಂಗ್ಲೀಷಿನಲ್ಲಿ ಏನೆನ್ನುತ್ತಾರೋ ಆ ಶಬ್ದವನ್ನು ಹಾಕಿ ವಾಕ್ಯ ಮುಗಿಸು ಎಂದು ಹುರಿದುಂಬಿಸಿದೆ.'

ಒಂದೆರಡು ನಿಮಿಷ ಯೋಚಿಸಿ ಕಡೆಗೆ ಏನೋ ಸಾಧನೆ ಮಾಡಿದ ಮುಖಭಾವದೊಂದಿಗೆ ಆತ ವಾಕ್ಯವನ್ನು 'ಮೈ ಫ್ರೆಂಡ್ ಇಸ್ ಟಂಗ್ ಲೆಸ್' ಎಂದು ಪೂರ್ಣಗೊಳಿಸಿದಾಗ ನಾನು ಕಕ್ಕಾಬಿಕ್ಕಿ!!

Rating
No votes yet

Comments