ನೋಡು ಬಾ ನಮ್ಮೂರ!!!!!.....................೧

ನೋಡು ಬಾ ನಮ್ಮೂರ!!!!!.....................೧

ನೋಡು ಬಾ ನಮ್ಮೂರ!............೧

ನಾವಿರುವುದು ಕ್ಯಾಲಿಫೋರ್ನಿಯಾದ ಮಧ್ಯ - ಕಡಲತೀರದ ಆಸುಪಾಸಿನಲ್ಲಿ. ಇದಕ್ಕೆ ಸಲಿನಾಸ್/ಮಾಂಟೆರೆ ಏರಿಯಾ ಅಂತ ಕರೆಯುತ್ತಾರೆ. ಅಮೇರಿಕಾದಲ್ಲಿ ಇದೊಂದು ಸುಂದರ ಪ್ರವಾಸಿಗರ ತಾಣ. ನಿಮಗೆಲ್ಲಾ ನಮ್ಮ ಊರಿನ ಪರಿಚಯ ಮಾಡಿಸುವ ಉದ್ಧೇಶವೇ ಈ ಬರಹಗಳ ಸರದಿ..... ಈ ಬರಹಗಳನ್ನು ಓದಿದ ನಂತರ ದಯವಿಟ್ಟು ನಿಮ್ಮ ಅನಿಸಿಕೆಗಳನ್ನೆಲ್ಲಾ ಬರೆಯುವುದು ಮರೆಯಬೇಡಿ.

ಮಾಂಟೆರೆ ಒಂದು ಕೋಸ್ಟಲ್ ಸಿಟಿ, ಅಲ್ಲಿಂದ ಸ್ವಲ್ಪ ಒಳಗಡೆ ಬಂದರೆ (ಸುಮಾರು ೧೭ ಮೈಲಿ) ಸಲಿನಾಸ್ ಸಿಗುತ್ತದೆ (ಇನ್ಲ್ಯಾಂಡ್ ಸಿಟಿ). ಸಲಿನಾಸ್ ನಲ್ಲಿ ಜಾನ್ ಸ್ಟೈನ್ಬೆಕ್ ಮ್ಯೂಸಿಯಮ್, ಸ್ಟೈನ್ಬೆಕ್ ಸೆಂಟರ್ ಪ್ರವಾಸಿಗರು ನೋಡಲೇಬೇಕಾದ ಸ್ಥಳಗಳಲ್ಲೊಂದು. ಜಾನ್ ಸ್ಟೈನ್ಬೆಕ್ ಅಮೇರಿಕಾದ ಸುಪ್ರಸಿದ್ಧ ಸಾಹಿತಿ, ನೋಬಲ್ ಪ್ರೈಸ್ ಜೊತೆಗೆ ಅನೇಕ ಪ್ರಶಸ್ತಿಗಳ ವಿಜೇತರು. ಅವರ ಬಗ್ಗೆ ಹೆಚ್ಚಿನ ಮಾಹಿತಿಗೆ ಕೊಂಡಿಯನ್ನು ಕ್ಲಿಕ್ಕಿಸಿ.

http://www.steinbeck.org/MainFrame.html

ಚಿತ್ರ: ಮಾಂಟೆರೆ ಕಡಲತೀರ, "ಸೀಲಯನ್" ಗಳು ದೊಡ್ಡ ಬಂಡೆಯ ಮೇಲೆ ಬಿಸಿಲುಕಾಯಿಸುತ್ತಾ ವಿಶ್ರಾಂತಿ ಪಡೆಯುತ್ತಿವೆ. ಇವು ಒಂದು ತರಹ ನಿಶಾಚರಿಗಳು, ರಾತ್ರಿಯಲ್ಲಿ ಚಟುವಟಿಕೆಯಿಂದ ಇದ್ದು, ಡೇ ಟೈಮಲ್ಲಿ ಸೋಮಾರಿಕಟ್ಟೆ ಮೇಲೆ ಕೂತು ಜೋರಾಗಿ (ಹೈ ಪಿಚ್) ಕೂಗುತ್ತವೆ ( ಆಲ್ದೋ ನಾಟ್ ಮ್ಯೂಸಿಕಲ್!!!!!)

ಚಿತ್ರಕೃಪೆ : ಡಾ. ಕೃಷ್ಣ ಸುಬ್ಬರಾವ್.

Rating
No votes yet

Comments