ಕೂಡಲಿ ಕ್ಷೇತ್ರ ದರ್ಶನ

ಕೂಡಲಿ ಕ್ಷೇತ್ರ ದರ್ಶನ

ಕೂಡಲಿ ಶಿವಮೊಗ್ಗ ಜಿಲ್ಲೆಯ ತುಂಗಾ-ಭದ್ರ ನದಿಗಳ ಸಂಗಮದಲ್ಲಿರುವ ಪುಣ್ಯ ಕ್ಷೇತ್ರ. ಆದಿ ಶಂಕರಾಚಾರ್ಯರು ಶಾರದಾಂಬೆಯನ್ನು ಶ್ರಂಗೇರಿಗೆ ಕರೆದುಕೊಂಡು ಹೋಗುವಾಗ ದೇವಿಯ
ಗೆಜ್ಜೆ ಸದ್ದು ಕೇಳಿಸದೆ ತಿರುಗಿ ನೋಡಿದಾಗ ದೇವಿ ಈ ಸ್ಥಳದಲ್ಲಿಯೇ ನಿಂತುಬಿಡುತ್ತಾಳೆ. ಪರಿಪರಿಯಾಗಿ ಸ್ತುತಿಸಿ ದೇವಿಯನ್ನು ಪುನ: ಶ್ರಂಗೇರಿಗೆ ಕರೆದೊಯ್ಯುವಲ್ಲಿ ಅವರು ಯಶಸ್ವಿಯಾಗುತ್ಯತಾರೆ. ಶಾರದಾಂಬೆ ಅಲ್ಲಿ ನಿಂತ ಕುರುಹಾಗಿ ಶ್ರೀ ಚಕ್ರವನ್ನು ವಿಧಿವತ್ತಾಗಿ ರಚಿಸಿ, ಪೂಜಾದಿಗಳಿಗೆ ವ್ಯವಸ್ಥೆಮಾಡಿ ಮುಂದೆ ತೆರಳುತ್ತಾರೆ. ಇಲ್ಲಿರುವ ನಿಂತಿರುವ ಶಾರದಾ ವಿಗ್ರಹ ಬಲು ಸುಂದರವಾಗಿದೆ. ಇಲ್ಲಿಯ ಕ್ಷೇತ್ರ ಮಹಿಮೆ , ಪುರಾಣದ ಹಿನ್ನೆಲೆ ಬಹಳ ಮಂದಿಗೆ ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಶಿವಮೊಗ್ಗೆಯ ಕೂಡಲಿ ಜಗನ್ನಾಥ ಶಾಸ್ತ್ರಿಗಳು "ಕೂಡಲಿ ಕ್ಷೇತ್ರ ದರ್ಶನ" ವೆಂಬ ಗ್ರಂಥವನ್ನು ರಚಿಸಿದ್ದಾರೆ. ಹೊರರಾಜ್ಯದವರಿಗೆ ಮತ್ತು ವಿದೇಶದ ಆಸಕ್ತರಿಗೆ ಉಪಯೋಗವಾಗಲೆಂದು ಅದರ ಇಂಗ್ಲಿಷ್ ಭಾಷಾಂತರವನ್ನು ನಾನು (ಕವಿ ಸುರೇಶ್) ಮಾಡಿದ್ದೇನೆ. ಈ ಎರಡೂ ಪುಸ್ತಕಗಳು ದಿನಾಂಕ 9.5.2009 ರಂದು ಶಿವಮೊಗ್ಗೆಯ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಕೂಡಲಿ ಮಹಾ ಸಂಸ್ಥಾನದ ಕಿರಿಯ ಪೀಠಾಧೀಪತಿಗಳಾದ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳವರ ಅಮ್ಋತ ಹಸ್ತದಿಂದ ಲೋಕಾಪಱಣೆಯಾಯಿತು.

2008 ರಲ್ಲಿ ಸಂಭವಿಸಿದ ಪುಷ್ಕರೋತ್ಸವದ ಸಂದಭಱದಲ್ಲಿ ದೇಶದ ವಿವಿಧ ಬಾಗಗಳಿಂದ ಸಾವಿರಾರು ಭಕ್ತರು ಈ ಕ್ಷೇತ್ರದ ತುಂಗ-ಭಧ್ರ ಸಂಗಮದಲ್ಲಿ ಮಿಂದು ಪುನೀತರಾಗಿದ್ದಾರೆ. ಈ ಪುಷ್ಕರ ಪವಱದ ಅವಧಿಯಲ್ಲಿ ಬ್ರಹ್ಮನ ವರಪ್ರಸಾದದಿಂದ ಭಾರತದ ಕೆಲವು ಮಹಾನದಿಗಳಲ್ಲಿ ಸಕಲ ದೇವತೆಗಳ ಮತ್ತು ಗಂಗಾದಿ ಸಕಲ ನದಿಗಳ ಸಾನ್ನಿಧ್ಯವುಂಟಾಗುತ್ತದೆ. ಇದನ್ನು ಪುಣ್ಯಕಾಲವೆಂದೂ ಕರೆಯುತ್ತಾರೆ. ಗುರುಗ್ರಹವು ಒಂದು ರಾಶಿಯಲ್ಲಿ ಒಂದು ವರುಷ ಇರುತ್ತಾನೆ. ಹಾಗೆ ಹನ್ನೆರಡು ರಾಶಿಗಳ ಸಂಚಾರವನ್ನು ಪೂರ್ಣಗೊಳಿಸಲು ಆ ಗ್ರಹಕ್ಕೆ 12 ವರ್ಶ ಬೇಕಾಗುತ್ತದೆ. ಹಾಗಾಗಿ ಪ್ರತಿಯೊಂದು ನದಿಯಲ್ಲಿಯೂ 12 ವಷಱಗಳಿಗೊಮ್ಮೆ ಪುಷ್ಕರ ಪರ್ವವುಂಟಾಗುತ್ತದೆ. ಅದೇ ರೀತಿ, ಅರವತ್ತು ಸಾವಿರ ವಷಱಗಳ ಕಾಲ ಗಂಗಾ ನದಿಯಲ್ಲಿ ಮುಳುಗಿ ಸ್ನಾನ ಮಾಡುವುದರಿಂದ ಯಾವ ಪುಣ್ಯಫಲ ಪ್ರಾಪ್ರವಾಗುತ್ತದೆಯೋ, ಆ ಫಲವು ಕರ್ಕಾಟಕ ರಾಶಿಯಲ್ಲಿ ಸೂರ್ಯನು ಇರುವಾಗ ಅಂದರೆ ದಕ್ಷಿಣಾಯನ ಪುಣ್ಯಕಾಲದ ದಿನದಿಂದ ಒಂದು ತಿಂಗಳ ಕಾಲದಲ್ಲಿ ಒಂದು ಸಲ ತುಂಗಾಭದ್ರಾನದಲಿಯಲ್ಲಿ ಸ್ನಾನ ಮಾಡುವುದರಿಂದ ಪ್ರಾಪ್ತವಾಗುತ್ತದೆ ಎಂದೂ ಹೇಳಲಾಗಿದೆ.

ಕೂಡಲಿ ಕ್ಷೇತ್ರ ಒಂದು ತ್ರಿಕೋಣಾಕ್ಋತಿಯ ಕ್ಷೇತ್ರ. ಇಲ್ಲಿ 11 ಶಿವಾಲಯಗಳು ಇರುವುದರಿಂದ ಇದನ್ನು ಏಕಾದಶರುದ್ರಕ್ಷೇತ್ರ ವೆಂದೂ ಕರೆಯುತ್ತಾರೆ. ಈ ಸಂಗಮ ಸ್ಥಳದಲ್ಲಿ ಅನೇಕ ಪುಣ್ಯತೀಥಱಗಳಿದ್ದು - ಪಿಶಾಚ ವಿಮೋಚನ ತೀರ್ಥ, ಪಾವಕ ತೀರ್ಥ ಇತ್ಯಾದಿ - ಇಲ್ಲಿ ಸ್ನಾನ ಮಾಡುವುದರಿಂದ ವಿಶೇಷವಾದ ತೊಂದರೆಗಳಿಂದ ಬಿಡುಗಡೆಯಾಗುತ್ತದೆ ಎಂಬ ನಂಬಿಕೆ ಇದೆ. ಪುರಾಣದ ಕಥೆಗಳು ಕೂಡ ಇವನ್ನು ಪುಷ್ಟೀಕರಿಸುತ್ತವೆ. ಪಾವಱತಿ ದೇವಿ ಪಿಶಾಚ ಶಾಪದಿಂದ ಇಲ್ಲಿ ಮಿಂದು ಮುಕ್ತವಾಗಿದ್ದು, ಶ್ರೀ ರಾಮನು ಪ್ರೇತಭಾದೆಯಿಂದ ಬಿಡುಗಡೆಯಾಗಲು ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ, ಪೂಜಿಸಿ, ಅನುತ್ರಹಿತನಾಗಿದ್ದು, ಮುಂತಾದ ಪುರಾಣ ಕಥೆಗಳನ್ನು ಈ ಪುಸ್ತಕದಲ್ಲಿ ಸವಿವರವಾಗಿ ಮಂಡಿಸಲಾಗಿದೆ.

ಪುಣ್ಯಕ್ಷೇತ್ರಗಳಿಗೆ ಹೋಗುವಾಗ ಅಲ್ಲಿನ ಇತಿಹಾಸ, ಪುರಾಣ ಮತ್ತು ಧಾರ್ಮಿಕ ಹಿನ್ನೆಲೆಗಳ ಅರಿವಿದ್ದರೆ ಆ ಭೇಟಿಗಳು ಹೆಚ್ಚು ಅರ್ಥಪೂರ್ಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಈ ಪುಸ್ತಕ ನಿಜಕ್ಕೂ ಒಂದು ಸಂಗ್ರಹಯೋಗ್ಯ ಗ್ರಂಥವೆಂದರೆ ತಪ್ಪಾಗಲಾರದು

ಪುಸ್ತಕಗಳು ಸಿಗುವ ಸ್ಥಳ; ಶ್ರೀ ಕೂಡಲಿ ಜಗನ್ನಾಥ ಶಾಸ್ತ್ರಿ, ಶ್ರೀ ಕ್ಋಪಾ ಪ್ರಕಾಶನ, 1ನೇ ತಿರುವು, ಎ.ಆರ್.ಬಿ. ಕಾಲೋನಿ, ಶಿವಮೊಗ್ಗ - ದೂ: 08182-254217
ಕವಿ ವೆಂ. ಸುರೇಶ್, "ಸೌಪರ್ಣಿಕಾ", 3ನೇ ಮುಖ್ಯ ರ ಸ್ತೆ, 3ನೇ ಅಡ್ಡ ರಸ್ತೆ, ಬಸವೇಶ್ವರನಗರ, ಶಿವಮೊಗ್ಗ - ದೂ;94489-32866

ಬೆಲೆ: ರೂ>40/-

Rating
No votes yet

Comments