ನಾ ಸತ್ತಂತೆ ನಟಿಸಿದಾಗ!

ನಾ ಸತ್ತಂತೆ ನಟಿಸಿದಾಗ!

ನಾನೊಮ್ಮೆ ಯೋಚಿಸಿದ್ದುಂಟು 
ನಾನು ಸತ್ತಂತೆ ನಟಿಸ ಬೇಕು| 
ಹಾರ ತುರಾಯಿಗಳ ಭಾರದಿಂದ ಬಳಲಿ ಹೋಗ ಬೇಕು| 
ನನ್ನ ಬಂಧುಬಳಗ,ಸ್ನೇಹಿತರು,ಹಿತಚಿಂತಕರು, 
ಸಾಹಿತ್ಯ ಕ್ಷೇತ್ರದ ಮಿತ್ರರು ಜಾತ್ರೆ ಯೋಪಾದಿಯಲಿ ಸೇರುವುದ ಕಿರಿಗಣ್ಣಿನಿಂದಲೇ  ನೋಡಬೇಕು|
ಅಣ್ಣ ತಮ್ಮ, ಅಕ್ಕ ತಂಗಿಯರು
ಪತ್ನಿ ಪುತ್ರರು-ಮಿತ್ರರು
ಬಿಕ್ಕಿ ಬಿಕ್ಕಿ ಅಳುವಾಗ
ಎದ್ದು ಚಕಿತಗೊಳಿಸಬೇಕು!!
-೨-
ಅದೊಂದುದಿನ ಸಾಹಿತ್ಯವೇದಿಕೆಯಲಿ
ಕುಸಿದಾಗ ನರ್ಸಿಂಗ್ ಹೋಮ್ ಸೇರಿಸಿ 
ಮನೆಗೆ ಸುದ್ಧಿ ಮುಟ್ಟಿಸಿ ಕೈ ತೊಳೆದುಕೊಂಡ ಸನ್ಮಿತ್ರರು
ಮತ್ತೆ ಅತ್ತ ಸುಳಿಯಲಿಲ್ಲ|
ಅಕ್ಕ ತಂಗಿಯರು ಅಣ್ಣ ತಮ್ಮಂದಿರು  ಕರೆಯ ಸ್ವೀಕರಿಸಲಿಲ್ಲ|
ಉದ್ದುದ್ದ ಬರೆಯುತ್ತಿದ್ದ ಪತ್ರಿಕೆಗಳಿಗೆ ಸುದ್ಧಿಯಾಗಲಿಲ್ಲ|
ಬಂದವರು ಬೆರಳೆಣಿಕೆ ಜನ!
ಆರು ತಿಂಗಳಾಗಿದೆ, ಅಂಗಡಿ ಸಾಲ ತೀರಿಸಲಿಲ್ಲವಲ್ಲಾ!
ಹಾಲಿನವರ ಬಾಕಿ ಕೊಡಲಿಲ್ಲ ವಲ್ಲಾ!!
ಕೆಲಸದಾಕೆಯು ಬರುವುದನ್ನು ನಿಲ್ಲಿಸಿದರೂ 
ಹಿಂದಿನ ಬಾಕಿ ಕೊಟ್ಟಿರಲಿಲ್ಲ ವಲ್ಲಾ!!
ಬಂದಿದ್ದರು ವಸೂಲಿಗಾಗಿ,
ಆಫೀಸಿನಿಂದ ಬಂದಿದ್ದ ಪರಿಹಾರ ಮೊತ್ತದ ಹಂಚಿಕೆಗಾಗಿ!!                                                                                                

Rating
No votes yet

Comments