ಕಿರಣ

ಕಿರಣ

 

ಬದುಕು ಬರುಡಾಗಿ
ಜೀವ ಬೆತ್ತಲ್ಲಾಗಿ
ಬೆಲೆ ತೆತ್ತಲಾಗದಿದ್ದಾಗ
ಮೂಡಿದೆ ಈ ಕಿರಣ

ತೆರ ತೆರನಾಗಿ
ಮನಸ ಕೊರಯಹತ್ತಿದ
ತರ ತರದ ಚಿಂತೆಗಳಲೊಂದಾಗಿ
ಮೂಡಿದೆ ಈ ಕಿರಣ .

ಬಂಧು ಮಿತ್ರರ
ವಿಧ ವಿಧದ ಟೀಕೆಯ
ಎದುರುಸುತ್ತಿರುವಾಗಲೇ
ಬಾನಂಚಿನಲೆಲ್ಲೋ
ಮೂಡಿದೆ ಈ ಕಿರಣ

ಸ್ವಾಭಿಮಾನದ ಗೋಪುರ
ಕಳಚಿ ಬೀಳಲನುವಾದಾಗ
ಸಡ್ಡು ಹೊಡೆದು ಅದಕೆ
ಮೂಡಿದೆ ಈ ಕಿರಣ

ಇರುವುದೆಲ್ಲವ ಬಿಟ್ಟು
ಇರದಿದುದರ ಕಡೆ ಹೊರಟಾಗ ,
ಇರುವನ್ನೇ ಮರೆಸುವಂತೆ
ಮೂಡಿದೆ ಈ ಕಿರಣ

ಅದುವೇ ಈ ಬಾಳ ಕಿರಣ
ಛಲವೆಂಬ ಹೊಂಗಿರಣ
ಧೈರ್ಯ ,ಶ್ರದ್ದೆಗಳೆಂಬ ಆಶಾಕಿರಣ .

Rating
No votes yet

Comments