ಮದುವೆ ಎಂದರೆ ಹೀಗೆನಾ?

ಮದುವೆ ಎಂದರೆ ಹೀಗೆನಾ?

ಮದುವೆ ಎಂದಾಗ ಮದುವೆ ಆಗದವರಿಗೆ ಮೈ ಮನದಲ್ಲಿ ಪುಳಕ ತಂದರೆ ಈಗಾಗಲೇ ಮದುವೆ ಆದವರ ಮುಖದಲ್ಲಿ ಅದಕ್ಕೆ ವಿರುದ್ದವಾದ ಭಾವನೆ ಹುಟ್ಟಬಹುದು. ಇದರಲ್ಲಿ ಪ್ರೇಮ ವಿವಾಹ, ಆದರ್ಶ ವಿವಾಹ, ನಿಶ್ಚಯಿಸಿದ ವಿವಾಹ ಹಾಗು ಇತ್ತೀಚೆಗೆ ಕಂಡುಬರುವ ಇಂಟರ್ ನೆಟ್ ವಿವಾಹ ಹೀಗೆ ಇದರ ವಿಧಗಳು ಬೆಳೆಯುತ್ತಾ ಹೋಗುತ್ತದೆ. ನೀವು ಕೂಡ ಇದಕ್ಕೆ ಸೇರಿಸಬಹುದು. ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಅದನ್ನು ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ ಎಂದು ಹೇಳುವ ಜನರೇ ಅವನು/ಅವಳು ಕೈ ಕೊಟ್ಟರು ಎಂದು ಗೊಳಾಡಿಕೊಂಡಿದ್ದು ಇದೆ. ಇಲ್ಲಿ ಹಠಕ್ಕೆ ಬಿದ್ದು ಮದುವೆಯಾಗಿ "ನಾನೊಂದು ತೀರಾ ನೀನೊಂದು ತೀರಾ" ಎಂದು ಸಂಸಾರ ಮಾಡಿದ್ದು ಇದೆ. ಒಟ್ಟಿನಲ್ಲಿ ಹೇಳುದಾದ್ರೆ ಮದುವೆ ಎನ್ನುವುದು ಬದುಕಿನ ಒಂದು ಅಂಗವಾಗಬೇಕು.
ಮದುವೆ ಎನ್ನುವುದು ಎರಡು ಜೀವಗಳ ಮಿಲನ, ಇಬ್ಬರು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಬದುಕಬೇಕು, ಬದುಕೆಂಬ ಬಂಡಿಯ ಚಕ್ರವು ಸರಿಯಾದ ದಿಕ್ಕಿನತ್ತ ಸಾಗಬೇಕು ಇದು ಹಿರಿಯರ ಮಾತು. ಇದು ಸತ್ಯವಾದರೂ ಏಸ್ಟೊ ಕಡೆ ಇದಕ್ಕೆ ವಿರುದ್ದ ದಿಕ್ಕಿನತ್ತ ಸಾಗುತ್ತಿರುವು ಅಷ್ಟೇ ಸತ್ಯ.
ಇದಿಷ್ಟು ಮದುವೆ ಬಗ್ಗೆ ಅವರಿವರು ಹೇಳಿದ ಮಾತುಗಳಾಯಿತು, ಆದರೆ ನಮ್ಮಲ್ಲಿ(ಉಡುಪಿ ಜಿಲ್ಲೆ) ಮದುವೆ ಎಂದರೆ ದೊಡ್ಡಸ್ತಿಕೆ ತೊರಿಸಿಕೊಡುವ ಒಂದು ಮಾಧ್ಯಮವಾಗಿ ಪರಿಣಮಿಸಿದೆ. ಅದರಲ್ಲೂ ಬಂಟ್ಸ್ ಸಮುದಾಯಲ್ಲಿ ಮದುವೆ ಎನ್ನುವುದು ಹಣ, ಬಂಗಾರ, ಬಟ್ಟೆಗಳ ಪ್ರದರ್ಶನಕ್ಕೆ ಒಂದು ದಾರಿ. ಆದ್ದರಿಂದಲೇ ಇಲ್ಲಿ ಮೆಟ್ಟಿಗೊಂದು ಚಿನ್ನದ ಅಂಗಡಿ, ಬಟ್ಟೆಯಂಗಡಿ. ಮದುವೆ ದಿನದಂದು ಮಹಿಳೆಯರು ಕೊರಳ ತುಂಬಾ ಬಂಗಾರ! (ಬೇರೆಯವ ಮನೆಯಿಂದ ಬೇಡಿ ತಂದಾದರೂ), ಅರ್ಧ ಗಂಟೆಗೊಮ್ಮೆ ಬದಲಾಯಿಸುವ ಸೀರೆ!! ಇವರು ಮದುವೆ ಬಂದಿದ್ದಾರಾ? ಅಥಾವಾ ತಾವು ಏನು ಕಮ್ಮಿ ಎಂದು ಹೇಳುವುದಕ್ಕೆ ಬಂದಿದ್ದಾರಾ? ಎಂಬ ಸಂಶಯ ಹುಟ್ಟದೆ ಇರಲಾರದು. ಹೆಣ್ಣು ಹೆತ್ತವರು ಎಂದರೆ ಮುಗಿಯಿತು ತಾವೇ ಎಲ್ಲಾ ಜವಾಬ್ದಾರಿ ಹೊತ್ತುಕೊಂಡು ತಗ್ಗಿ ಬಗ್ಗಿ ನಡೆಯಬೇಕು. ತಾವು ಬಡವರಾಗಿದ್ದರೂ ಸಾಲ ಮಾಡಿಯಾದರೂ ಮದುವೆ ಕಾರ್ಯಕ್ರಮ ಚೆನ್ನಾಗಿ ನಡೆಸಿಕೊಡಬೇಕು, ಗಂಡಿನ ಕಡೆಯವರನ್ನು ನಿರಂತರ ಗಮನಿಸಿಕೊಂಡು ಅವರ ಬೇಕು ಬೇಡಗಳಿಗೆ ಸ್ಪಂದಿಸಬೇಕು. ನಾನು ಹೀಗೆ ಹೇಳಬಹುದಾ? " ಬ್ರಾಹ್ಮಣರಲ್ಲಿ ಗಂಡಾಗಿ ಹುಟ್ಟ ಬಾರದು, ಶೆಟ್ರರಲ್ಲಿ ಹೆಣ್ಣಾಗಿ ಹುಟ್ಟ ಬಾರದು"
ಬಂಟ್ಸ್ ಸಮುದಾಯದಲ್ಲಿ ವರದಕ್ಷಿಣೆ ಎನ್ನುವುದು ಕೇಳುವುದೇ ಬೇಡ ಏಕೆಂದರೆ ಇಲ್ಲಿ ಕೇಳುವುದು ಲಕ್ಷಕ್ಕಿಂತ ಮೇಲೆ ಇವರು ಒಂದೊಂದು ಉದ್ಯೋಗಕ್ಕೆ ಒಂದೊಂದು ರೇಟು. ಅತಿ ಕಡಿಮೆ ರೇಟಿನಲ್ಲಿ ಸಿಗುವುದು ರೈತ ( ಮನೆಯಲ್ಲಿ ಇರುವವನು) ಇಲ್ಲಿ ವರದಕ್ಷಿಣೆಯ ಬೆನ್ನ ಹತ್ತುವವರು ಅತೀ ಬುದ್ಧಿವಂತರು ಹಾಗು ವಿದ್ಯಾವಂತರು.
ಇಂದು ಸಾಂಪ್ರದಾಯಿಕ ಮದುವೆ ಎನ್ನುವುದು ಕಾಣಸಿಗುವುದೇ ದುಸ್ತರವಾಗಿದೆ. ಹಿಂದೆಯಾದರೆ ಮನೆ ಮದುವೆ ಪ್ರಚಲಿತವಿತ್ತು ಇಲ್ಲಿ ಇಡಿ ಊರಿಗೆ ಊರೇ ಭಾಗವಹಿಸಿ ಸಂಭ್ರಮ ಪಡುತ್ತಿತ್ತು. ಮದುವೆ ಮನೆಯ ಬೇರೆ ಬೇರೆ ಜವಾಬ್ದಾರಿಗಳು ಊರಿನವರೇ ವಹಿಸಿಕೊಂಡು ಪರಸ್ಪರ ಹೊಂದಾಣಿಕೆಯಿಂದ ಬಾಳುತ್ತಿದ್ದರು. ಈಗ ಮದುವೆ ಎನ್ನುವುದು ನೇರವಾಗಿ ಪಟ್ಟಣಕ್ಕೆ ವರ್ಗಾವಣೆಗೊಂಡಿದೆ. ಮದುವೆಗೆ ಹೋಗುವುದು ಅವರಿಗೆ ಬೇಜಾರು ಆಗುತ್ತೆ ಆಥಾವ ಊಟಕ್ಕೆ ಎನ್ನುವ ಮಟ್ಟಕ್ಕೆ ಬಂದಿದೆ. ಏಳೇಳು ಜನ್ಮಕ್ಕೆ ನೀನೇ ಎಂದು ಸಪ್ತಪದಿ ತುಳಿಯುವ ಸಂಬಂಧ ಏಳು ದಿನದಲ್ಲಿ ಕೊನೆಗೊಂಡಿದ್ದು ಇದೆ.

Rating
Average: 4 (2 votes)

Comments