ಅಮ್ಮ

ಅಮ್ಮ

ನಿನ್ ಒಡಲ
ಗರ್ಭದೊಳಗೆ ಪರಿ ಪರಿಯಾಗಿ
ನಾ ಹೊರಳಾಡಿದಾಗ
ನೋವಾಗಲಿಲ್ಲವೇ ನಿನಗೆ .

ಹೊರ ಜಗವ ನಾ
ನೋಡ ಅವಸರದಲ್ಲಿ
ನಿನ್ನುಸಿರೆ ನಿಲ್ಲುವನ್ತಾದಾಗ
ನೋವಾಗಲಿಲ್ಲವೇ ನಿನಗೆ

ಹಸಿದ ಹೊಟ್ಟೆಗೆ
ಅಮೃತದ ಹನಿ ನೀ
ಉಣಬಡಿಸ ಹೊರಟಾಗ
ನಾ ಮಾಡಿದ ಗಾಯದಿಂದ
ನೋವಾಗಲಿಲ್ಲವೇ ನಿನಗೆ

ನಾ ಮಾಡಿದ ತಪ್ಪಿಂದ
ಅಪ್ಪ ಹೊಡೆಯ ಬಂದಾಗ
ಅಡ್ಡ ಬಂದು ,ಆ ಪೆಟ್ಟು ನೀ ತಿಂದಾಗ
ನೋವಾಗಲಿಲ್ಲವೇ ನಿನಗೆ

ಅಯ್ಯೋ , ನಾನೆಂತ ಮೂರ್ಖಾನಾದೆ ಇಂದು
ನನ್ನವಳ ಒಂದು ನೋವಿನ ಮುಂದೆ
ನಿನ್ನ ಜೀವದ ನೋವ ಅರಿಯದೆ
ನೋವಯಿತಲ್ಲ ಅವಳಿಗೆ ಅಂದು ಬಿಟ್ಟೆನಲ್ಲ

ನಿನ್ನ ನೋವೆ ಅರಿಯದ ನಾನು
ನಲ್ಲೆಯ ನೋವ ಅರಿತೇನು
ಪ್ರಯೋಜನ ,ಇದಕ್ಕಿಂತ
ಇನ್ನೇನು ಬೇಕು ನೋವಾಗಲು ನಿನಗೆ ಅಲ್ಲವೇ ?

Rating
No votes yet

Comments