ನೋಡು ಬಾ ನಮ್ಮೂರ!................೨

ನೋಡು ಬಾ ನಮ್ಮೂರ!................೨

ಭಾರತವು ಹಳ್ಳಿಗಳ ದೇಶ, ಹಳ್ಳಿಗಳ ಮುಖ್ಯ ಉದ್ಯೋಗ, ಉದ್ಯಮೆ ಕೃಷಿಗಾರಿಕೆ. "ವ್ಯವಸಾಯ" ನನಗೆ ತಿಳಿದಿರುವಂತೆ
ಮನುಕುಲದ ಮೊಟ್ಟ ಮೊದಲಿಂದಲೂ ಕಂಡುಕೊಂಡಿರುವ, ಸನಾತನ ಕಾಲದಿಂದಲೂ ಬಳಕೆಯಲ್ಲಿರುವ ಉದ್ಯೋಗ. ಇದು ವಂಶ
ಪಾರಂಪರೆಯಾಗಿ ಪ್ರತಿತಲೆಮಾರಿಗೂ ಹಿಂದಿನ ತಲೆಮಾರಿಂದ ಬಳುವಳಿಯಾಗಿ ಬಂದಿರುವುದೂ ಸಹಜ. ಸಣ್ಣ ಊರಿನಲ್ಲಿ
ಹುಟ್ಟಿ, ಹೊಲ, ತೋಟಗಳ ಹಸಿರು, ತಂಪು ತರುವ ಹೊಲದ ಗಾಳಿಯ ನಡುವೆ ಬೆಳೆದ ನನಗೆ, ಅಮೆರಿಕಾದ ಅತಿ ಯಾಂತ್ರಿ
ಕತೆಯ ಅಮಲಿನಲ್ಲೂ ಈ " ಹಸಿರು ತುಂಬಿದ ಹೊಲಗಳು, ತಂಗಾಳಿಯ ತೋಟಗಳ ಹಳ್ಳಿಯ ದೃಶ್ಯಗಳು (ಸೊ ಕಾಲ್ಡ್
ಕಂಟ್ರಿ ಲಿವಿಂಗ್) ಒಂದು ಬಳುವಳಿಯಾಗೇ ಬಂದಿದೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಈಗಿನ ಹೈ ಟೆಕ್ ಕಂಪ್ಯೂಟರ್
ಯಾಂತ್ರಿಕತೆಯ ಯಾಂತ್ರಿಕ ಜೀವನದ ಜಂಜಾಟದಲ್ಲಿ, ಹೊಲ ತೋಟಗಳನ್ನೆಲ್ಲಾ ನಾಶಮಾಡಿ ಮನೆ, ಮಹಡಿಗಳನ್ನು ಕಟ್ಟು
ತ್ತಿರುವ ಬೆಂಗಳೂರಲ್ಲಿ, ಬೇಸರ ಬಂದಾಗ (ಸಿಟಿ ಲೈಫ್) ನೋಡಲೂ ಹಸಿರು ಸಿಗುವುದಿಲ್ಲ . ಆದರೆ ಕ್ಯಾಲಿಫೋರ್ನಿಯದಲ್ಲಿ,
ಸಿಲಿಕಾನ್ ಕಣಿವೆ ಯಂತಹ ಹೈ ಟೆಕ್ ಬೆಳವಣೆಗೆ ಇದ್ದರೂ, ಕೃಷಿ ಕೈಗಾರಿಕೆ, ಸಂಶೋಧನೆ, ಅಭಿವೃದ್ಧಿ ಮತ್ತು ಅಳ
ವಡಿಕೆಗಳ ಮಹಾಪೂರ ಎಲ್ಲರನ್ನೂ ಮಾರುಗೊಳಿಸುವುದರಲ್ಲಿ ಸಂಶಯವೇ ಇಲ್ಲ. ಟೆಕ್ನಾಲಜಿ ಮತ್ತು ಕೃಷಿಗಾರಿಕೆ
ಎರಡನ್ನು ಸಮತೋಲನದಲ್ಲಿರಿಸಿರುವ ಕ್ಯಾಲಿಫೋರ್ನಿಯರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಹೈ ಟೆಕ್,
ಸಾಫ್ಟ್ ವೇರ್, ಟೆಕ್ನಾಲಜಿ ಬೆಳೆಯುವುದಕ್ಕೋಸ್ಕರ ಕೃಷಿಗಾರಿಕೆ, ಕೃಷಿಅಭಿವೃದ್ಧಿ ಸಾಯಬೇಕಾಗಿಲ್ಲ. ಕೃಷಿಗಾರಿಕೆ
ದೇಶದ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ.
ಕೃಷಿ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಜಗತ್ತಿನಲ್ಲೇ ಅತ್ಯಂತ ಉನ್ನತ ಸ್ಥಾನದಲ್ಲಿರುವ ದೇಶ ಅಂದರೆ ಅಮೇರಿಕ (ಯು. ಎಸ್. ಏ.).
ಅದರಲ್ಲೂ ಕ್ಯಾಲಿಫೋರ್ನಿಯ, ಕೃಷಿ ಅಭಿವೃದ್ಧಿ, ಸಂಶೋಧನೆ ಮತ್ತು ಅದರ ಅಳವಡಿಕೆಯಲ್ಲಿ ಅದ್ವಿತೀಯವಾಗಿದೆ.
ಇದಕ್ಕೆ ಸಾಕ್ಷಿಯಾಗಿ, ಇಲ್ಲಿರುವ ರಾಜ್ಯಾದ್ಯಾಂತ ಶೋಭಿಸುತ್ತಿರುವ ಹೊಲ, ಗದ್ದೆ, ಹಣ್ಣಿನ ತೋಟಗಳು,
ಹೂವಿನ ತೋಟಗಳು, ಹಸಿರಿನ ಎಲೆಗಳ ಆರ್ನಮೆಂಟಲ್ ಪ್ಲಾಂಟ್ಸ್ ನರ್ಸರಿಗಳು , ವೈವಿಧ್ಯಮಯವಾದ ತರಕಾರಿಗಳ
ಚೌಕಗಳು ಕ್ಯಾಲಿಫೋರ್ನಿಯಾದ ಅಡ್ಡಗಲಕ್ಕೂ ಆವರಿಸಿ ನಿಂತಿವೆ. ೧೫ ಪ್ಲಸ್ ಬಿಲ್ಲಿಯನ್ ಡಾಲರ್ ಪ್ರತಿ ವರ್ಷವೂ
ಕೃಷಿ ಕೈಗಾರಿಕೆ ಇಂದ ಕ್ಯಾಲಿಫೋರ್ನಿಯಾದ ರಾಜ್ಯದ ಆದಾಯಕ್ಕೆ ಸಂದಾಯವಾಗುತ್ತಿದೆ. ಅದರಲ್ಲೂ ಮಧ್ಯ
ಕ್ಯಾಲಿಫೋರ್ನಿಯ ಕಡಲಿನ ಊರಾದ ಮಾಂಟೆರೇ ಪಕ್ಕದಲ್ಲಿರುವ ಸಲಿನಾಸ್ ನ
ಮುಕ್ಕಾಲು ಭಾಗ ಹೊಲ, ಗದ್ದೆ, ತರಕಾರಿ ಚೌಕಗಳ ಮತ್ತು ಸೋ ಕಾಲ್ಡ್ ಆರ್ಚರ್ಡ್ಸ್ ಗಳ ಹಚ್ಚ ಹಸಿರಿಂದ
ಕಂಗೊಳಿಸುತ್ತಿದೆ. ಸಲಿನಾಸ್ ನಲ್ಲಿ ಜಗತ್ತಿನ ಬೇರೇ ಎಲ್ಲಾ "ಲೆಟಸ್" ಬೆಳೆಯುವ ಪ್ರದೇಶಗಳಿಗಿಂತಲೂ ಹೆಚ್ಚಿನ
ವರಿಯಲ್ಲಿ "ಲೆಟಸ್" ( ಸಾಲಡ್ ಮೈನ್ ವೆಜಿಟಬಲ್) ಅನ್ನು ಬೆಳೆಯುತ್ತಾರೆ ( ಶೇ% ೬೦ ರಷ್ಟು ) ಆದಕಾರಣ ಸಲಿನಾಸ್ ಗೆ
" ಸಾಲಡ್ ಬೌಲ್ ಆಫ್ ದ ವರ್ಲ್ಡ್" ಎಂದು ಹೆಸರಿದೆ.
ಸಲಿನಾಸ್ ನಲ್ಲಿ ಬೆಳೆಯುವ ವಿಧ ವಿಧವಾದ ಲೆಟಸ್ಗಳು ಇಡೀ ಜಗತ್ತಿಗೇ ತಲಪುತ್ತದೆ.

ಚಿತ್ರದಲ್ಲಿರುವುದು ಒಂದು ತರಹ ಲೆಟಸ್ - (ಗ್ರೀನ್ ಲೀಫಿ ವೆಜಿಟಬಲ್) - ಸಾಲಡ್ ಮೈನ್ ವೆಜಿಟಬಲ್.

ಚಿತ್ರಕೃಪೆ - ಡಾ. ಕೃಷ್ಣ ಸುಬ್ಬರಾವ್.

Rating
No votes yet

Comments