ಭೂತಾಯಿ

ಭೂತಾಯಿ

ಮುಸ್ಸಂಜೆಯ ಸಮಯದಲಿ
ಮುಂಗಾರಮಳೆಯೊಂದಿಗೆ
ಭುವಿಗೆ ಕಣ್ಣು ಹೊಡೆಯುತ್ತಿರುವನಲ್ಲ
ಆ ಮೇಘರಾಜ .

ನಾಚಿ ನವೀರಾದ ಭೂತಾಯಿ
ಸರಿಯುತ್ತಿರುವಳು ಅವನ
ತೆಕ್ಕೆಗೆ ,ಕತ್ತಲಾಗುತ್ತಿರುವ ಈ ಹೊತ್ತಿಗೆ

ತಮ್ಮಿಬ್ಬರ ಮಿಲನಕ್ಕೆ
ಅಡ್ಡಿಬರದಿರೆಂದು ಗುಡುಗಿ
ಎಚ್ಚರಿಸುತ್ತಿಹನು ಮೇಘರಾಜ
ಈ ಜೀವ ಸಂಕುಲಕ್ಕೆ

ಹತ್ತಿರ ಬಂದ ನಲ್ಲೆಯ
ಹಸಿರ ಹಾಸಿಗೆಯ ಮೇಲೆ
ಕೂರಿಸಿ ಮೆತ್ತನೆಯ ಹನಿ ಸುರಿಸಿ
ತಲೆ ಸವರುತಿಹನು

ಅಗೋ ನೋಡಲ್ಲಿ , ಜೀವ ಸಂಕುಲದ
ಒಳಿತಿಗೆ ತನ್ನ ಜೀವವನ್ನೇ
ಅರ್ಪಿಸಿಹಳು ಭೂತಾಯಿ ಅವನಿಗೆ

ಅಯಿತಿಬ್ಬರ ಮಿಲನ
ಭುಕುಲದ ಒಳಿತಿಗೆ
ಮನುಕುಲದ ಮರು ಹುಟ್ಟಿಗೆ
ಸೃಷ್ಟಿಯ ಸಮತೋಲನಕ್ಕೆ .

Rating
No votes yet

Comments