ಬಾ ಗೆಳತಿ

ಬಾ ಗೆಳತಿ

ನನ್ನೀ ಉಸಿರಿಗೆ
ನಿನ್ನ ಬಿಸಿ ಉಸಿರ ಬೆರೆಸಿ
ಈ ಹಸಿರಲಿ
ಒಂದಾಗೋಣ ಬಾ

ಬೆಳದಿಂಗಳ ಚಂದ್ರಮನ
ಬೆಳಕಲ್ಲಿ ಒಮ್ಮೆ
ಬಿಳಿ ಹಾಲ ನೊರೆಯಂತೆ
ಉಕ್ಕೋಣು ಬಾ

ಆ ನದಿಯ ದಡದಲ್ಲಿ
ನೀರಿನ ಬುಗ್ಗೆಯ ನಡುವೆ ಕುಳಿತು ,
ಆ ಜ್ವಾಲಾಮುಖಿ
ಲಾವಾರಸದಂತಾಗೋಣೂ ಬಾ

ಆ ಹೂವಿನ ತೋಟದಲಿ
ಹೂವೊಳಗೆ ಹೊಕ್ಕು
ಮಕರಂದ ಹೀರುವ ಜೇನಾಗೋಣೂ ಬಾ

ಜಗದ ಎಲ್ಲೆಯ ಮರೆತು
ಬಾನಂಚಿಗೆ ಚುಂಬಿಸುವ
ಹಕ್ಕಿ ಆಗೋಣ ಬಾ ಒಮ್ಮೆ ಗೆಳತಿ

ಜಗದ ಇರುವನ್ನೇ
ಮರೆಸುವ ಈ ವಜ್ರ ಬಾಹುಬಂಧನದೊಳಗೆ
ಬಾ ಗೆಳತಿ ಒಮ್ಮೆ ,ನೀ ಬಾ ಗೆಳತಿ .

Rating
No votes yet

Comments