ಗೌಡರ ಗಲಾಟೆ

ಗೌಡರ ಗಲಾಟೆ

ಈ‌ ದೇವೇಗೌಡ-ನಾರಾಯಣಮೂರ್ತಿ ತಿಕ್ಕಾಟ ರಾಜಕಾರಣಿಗಳ ಮತ್ತು ಉದ್ಯೋಗಪತಿಗಳ ನಡುವೆ ವಿರಳವಾದ ತಿಕ್ಕಾಟದ ಒಂದು ಉದಾಹರಣೆ. ಸಾಧಾರಣವಾಗಿ ರಾಜಕಾರಣಿಗಳು ಮತ್ತು ಉದ್ಯೋಗಪತಿಗಳು ಸಾಮರಸ್ಯದಿಂದಿದ್ದು ಒಬ್ಬರಿಗೊಬ್ಬರು ಸಹಾಯಮಾಡಿಕೊಂಡಿರುತ್ತಾರೆ.

ಗೌಡರಿಗೆ ನಾಡಿನ ಪ್ರಧಾನಿಯಾಗಿದ್ದವರಿಗಿರಬೇಕಾದ ಘನತೆವೆತ್ತ ನಡವಳಿಕೆಯಿಲ್ಲ. ಅವರು ಪ್ರಧಾನಿಯಾದಾಗ ದೇಶಕ್ಕೆ ಮಹತ್ತರ ಸೇವೆಯನ್ನೇನೂ ಸಲ್ಲಿಸಿಲ್ಲ. ನಾರಾಯಣಮೂರ್ತಿಯವರ ಕೆಲಸ ಪಟ್ಟಣದಲ್ಲಿ ವಾಸಿಸುವ ಕೆಲವು ಜನರಿಗೆ ಉದ್ಯೋಗ ಒದಗಿಸಿದೆ ಹಾಗೂ ತೆರಿಗೆಯ ರೂಪದಲ್ಲಿ ರಾಜ್ಯದ ಬೊಕ್ಕಸಕ್ಕೆ ಹಣ ಬರುವಂತೆ ಮಾಡಿದೆ.

ಈ ಸಂದರ್ಭದಲ್ಲಿ ಗೌಡರು ಕೇಳಿರುವ ಪ್ರಶ್ನೆಗಳು ಸಮ್ಮತವಾಗಿವೆ. ಸರಕಾರದಿಂದ ಇನ್ಫೊಸಿಸ್ ಸಹಾಯ ಪಡೆದಿದೆಯೆಂದಾದರೆ ಅದರ ವಿವರ ಕೊಡುವುದರಲ್ಲಿ ಅವಮಾನವಿಲ್ಲ. ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ಸಾಕಷ್ಟು ಯೋಗದಾನವಿಲ್ಲವೆನ್ನುವ ಆರೋಪಕ್ಕೆ ಆಗಿರುವ ಪ್ರಗತಿಯನ್ನು ಉದಾಹರಿಸಬಹುದಾಗಿತ್ತು. ರಾಜೀನಾಮೆ ಕೊಡುವ ಕಾರಣವಿರಲಿಲ್ಲ.

ನನ್ನ ಅಭಿಪ್ರಾಯದಲ್ಲಿ ಆ ಪ್ರಶ್ನೆಗಳನ್ನು ಕೇಳಲು ಗೌಡರು ಸರಿಯಾದ ವ್ಯಕ್ತಿಯಲ್ಲ. ಅವರ ಆರೋಪಕ್ಕೆ ರಾಜೀನಾಮೆ ಕೊಡಬಾರದಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರೊ, ಸಮಾಜದ ಗಣ್ಯರೊ ಆರೋಪ ಮಾಡಿದ್ದರೆ ರಾಜೀನಾಮೆಗೊಂದು ಅರ್ಥವಿತ್ತು.

Rating
No votes yet

Comments