ಸಂಪದಿಗರಲ್ಲಿ ಮನವಿ

ಸಂಪದಿಗರಲ್ಲಿ ಮನವಿ

ಆತ್ಮೀಯ ಸಂಪದಿಗರೇ,
ನನಗೆ ಅಂತರ್ಜಾಲದ ಪರಿಚಯವಾಗಿದ್ದೇ ಸಂಪದದಿಂದ ಎಂದು ಹೇಳಬಹುದು. ಅದಕ್ಕಿಂತ ಮುಂಚೆ ಕೆಂಡಸಂಪಿಗೆಯಲ್ಲಿ ಒಂದು ಬರಹ ಪ್ರಕಟವಾಗಿತ್ತಾದರೂ ಅಲ್ಲಿ ನಾನು ಮುಂದುವರೆಯಲಿಲ್ಲ.ಕಾರಣ ನನ್ನ ಸ್ವಭಾವಕ್ಕೆ ಅದು ಸರಿಹೊಂದಲಿಲ್ಲ. ಈ ಪತ್ರ ಬರೆಯುವಾಗ ಅನೇಕರು ಮನಸ್ಸಿಗೆ ಚುಚ್ಚುವಂತೆ ಬರೆಯಬಹುದೆಂಬ ಅರಿವಿದೆ, ಆದರೂ ಬರೆಯದಿದ್ದರೆ ನನ್ನ ಮನಸ್ಸಿನಲ್ಲಿ ಬರೆಯ ಬೇಕಿತ್ತೆಂಬುದು ಉಳಿದು ಹೋಗುತ್ತೆ, ಹಾಗಾಗಬಾರದೆಂದು ಬರೆಯುವ ಸಾಹಸ ಮಾಡಿರುವೆ.
ನನ್ನ ವೈಯಕ್ತಿಕ ಕಾರಣಗಳಿಗಾಗಿ ಒಂದೆರಡು ತಿಂಗಳು ನಾನು ಅಂತರ್ಜಾಲದ ಸಂಪರ್ಕದಲ್ಲಿರಲಿಲ್ಲ. ಮೊನ್ನೆ ಮೊನ್ನೆ ಮತ್ತೆ ಪ್ರವೇಶಿಸಿದಾಗ ನಿತ್ಯ ಕಾಣುತ್ತಿದ್ದ ಕೆಲವರು ಕಾಣಲಿಲ್ಲ. ಅದರಲ್ಲಿ ರೂಪ ಬೆಂಗಳೂರು ಒಬ್ಬರು. ಚಾಮರಾಜರೂ ಕಾಣಲಿಲ್ಲ. ಆನಂತರ ಅವರ ಒಂದು ಬರಹ ದಲ್ಲಿಯೇ ಅವರ ಪರಿಸ್ಥಿತಿಯ ಅರಿವಾಯ್ತು.
ನಾನು ಸಂಪದದ ಸಂಪರ್ಕಕ್ಕೆ ಬಂದಮೇಲೆ ನೂರಾರು ಸಂಪದಿಗರು ಬಹಳ ಆತ್ಮೀಯರಾಗುತ್ತಾ ವೈಯಕ್ತಿಕವಾಗಿ ಸಂಪರ್ಕಕ್ಕೆ ಬಂದರು. ಅದರಿಂದ ಸಂಪದಕ್ಕೆ ನಾನು ಚಿರಋಣಿ. ಆದರೆ ಅದೆಷ್ಟೋ ಕಹಿ ಘಟನೆಗಳೂ ಕೂಡ ಆಗಿವೆ. ಯಾರು ಏನಾದರೂ ಹೇಳಲಿ, ಡಾ|| ಜ್ಞಾನದೇವ್ ಅಂತವರು ಒಂದಿಷ್ಟು ಸುವಿಚಾರಗಳನ್ನು ಮನುಷ್ಯನ ಸಮಾಧಾನವಾದ ಬದುಕಿಗೆ ಬೇಕಾದ್ದನ್ನು ಬರೆಯುತ್ತಿರುತ್ತಾರೆ. ನಮ್ಮಂತವರಿಗೆ ಅದು ಆಪ್ಯಾಯಮಾನವಾಗಿದೆ. ನನ್ನ ಅನಿಸಿಕೆಯಂತೆ ಯಾರಿಗೂ ವಿರುದ್ಧವಾಗೇನೂ ಇರುವುದಿಲ್ಲ. ಆದರೂ ಅಂತವರ ಬರಹಗಳಿಗೆ ಪ್ರತಿಕ್ರಿಯಿಸುವಾಗ ಬಹಳ ವೈಯಕ್ತಿಕವಾಗಿ ಪದಗಳನ್ನು ಬಳೆಸುತ್ತಾ , ಬುದ್ಧಿಗೇ ಪ್ರಾಶಸ್ತ್ಯ ಕೊಡುತ್ತಾ ,ಏನಾದರೂ ಮಾಡಿ ಚರ್ಚೆಯಲ್ಲಿ ಅವರನ್ನು ಸೋಲಿಸಲು ಪ್ರಯತ್ನ ಪಡುವುದನ್ನು ನಾನು ನೋಡಿದ್ದೇನೆ. ಉಳಿದ ಸಂಪದಿಗರಿಗೂ ಅದರ ಅರಿವಾಗಿದೆ. ಮನನೊಂದ ಡಾ|| ಜ್ಞಾನದೇವ್ ಸಂಪದದಿಂದ ಹೊರನಡೆದಿದ್ದರು. ಆದರೆ ನಮ್ಮಂತ ನೂರಾರು ಸಂಪದಿಗರು ಅವರಿಗೆ ವೈಯಕ್ತಿಕವಾಗಿ ಮೇಲ್ ಮಾಡಿ, ದೂರವಾಣಿ ಕರೆಮಾಡಿ ಅವರನ್ನು ಒತ್ತಾಯಿಸಿದ್ದರಿಂದ ವರು ಪುನ: ಬರೆಯಲು ಶುರು ಮಾಡಿದರು.
ಈಗ ರೂಪ ಬೆಂಗಳೂರು ಕಾಣುತ್ತಿಲ್ಲ, ಅವರನ್ನು ವಿಚಾರಿಸಲಾಗಿ, ನನಗೇಕೋ ಸಂಪದದಲ್ಲಿ ಬರೆಯ ಬೇಕೆನಿಸುತ್ತಿಲ್ಲ ವೆಂದರು. ಹೀಗೆಯೇ ಅದೆಷ್ಟು ಸಂಪದಿಗರು ಹೊರನಡೆದಿದ್ದಾರೋ.
ಕೆಲವರು  ಒಂದುಮಾತು      ಹೇಳ ಬಹುದು, ಬೇಸರವಾದವರು ಹೋಗುತ್ತಾರೆ, ಹೊಸಬರು ಬರುತ್ತಾರೆ. ಆದರೆ ಬೇಸರ ಮಾಡುವವರು ಸದಾಕಲ ಉಳಿದಿರುತ್ತಾರೆಂಬುದು ಸತ್ಯ.
ನಾನೊಬ್ಬ ಭಾವ ಜೀವಿ ಅನ್ನೋದು ಕೂಡ ಸತ್ಯ. ನಾನಂತೂ ಪಂಡಿತನಲ್ಲ. ನನಗನಿಸಿದ್ದನ್ನು ಬರೆಯುವೆ. ನನ್ನಂತ ಚಿಕ್ಕವರು ಮೆಚ್ಚಿ ಮಾತನಾಡಿದ್ದೂ ಉಂಟು. ಆದರೆ ಯಾರೂ  ಮೆಚ್ಚಲೆಂದೂ ನಾ ಬರೆಯುವುದಿಲ್ಲ. ಆದರೆ ಚುಚ್ಚುವುದನ್ನು ನನ್ನ ಕೈಲಿ ಸಹಿಸಲಾಗುವುದಿಲ್ಲ. ಈಗ ಕೆಲವರು ಹೇಳಬಹುದು, ಸಹಿಸಲಾಗದಿದ್ದರೆ ರೈಟ್ ಹೇಳಿ, ಎಂದು, ಹಾಗೆ ಹೇಳಿದರೆ ಸಂಪದದ ಬಾಗಿಲು ಬರುವವರಿಗೂ, ಹೋಗುವವರಿಗೂ ಸದಕಾಲ ತೆರೆದಿರುತ್ತದೆಂದು ನನಗೆ ಅರಿವಿದೆ.
ಇನ್ನೊಂದು ಮಾತು. ಸಂಪದದಲ್ಲಿ ಬರೆಯುವವರೆಲ್ಲಾ ಬಹಳಾ ಬಿಡುವಾಗಿರುತ್ತಾರೆಂದೇನಲ್ಲಾ. ವೈದ್ಯರು, ಇಂಜಿನಿಯರುಗಳು, ಸರ್ಕಾರಿ/ಖಾಸಗೀ ಅಧಿಕಾರಿಗಳು ಅವರ ಕಛೇರಿಯಲ್ಲಿ ೧೨ ರಿಂದ ೧೫ ಗಂಟೆಗಳು ಕೆಲಸ ಮಾಡಿ ಸಾಕಾಗಿ ನೆಟ್ ಮುಂದೆ ಕುಳಿತು ಸಂಪದ ಇಣುಕು ವವರುಂಟು. ಕೇವಲ ನಾಲ್ಕೈದು ಗಂಟೆ ನಿದ್ರೆಯ ಮೊರೆಹೋಗಿ /ನಿದ್ರೆ ಗೆಟ್ಟು ಬರೆಯಬೇಕಿನಿಸಿದ್ದನ್ನು ಬರೆಯುವವರುಂಟು. ಆದ್ದರಿಂದ ಬರೆಯುವವರೆಲ್ಲಾ ಬಹಳ ಬಿಡುವಾಗಿರುತ್ತಾರೆಂದು ಭಾವಿಸಿ ಕಿರಿಕಿರಿ ಯುಂಟುಮಾಡುವ ಪ್ರತಿಕ್ರಿಯೆಗಳನ್ನು ಬರೆದರೆ ಅದಕ್ಕೆಲ್ಲಾ ಆಳವಾಗಿ ಯೋಚಿಸಿ ಉತ್ತರಿಸುವ ವ್ಯವಧಾನವಿಲ್ಲದವರು ಸುಮ್ಮನಾಗಬೇಕಾಗುತ್ತದೆ, ಅಂತವರಿಗೆ ಮತ್ತೆ ಪ್ರತಿಕ್ರಿಯೆ ಕಾದಿರುತ್ತೆ" ಉತ್ತರಕೊಡಲಾರದೆ ತತ್ತರಿಸಿ ಪಲಾಯನ ಗೈದರು"
ಹೌದು,
ನಾನು ಬರೆಯುವಾಗ ಕಿರಿಕಿರಿಯುಂಟುಮಾಡುವ ಪ್ರತಿಕ್ರಿಯೆ ಬರೆಯುವವರನ್ನೇ ಕುರಿತು ಬರೆಯುತ್ತಿರುವೆ. ಇಷ್ಟಕ್ಕೂ ವೈಯಕ್ತಿಕ ಬ್ಲಾಗ್ ಬರಹದಲ್ಲೂ ಕುಟುಕು ಪ್ರತಿಕ್ರಿಯೆಗಳು ಬೇಕೆ?
ಚರ್ಚೆಗಾಗಿಯೇ ಒಂದು ವೇದಿಕೆ ಇದೆಯಲ್ಲಾ?

ಹೊಸದಾಗಿ ಸಂಪದಕ್ಕೆ ಬಂದು ಸಂಪದಿಗರ ಮನಗೆದ್ದಿರುವ ಹೊಸಬರಿಗೂ ನನ್ನ ಮನದಾಳದ ಮಾತು ನೆನಪಿರಲಿ. ಸಂಪದ ಒಂದು ಸ್ನೇಹ ಸಂಗಮ ವಾಗಬೇಕು, ವಿಚಾರ ವಿನಿಮಯಕ್ಕೆಆಸ್ಪದ ವಿರಬೇಕು, ಮಾತು ಇತರರಿಗೆ ನೋವಾಗದಂತಿರಬೇಕು,ಇದು ನನ್ನಆಸೆ. ಬೆಂಗಳೂರಿನಲ್ಲೊಮ್ಮೆ ಸಂಪದ ಸ್ನೇಹ ಮಿಲನ ವಾಯ್ತು. ಎಷ್ಟು ಸಂತೋಷ ವಾಯ್ತೆಂದುಭಾಗವಹಿಸಿದವರಿಗೆ ಗೊತ್ತು. ಬೆಂಗಳೂರಿನಲ್ಲಿ ಜೂನ್ ೧೪ ಕ್ಕೆ ಸಂಪದಿಗರೊಬ್ಬರ ಮನೆಯ ಗೃಹಪ್ರವೇಶದ ನಿಮಿತ್ತ ಸತ್ಯನರಾಯಣಪೂಜೆ.  ನನಗೆ ಆಮಂತ್ರಣ ಬಂದಿದೆ. ಅವರಿಗೆ ಕೇಳಿದೆ" ಹೇಗೂ ಗೃಹಪ್ರವೇಶದ ಊಟ ಹಾಕ್ತೀರಿ " ಒಂದು ಸಂಪದ ಸ್ನೇಹ ಮಿಲನ ಮಾಡೋಣ"  ಅವರಿಂದ  ಉತ್ತರ ಬಂತು " ಸ್ನೇಹ ಮಿಲನ ಮಾಡಿದರೆ ಚೆನ್ನ,ಆದರೆ ಕಿರಿಕಿರಿಯ ಚರ್ಚೆ ಯಾಗಿಬಿಟ್ಟರೆ!"

ನಿಜವಾಗಿ ಅವರಲ್ಲಿ ಆತಂಕವಿತ್ತು. ಸಂಪದಿಗರನ್ನು ತಮ್ಮ ಮನೆಗೆ  ಕರೆಯಬೇಕೆಂಬ ಆಸೆ, ಆದರೆ ಜೊತೆಜೊತೆಗೇ ಆತಂಕ. ನಾಗರಾಜ್, ಅನಿಲ್, ಅರವಿಂದ್, ನಿಮ್ಮ ಉತ್ತರ ಏನು?  

 

 

 

 

Rating
No votes yet

Comments