ರಜೆಯ ಮಧ್ಯದಲ್ಲೂ ಮನಸ್ಸಿಗೆ ರಜೆಯಿಲ್ಲ

ರಜೆಯ ಮಧ್ಯದಲ್ಲೂ ಮನಸ್ಸಿಗೆ ರಜೆಯಿಲ್ಲ

ಬೆಳಗ್ಗೆಯಿಂದ ಇದುವರೆಗೂ ಬರೆಯುತ್ತೇನೆ, ಬರೆಯಬೇಕೆಂದು ಅಂದುಕೊಂಡ ಲೇಖನಗಳನ್ನು ಬರೆಯಬೇಕೆಂದು ಕೂತರೂ ಆಗಲಿಲ್ಲ. ಬರೆದದ್ದು ಒಂದೆರಡು ಇಂಗ್ಲಿಷ್ ಬ್ಲಾಗುಗಳು, ಸಂಪದದಲ್ಲಿ ಮತ್ತೊಂದೆರಡು ಕವನ, ಬ್ಲಾಗ್ ಹಾಗೂ ಒಂದು ಟೆಕ್ ಸುದ್ದಿ. ಎಷ್ಟೋ ದಿನದಿಂದ ದೂರ ಸರಿದಿದ್ದ ತಲೆನೋವಿನ ಸೋಂಕು ಮತ್ತೆ ಕಾಣಿಸಿಕೊಂಡಿತ್ತು. ನಿದ್ದೆ ಚೆನ್ನಾಗಿಯೇ ಮಾಡಿದ್ದರೂ ಇದು ನನ್ನನ್ನು ಕಾಣಬೇಕೆಂದಿದ್ದರೆ ಅದು ಹವಾಮಾನದ ಕಾರಣವಿರಲೇಬೇಕು.. ತುಂಬಾ ಸೆಕೆ.. ಫ್ಯಾನ್ ಕೆಳಗೆ, ಎದುರಿಗೆ ಕೂರಲು ಮನಸ್ಸಿಲ್ಲ. ಒಂದೆರಡು ಸಿನಿಮಾವನ್ನೂ ಅಗಾಗ ಅತ್ತ ಕಡೆ ಗಮನವೀಯ್ದು ನೋಡಿದ್ದಾಯ್ತು.. ಮತ್ತೆ ಮಲಗಲಿಕ್ಕೆ ಮನಸ್ಸು ನನಗೇಕೋ ಬರೋದೇ ಇಲ್ಲ ನೋಡಿ. ನೆನ್ನೆ ನಾಗೇಶ್ ಹೆಗಡೆಯವರ ಮನೆಯಲ್ಲಿ ಮಾತಾನಾಡಿದ ಕೆಲವು ವಿಷಯಗಳ ಬಗ್ಗೆ ಚಿಂತನೆ ಕೆಲಹೊತ್ತು. ಅವರು ಕೊಟ್ಟ "ಕರುಣಾಳು ಬಾ ಬೆಳಕೆ" ಕಡೆಗೊಮ್ಮೆ ನೋಟ.

 ಇನ್ನೇನು ಒಂದು ವರ್ಷ ತುಂಬುವ ನನ್ನ ಚಲುವಿಗೆ ಸ್ವಲ್ಪ ಶೃಂಗಾರ ಮಾಡಿಸಿದ್ದಾಯ್ತು.. ನಾಲ್ಕು ಸಾವಿರದ ಕತ್ತರಿ ನನ್ನ ಜೇಬಿಗೆ... ಬೆಳಗ್ಗೆ ರಿಲಯನ್ಸ್ ಡೇಟಾ ಕಾರ್ಡ್ ಅನ್ನು ಲಿನಕ್ಸ್ ನಲ್ಲಿ ಉಪಯೋಗಿಸಿ ೨ಎಂ.ಬಿ ಕನೆಕ್ಷನ್ ಪಡೆದು ಸಂತಸ ಪಟ್ಟಿದ್ದಾಯ್ತು. ಅದರ ಬಗ್ಗೆ ಕನ್ನಡದಲ್ಲೂ ಒಂದು ಲೇಖನ ಲಿನಕ್ಸಾಯಣದಲ್ಲಿ ಬರುತ್ತಿದೆ. 

 ಇದೆಲ್ಲದರ ಮಧ್ಯೆ ರಜೆ ತಗೊಂಡ್ರು ಅಫೀಸಿನಲ್ಲಿ ನೆಡೆಯುತ್ತಿರುವ ಕೆಲಸಗಳ ಬಗ್ಗೆ ಕೊಂಚ ಮಾಹಿತಿಯನ್ನಾದರೂ  ಸಂಗ್ರಹಿಸುವ ಅಂದ ಕೆಲಸ ಸರಾಗವಾಗಿ ನಾ ಮಾಡದೆಯೇ ಆಗಿ ಹೋಯ್ತು.. ಮೊಬೈಲ್ ಮತ್ತೆ ಮೆಸೆಂಜರ್ ಇದೆಯಲ್ಲ..

ಸರಿ,  ತಲೆ ನೋವು ಅಂದು ಇದೆಲ್ಲಾ ಮಾಡ್ಬೇಕಾ ಅಂತಂದ್ರೆ.. ಏನ್ಮಾಡೋದು ಸಾರ್! ನಿದ್ದೆಯೇ ಬರ್ಲಿಕ್ಕಿಲ್ಲ.. ಏನ್ಮಾಡ್ಲಿ ಅಂತ ಇದ್ದಾಗ ಮೆಸೆಂಜರ್ ನಲ್ಲಿದ್ದ ಗೆಳೆಯರಗೆಲ್ಲಾ ಒಂದೊಂದೆ ಮೆಸೇಜಿನಾಟ. ಅದರ ಮಧ್ಯೆ ತಲೆ ನೋವು ಮರೆತದ್ದು.. ಅಮ್ಮ ಎರಡು ಮೂರುಸಲ ಚಾ ಮಾಡಿ ಕೊಟ್ಟರು ಹುಂ ಗುಟ್ಟಲಿಲ್ಲ ನನೀ ತಲೇ ನೋವು.. ಸರಿ ಅದಕ್ಕಂತಲೇ ಒಂದು ಬ್ಲಾಗ್ ಬರೆದು ನನ್ನ ಮನದಲ್ಲಿ ನೆಡೆದದ್ದನ್ನೆಲ್ಲಾ ಬರೆದಿಡುವ ಅಂತ ಬರೆದದ್ದು ಇಲ್ಲಿವರೆಗೂ ಬಂತು ನೋಡಿ...

ನಿಮಗೆ ತಲೆ ನೊವು ಬರ್ಲಿಲ್ಲ ಅಂದು ಕೊಳ್ತೀನಿ...

ನಿಮ್ಮ,

ಶಿವು

Rating
No votes yet

Comments