ದಿನಚರಿ: "ಇಲಿ ಕೈಕೊಡ್ತು - ಹೆಚ್ ಪಿ ಶಾಪಿಂಗ್ ಮಾಡ್ದ"

ದಿನಚರಿ: "ಇಲಿ ಕೈಕೊಡ್ತು - ಹೆಚ್ ಪಿ ಶಾಪಿಂಗ್ ಮಾಡ್ದ"

"ಇಲಿ ಕೈಕೊಡ್ತು"

ಮೊನ್ನೆ ಪವನಜರವರು ಮನೆಗೆ ಬಂದಿದ್ದಾಗ yours truly ಉವಾಚ - "format ಪದವನ್ನ format ಆಗಿಯೇ ಕನ್ನಡದಲ್ಲಿ ಬರೆದಿಟ್ಟು ಅನುವಾದದ ಗೋಜಿಗೆ ಹೋಗದೇ ಇರುವುದೇ ಒಳ್ಳೆಯದಲ್ವೆ? ಕನ್ನಡದ ಈ difficult ಪದವನ್ನ ನೀವು ಉಪಯೋಗಿಸಿ ಬಿಟ್ಟರೆ ನಮಗ್ಯಾರಿಗೂ ಅರ್ಥವಾಗಲ್ಲ".

ಈಗ ಇಲ್ಲಿ ನೋಡಿ ಅರ್ಥವಾಗದ್ದಷ್ಟೇ ಅಲ್ಲ, ಈ ರೀತಿಯ usageಗೆ ಮತ್ತೊಂದು ಡೈಮೆನ್ಶನ್! mouseಗೆ 'ಇಲಿ' ಎಂದು ಲೆಕ್ಕ ಹಾಕಿ "ಇಲಿ ಕೈಕೊಡ್ತು" ಅಂತ ಬರೆದರೆ ನೀವುಗಳು ಬಿದ್ದೂ ಬಿದ್ದೂ ನಗೋದು ಗ್ಯಾರಂಟಿ. ಅದೇನೆ ಇರಲಿ... ಇವತ್ತು ನನ್ನ ಕಂಪ್ಯೂಟರಿನ ಇಲಿ.... ಓಹ್ sorry, ಗಣಕಯಂತ್ರದ ಮೌಸು ಕೈಕೊಡ್ತು ನೋಡ್ರಿ. ಹಾಳಾದ್ದು ಮೈಕ್ರೊಸಾಫ್ಟಿನ ಮೌಸು... [:http://midori.shacknet.nu/PissOnMicrosoft.jpg|ಮೈಕ್ರೊಸಾಫ್ಟಿನ] [:http://vishvakannada.com/node/269|ಆರಾಧಕರಾದ] [:http://vishvakannada.com/Blog|ಪವನಜರವರ] ಕೆಲ್ಸ ಮಾಡ್ತಿರುವಾಗ್ಲೇ ಇದಾದದ್ದು ಒಂದು ರೀತಿಯ ವಿಡಂಬನೆ ;) 1
ಅದ್ಕೇ ಹೆಚ್ ಪಿ forcefully ಶಾಪಿಂಗಿಗೆ ಹೋದದ್ದು.

"ಹೆಚ್ ಪಿ ಶಾಪಿಂಗ್ ಮಾಡ್ದ"

ಹಲವು ದಿನಗಳ ಬಳಿಕ ಇವತ್ತು 'for a change' ಅಕ್ಕ, ಅತ್ತಿಗೆ, ಅಪ್ಪ ಅಮ್ಮನೊಂದಿಗೆ 'ಶಾಪ್ಪಿಂಗ್' ಹೋದದ್ದು ದಿನಚರಿ ಬರೆಯಲು ಸ್ಪೂರ್ತಿ. ;)

ಶಾಪಿಂಗ್ ಎಂದರೆ ನನಗಾಗದು. ಗಂಟೆಗಟ್ಟಲೆ ಅದೂ ಇದೂ ನೋಡಿಕೊಂಡು "ನಮಗೇನು ಬೇಕು" (ಕೆಲವರ ವಿಷಯದಲ್ಲಿ - 'ದುಡ್ಡು ಹೇಗೆ ಖರ್ಚು ಮಾಡಬೇಕು') ಎಂಬುದರ ಬಗ್ಗೆ ಗಾಢವಾಗಿ ಆಲೋಚಿಸುತ್ತ ಜಯನಗರ ಶಾಪಿಂಗ್ ಕಾಂಪ್ಲೆಕ್ಸು, ಬಸವನಗುಡಿ ಡಿ ವಿ ಜಿ ರಸ್ತೆಯಲ್ಲಿ ಅಲೆದಾಡುವ ಕೆಲಸ ನನ್ನಮಟ್ಟಿಗೆ ದೊಡ್ಡದೊಂದು ಪನಿಶ್ಮೆಂಟ್ ಕೊಟ್ಟಂತೆ. ಯಾವತ್ತೂ ನನಗೇನಾದರೂ ಬೇಕಿದ್ದರೆ ಹತ್ತಿರದ ಸೂಪರ್ ಮಾರ್ಕೆಟ್ಟಿಗೋ, ಕಂಪ್ಯೂಟರ್ ಅಂಗಡಿಗೋ ದೌಡಾಯಿಸಿ ಹತ್ತು ನಿಮಿಷಗಳೊಳಗೆ ಬೇಕಿದ್ದನ್ನು ಕೊಂಡುಕೊಂಡು ಹಿಂದಿರುಗುವುದು ನನ್ನ ಯೂಸ್ಯುಲ್ ಹ್ಯಾಬಿಟ್ಟು.

ಇವತ್ತು ಎಲ್ಲರೂ ಅತ್ತ 'ಶಾಪಿಂಗ್' ಹೊರಟಿದ್ದರಿಂದ ನಾನೂ ಕಾರು ಹತ್ತಿದೆ. ೫೦೦ ರೂ ಸುರಿದು ಹೊಸ ಲಾಜಿಟೆಕ್ ಮೌಸು ಕೊಂಡದ್ದಾಯಿತು. ಎಷ್ಟೋ ದಿನಗಳ ಮೇಲೆ 'ಶಾಪಿಂಗ್' ಹೊರಟವರ ಜೊತೆ ಹೋದದ್ದರಿಂದ ಒಂದಷ್ಟು ಹೊಟ್ಟೆ ಪೂಜೆಯೂ ಆಯ್ತು. ಜಯನಗರದಲ್ಲಿ ಹಾಗೇ ಸುತ್ತುತ್ತಿರುವಾಗ ನಾನೂ ಕೂಡ ಬೇರೆಯವರಂತೆ "ನಾನೇನು ಕೊಂಡುಕೊಳ್ಬೇಕು" ಎಂದು ಆಲೋಚಿಸಲು ಪ್ರಯತ್ನಿಸಿದಾಗ ನನ್ನ ಪ್ಯಾದೆ ಮೆಮೋರಿಗೆ ಹೊಳೆದದ್ದು 'ಮೈಕ್ರೊಫೋನು'! 'ಸಂಪದ'ದಲ್ಲಿ ಪಾಡ್ ಕ್ಯಾಸ್ಟಿಂಗ್ ಮಾಡಬೇಡ್ವೆ? ಸರಿ, ರೆಲಯೆನ್ಸ್ ವೆಬ್ ವರ್ಲ್ಡ್ ಪಕ್ಕ ಇರುವ ಸೋನಿ ವರ್ಲ್ಡ್ (ಜಯನಗರದಲ್ಲಿ ಈ ರೀತಿಯ ಹಲವಾರು ವರ್ಲ್ಡ್ ಗಳಿವೆ)ಗೆ ಲಗ್ಗೆ ಇಟ್ಟು ಸೋನಿ [:http://ndtv.fabmall.com/electronics/pd.aspx?sku=PC4262005624042|ಎಫ್ ವಿ ೨೨೦] ತಗೊಂಡೆ. ಸುಮಾರಾದ ಮೈಕ್ರೋಫೋನ್ ಅದು, ಸದ್ಯಕ್ಕೆ ಸಾಕು (ಸೋನಿಯ ಮೈಕ್ರೋಫೋನುಗಳು ಮೇಲಿನ ಸಂಪರ್ಕದಲ್ಲಿ ನೀವು ನೋಡುವಂತೆ ಬಹಳ ತುಟ್ಟಿ).

"ಶಾಪಿಂಗ್" ಮುಗಿದ ಮೇಲೆ [:http://sprisminvest.com/|ಹೊಸ ಕಂಪೆನಿಗೆ] ಮ್ಯಾನೇಜರ್ ಆಗಿ ಸೇರಿದ್ದಕ್ಕಾಗಿ ಅಕ್ಕನ ಟ್ರೀಟ್ ಸಲುವಾಗಿ - ಬನಶಂಕರಿಯ ಇನ್ ಸ್ವಿಂಗ್ ಗೆ ದಾಳಿಯಿಟ್ಟು ಬ್ಯಾಟಿಂಗ್ ಮಾಡಿದ್ದು. ಇಷ್ಟು ಇವತ್ತಿನ ದಿನಚರಿ :)
[ಬ್ಲಾಗ್ ಇರುವುದು ದಿನಚರಿ ಬರೆಯುವುದಕ್ಕೇ ಅಲ್ವೇ? ಆದ್ರೆ ಪ್ರತಿ ದಿನವೂ ಇಷ್ಟೊಂದು ಬರೆಯೋದಕ್ಕೆ ಟೈಮ್ ಇಲ್ಲದೇ ಇರೋದ್ರಿಂದಲೂ ಈಗೊಮ್ಮೆ ಆಗೊಮ್ಮೆ ನಿಮ್ಮೆಲ್ಲರಿಗೂ "ಕನ್ನಡದಲ್ಲಿ ಒಂದಿಷ್ಟಾದರೂ ಬರೀರಿ" ಅಂತ ಉಪದೇಶ ಕೊಡೋದಕ್ಕೆ ಮುಂಚೆ ನಡೆಸಿರುವ ತಯಾರಿ - ನಾನೇ ಬರೀದಿದ್ರೆ ನನ್ನ ಉಪದೇಶ ಯಾರು ಕೇಳ್ತಾರೆ, ಅಲ್ವೆ? ;) ]

1 - ಹೌದ್ರಿ, ಪವನಜರವರ ವಿಶ್ವಕನ್ನಡ ಹೊಸ ರೂಪದಲ್ಲಿ ಬರ್ತಾ ಇದೆ. ಆ ಕೆಲಸವನ್ನ ಕೈಗೆತ್ತಿಕೊಂಡಿರುವವನು ಇದನ್ನು ಬರೆಯುತ್ತಿರುವವನೆ! :) ಇವತ್ಯಾಕೋ ಸೆಕ್ಯುರಿಟಿಗಾಗಿ ನಮ್ಮ ಹೋಸ್ಟು ಮಾರ್ಕ್ ಹಾಕಿರುವ ಒಂದಷ್ಟು ಲಕ್ಷಣ ರೇಖೆಗಳು ಏನೇ ಸ್ಕ್ರಿಪ್ಟ್ ಹಾಕ್ಲಿಕ್ಕೂ ಅಡ್ಡ ಬರ್ತಿವೆ. ನಾಳೆ ಅವ ನೋಡಿ ಸರಿ ಪಡಿಸಿದ್ ಮೇಲೆ ಸರಿಹೋಗ್ಬಹುದು. ಒಟ್ನಲ್ಲಿ ಇನ್ನು ಸ್ವಲ್ಪ ದಿನಗಳಲ್ಲಿ ಹೊಸ 'ವಿಶ್ವ ಕನ್ನಡ' ಗ್ಯಾರಂಟಿ!

Rating
No votes yet

Comments