ನಾ ಕಂಡ ಸೃಷ್ಠಿ- ಎ.ಬಿ.ವಿ.ಪಿ.ಕಾರ್ಯಕ್ರಮ

ನಾ ಕಂಡ ಸೃಷ್ಠಿ- ಎ.ಬಿ.ವಿ.ಪಿ.ಕಾರ್ಯಕ್ರಮ

ನಮ್ಮ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಎ.ಬಿ.ವಿ.ಪಿ ಹಮ್ಮಿಕೊಂಡ "ಸೃಷ್ಠಿ-೨೦೦೯"
*******************************************************************
ಮೇ ತಿಂಗಳ, ತಾರೀಕು ೨೨,೨೩ ಮತ್ತು ೨೪ ರಂದು ನಮ್ಮ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಇಂಜಿನಿಯರಿಂಗ್ ಮಕ್ಕಳ ಪ್ರಾಜೆಕ್ಟ್ ಪ್ರದರ್ಶನದಲ್ಲಿ ೨೦೦ರಕ್ಕಿಂತಲೂ ಜಾಸ್ತಿ ಪ್ರಾಜೆಕ್ಟ್ ಸ್ಟಾಲ್ ಇದ್ದವು... ನಾನು ಕೊನೆಯ ದಿನ ಮದ್ಯಾಹ್ನ ೨ ಕ್ಕೆ ನೋಡಲು ಒಳ ಹೊಕ್ಕಿದೆ ಹೊರಗೆ ೪.೧೦ಕ್ಕೆ ಬಂದೆ..!!
ಅದ್ಭುತ ಎಂದೆನಿಸಿತು!!..., ನನ್ನದು ಗಣಕಯಂತ್ರ ವಿಭಾಗವಾದ್ದರಿಂದ ಅದರದ್ದನ್ನೇ ಜಾಸ್ತಿ ನೋಡಿದೆ.. ಅದೂ ೫೦ರಷ್ಟು ಪ್ರಾಜೆಕ್ಟ್ ನೋಡಿಲ್ಲ.. ಎಲ್ಲ ಸ್ಕಿಪ್ ಮಾಡಿ ಮುಂದೆ.. ಮುಂದೆ ಹೋದೆ. ಸಂಜೆ ನಾಲ್ಕು ಗಂಟೆಗೆ ಎಲ್ಲ ಮುಗಿಸುವ ಹೊತ್ತಾಗಿದ್ದರಿಂದ ನಾನು ಬೇಗ ಬೇಗ ನೋಡಬೇಕಾಯ್ತು.

ಏನೆಲ್ಲ ಪ್ರಾಜೆಕ್ಟ್ ಇತ್ತು ಅಂತ ಕೇಳೋ ಬದಲು, ಏನಿರಲಿಲ್ಲ ಅಂತ ಕೇಳಿ. ಒಂದು ಹೊಸ ಪ್ರೊಟೊಕಾಲ್ "ಡಿಟಿಟಿಪಿ" ಅಂತ ಮಾಡಿದ್ರು,ಸಕತ್ ಆಗಿತ್ತು.. ಅದರ ಮುಂದೆ ಮಾಮೂಲು "ಹೆಚ್.ಟಿ.ಟಿ.ಪಿ" ಎಲ್ಲ ಏನು ಇಲ್ಲ ಅನಿಸಿ ಹೋಯ್ತು.. ಡೇಟ ಎನ್ಕ್ರಿಪ್ಶ್ಯನ್(encryption) ಚಿತ್ರಗಳಲ್ಲಿ ಮಾಡೋದೆಲ್ಲ ವಿಧಗಳು ತುಂಬಾ ಇದ್ದವು.
ಮೊಬೈಲ್ ಫೋನಿನಿಂದಲೆ ಕ್ಲಯಿಂಟ್ ಸಿಸ್ಟಮ್ ಅನ್ನು ಕಂಟ್ರೋಲ್ ಮಾಡೋದು.. ಇನ್ನೂ ಅನೇಕ...!! ಬರಿತಾಹೋದ್ರೆ ಇನ್ನೋ ಎಷ್ಟೊಂದಿದೆ!!!
ಯಾವತ್ತೂ ಕಾಲೇಜಿಗೆ ಫೋನ್ ತೆಕ್ಕೊಂದು ಹೋಗದವಳು, ಅಂದು ತೆಕ್ಕೊಂದು ಹೋಗಿದ್ದೆ.. ಭಾನುವಾರ,ಜೊತೆಗೆ ಗೆಳತಿಯರು ಬರೋರು ಯಾರೂ ಇರಲಿಲ್ಲ.. ಒಬ್ಬಳೇ ಹೋಗೋದಲ್ಲ ಇರಲಿ ಎಂದು ತೆಕ್ಕೊಂಡೆ. ಫೋನಿದ್ದಿದ್ದರಿಂದ ಫೋಟೋ ತೆಗೆಯೋಕಾಯ್ತು..
ಕೆಲ್ವೊಂದು ಫೋಟೋಸ್ ಕೆಳಗಿದೆ ನೋಡಿ.. :)

Rating
No votes yet

Comments