ನೆನಪಿನ ಬುತ್ತಿಯಿಂದ ಒಂದಷ್ಟು-೩ :)

ನೆನಪಿನ ಬುತ್ತಿಯಿಂದ ಒಂದಷ್ಟು-೩ :)

ಪ್ರಥಮ "ಪಿಯುಸಿ"ಯ ಪ್ರಥಮ ದಿನ
*********************

ಕಾಲೇಜಿನ ಪ್ರಥಮ ದಿನ. ಬೇಗನೆ ಎದ್ದಿದ್ದೆ. ಇನ್ನೇನು ಸಮಸ್ತ್ರ ಆ ಕೆಂಪು ಲಂಗ, ರವಿಕೆ ಹೋಗಿ ನೀಲಿ ಬಿಳಿ ಬಣ್ಣದ ಚೂಡಿದಾರದಲ್ಲಿ ನಾನು ರೆಡಿ. ಎರಡು ಜಡೆ ಕಟ್ಟೋದು, ಅಮ್ಮ ಕಟ್ಟುತ್ತಿರಬೇಕಾದರೆ ಸರಿ ಕೂತ್ಕೊ, ಎಂದು ಕುಟ್ಟೋದು, ಎಲ್ಲದಕ್ಕೂ ಪೂರ್ಣವಿರಾಮ. :)
ಗೆಳತಿಯ ಕೂಗಿಗೆ ಓಗೊಟ್ಟು ನಾನು ಕಾಲೇಜಿಗೆ ಹೊರಟೆ. ನನ್ನದು ವಿಜ್ಞಾನ ವಿಭಾಗವಾಗಿದ್ದರಿಂದ ಸಮಾಜಶಾಸ್ತ್ರ ಓದ್ಲಿಕ್ಕಿಲ್ಲ ಅನ್ನೋ ಸಂತೋಷ. ಕನ್ನಡ ಮೀಡಿಯಮ್ ಇನ್ನು ಎಲ್ಲಾ ಇಂಗ್ಲೀಷ್, ಅರ್ಥವಾಗಬಹುದೇ ಎಂಬ ಗೊಂದಲದೊಂದಿಗೆ ತರಗತಿಯೊಳಗೆ ಕಾಲಿಟ್ಟೆ.

ತರಗತಿಯಲ್ಲಿ ಹುಡುಗರಿದ್ದಾರೆ ಎನ್ನೋದೇ ನೆನಪಿರಲಿಲ್ಲ. ಬಾಲಕಿಯರ ಪ್ರೌಢಶಾಲೆಗೆ ಹೋಗಿದ್ದರಿಂದ ಒಳ್ಳೆ ಹುಲಿಗಳ ತರ ಇದ್ದೆವು. ಬೆಕ್ಕಿನ ಮರಿಗಳ ತರ ಕ್ಲಾಸ್ ಒಳಗೆ ಬಂದೆವು.ಇನ್ನೇನು ಫಸ್ಟ್ ಬೆಂಚ್ ನನ್ನ ಪೆಟ್ ಬೆಂಚ್ :) ಸೀದ ಹೋಗಿ ಕೂತೆ. ಅಕ್ಕಂದಿರೆಲ್ಲ ಹೇಳಿದ ನೆನಪು.. ಕಾಲೇಜಲ್ಲಿ ಎತ್ತರ ಪ್ರಕಾರ ಕೂರಿಸಲ್ಲ. ಎಲ್ಲಿ ಬೇಕೂ ಅಲ್ಲೇ ಕೂರಬಹುದೆಂದು! ಇನ್ನೇನು ಸ್ಟಡಿ ಬೆಲ್ಲ್ ಹೊಡೆಯಿತು.ಅದೂ ಇತ್ತು ಆ ಕಾಲೇಜಲ್ಲಿ..! ಪಿಟಿ ಮಿಸ್ಸ್ ಬಂದು ಎಲ್ಲರೂ ಲಯಿನ್ ಅಲ್ಲಿ ನಿಲ್ಲಿ ಎಂದು ಎತ್ತರ ಪ್ರಕಾರ ಕೂರಿಸಬೇಕೆ!! ಲಾಸ್ಟ ಬೆಂಚ್ಗೆ ಹೋಗಿ ಬಿದ್ದೆ!!! :( ಇನ್ನು ಇದೆ ಬೆಂಚು ಗತಿ ಎಂದು ಸುಮ್ಮನೆ ಕೂತೆ. ಬೆಲ್ಲ್ ಹೊಡೆಯಿತು.

ಭೌತಶಾಸ್ತ್ರ ಸಾರ್ ತರಗತಿಯೊಳ್ಗೆ ಬಂದು ಎಲ್ಲರ ಅಂಕಗಳನ್ನ ಕೇಳಿ, ನಾನು ಕ್ಲಾಸ್ ಇವತ್ತಿಂದಲೆ ಪ್ರರಂಭಿಸುತ್ತೇನೆ ಎಂದು ಸುರುಮಾಡೇ ಬಿಟ್ರು..!! :(
ಪ್ರಾರಂಭವಾಯಿತು ಇಂಗ್ಲೀಷ್ನಲ್ಲಿ ಟಸ್ಸು ಪುಸ್ಸು... ಸುಮ್ಮನೆ ಮುಖ ನೋಡುತ್ತಾ ಕುಳಿತೆ..ಏನೋ ಹೇಳುತ್ತಿದ್ದಾರಲ್ಲಾ ಎನ್ನೋ ರೀತಿ! ನಾನು ಕೆಲವು ಸೂತ್ರಗಳನ್ನ ಕೇಳುತ್ತೇನೆ ಅಂತ ಎಲ್ಲರಿಗು ಒಟ್ಟಾಗೆ ಕೇಳಿದ್ರು.. <<ನಾನು ಕೆಲವು ಸೂತ್ರಗಳನ್ನ ಕೇಳುತ್ತೇನೆ>>ಅಲ್ಲಾ ಇಷ್ಟನ್ನು ಕನ್ನಡದಲ್ಲಿ ಹೇಳಿ ಸೂತ್ರ ಕೇಳುವಾಗ ಇಂಗ್ಲೀಷ್ ಬಿಟ್ರು! ಎಸ್ ಟೆಲ್ ಮಿ.. ಏರಿಯ ಫಾರ್ಮುಲ? ನಂಗೇನು ಗೊತ್ತು ಏರಿಯ ಅಂದ್ರೆ ಸುಮ್ಮನೆ ಪಕ್ಕದವಳನ್ನ ನೋಡಿದೆ ಅವಳು ನನ್ನನೇ ನೀಡ್ತಿದ್ಲು. ಆಗ ಇಂಗ್ಲೀಷ್ ಮೀಡಿಯಂ ಇಂದ ಬಂದವಳು ಒಬ್ಳು ಉತ್ತರಿಸಿದಳು. ನಾನೋ ಹಾ... ಇನ್ನೋದು ಪ್ರಶ್ನೆಗೆ ಉತ್ತರ ಹೇಳಲೇ ಬೇಕು, ಎಂದು ಆಲೋಚಿಸಿದೆ.ಪ್ರಶ್ನೆ ಕೇಳೇ ಬಿಟ್ರು. ಫಾರ್ಮುಲ ಫಾರ್ "ವಾಲ್ಯೂಮ್"? ಇದೆಲ್ಲೋ ಕೇಳಿದೀನಲ್ವಾ ಅನಿಸಿತು.ಥಟ್ಟ್ ಅಂತ ಹೊಳೆಯಿತು ಮನೆಯಲ್ಲಿ ಇರೋ ಟವಿದು ವಾಲ್ಯೂಮ್ ಜಾಸ್ತಿ ಕಡಿಮೆ ಮಾಡು ಹೇಳ್ತಾರಲ್ವಾ.. ಅದು ಶಬ್ದ ಕಡಿಮೆ ಮಾಡಲು, ಜಾಸ್ತಿ ಮಾಡಲು. ಹಾಗಾದರೆ ಶಬ್ದಕ್ಕೆ ಸಂಬಂದಿಸಿದ ಪ್ರಶ್ನೆ! ತಿರುಗಿತು ನನ್ನ ತಲೆಯಲ್ಲಿ ಹತ್ತೆನೇ ತ್ರಗತಿಯ ವಿಜ್ಞಾನ ಪುಸ್ತಕ.. ಶಬ್ದ ತರಂಗಗಳು, ಕಂಪನಾಂಕ, ಇನ್ನೂ ಅನೇಕ.. ಅಷ್ಟೊತ್ತಿಗೇ ಸಮಯ ಮೀರಿತ್ತು ಯಾರೂ ಉತ್ತರಿಸಲಿಲ್ಲ ಎಂದು ಒಂದೇ ಸಮನೆ ಬಯ್ಯುತ್ತಿದ್ದರು.ಇನ್ನೇನು ಉತ್ತರಿಸುತ್ತಿದ್ದೆ ಎದ್ದು ನಿತ್ತು ,ನನ್ನ ತಲ್ಲೆಯಲ್ಲಿ ಮೂಡಿದ್ದ ಫಾರ್ಮುಲವನ್ನ.!. ದೇವರೆ ಮರ್ಯಾದಿ ಉಳಿಸಿದರು ಬೆಲ್ ಹೊಡೆದು!
ಅಂತೂ ತರಗತಿಗಳೆಲ್ಲ ಮುಗಿದು ಮನೆ ತಲುಪಿದೆ. ತಲೆಯಲ್ಲಿ ಇದೇ ತಿರುಗುತಿತ್ತು!! ಅಪ್ಪನಲ್ಲಿ ಕೇಳಿದೆ ಟಿ ವಿ ವಾಲ್ಯೂಮ್ ಗೆ ಏನು ಸೂತ್ರ ಎಂದು. ಅಪ್ಪ "ಇದೇನು ಹೊಸತು? ಅದು ಟಿವಿದು ಅಲ್ಲ, ಅಷ್ಟು ಮೂಲ ಸೂತ್ರಗಳೂ ನಿನಗೆ ಗೊತ್ತಿಲ್ವಾ??" ಎಂದು ಕೇಳ್ಬೇಕಾ..!! ನಾನು ಹೆಸರೇ ಕೇಳಿರ್ಲಿಲ್ಲ.. ನನ್ನ ತಲೆಯಲ್ಲಿ ತಿರುಗಿದ ವಿಷ್ಯವೆಲ್ಲಾ ತಿಳಿಸಿದೆ. ಉತ್ತರಿಸಿದ್ರು "ಲೆನ್ಥ್* ಬ್ರೆಡ್ಥ್* ಹೈಟ್" ಅಂದ್ರೆ "ಉದ್ದ *ಅಗಲ * ಎತ್ತರ"
ಓಹ್ ಇದು ಗೊತ್ತು "ವಿಸ್ತಾರ"ದ ಸೂತ್ರ... :) .. ಎಂದು ಹೇಳಿದಾಗ ಮನೆಯವರೆಲ್ಲಾ ಹಲ್ಲು ಕಿಸಿದರು..!! :(

Rating
No votes yet

Comments