'ಸಂಪದ'ದಲ್ಲಿ ಹಲವಾರು ಬದಲಾವಣೆಗಳು

'ಸಂಪದ'ದಲ್ಲಿ ಹಲವಾರು ಬದಲಾವಣೆಗಳು

Comments

ಬರಹ

ಸಂಪದ ದೊಡ್ಡದಾಗುತ್ತಿದ್ದಂತೆ ಇಲ್ಲಿರುವ ಲೇಖನಗಳನ್ನು ತಲುಪಲು ಕಷ್ಟವಾಗುತ್ತಿದೆ ಎಂದು ಹಲವರಿಂದ ದೂರು ಬಂದಿತ್ತು. ಅಲ್ಲದೇ ಮುಖ್ಯ ಪುಟದಲ್ಲಿ ಲೇಖನಗಳಿಗೆ ಬರಿಯ ಸಂಪರ್ಕಗಳು ಮಾತ್ರ ಇದ್ದರೆ ಚೆನ್ನ ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು. ಪ್ರತಿ ದಿನ ತಪ್ಪದೇ [:http://slashdot.org|ಸ್ಲಾಶ್ ಡಾಟ್] ಓದುವ ನನ್ನಂತಹ web addictಗಳು ಅಂತಹ ಮುಖ್ಯ ಪುಟಗಳಿಗೆ ಹೊಂದಿಕೊಂಡು ಬಿಟ್ಟಿರುತ್ತೇವಾದ್ದರಿಂದ ಬಹುಶಃ ನಮಗೆ ಕಷ್ಟವೆನಿಸದು. ಆದ್ದರಿಂದ ಎಲ್ಲರಿಗೂ ಸರಿಹೊಂದುವ ಬದಲಾವಣೆ ಮಾಡಿದರೆ ಒಳ್ಳೆಯದೆಂದುಕೊಂಡು ಈ ಹೊಸ ರೀತಿಯ main page ನಿಮ್ಮ ಮುಂದಿಡುತ್ತಿದ್ದೇನೆ. ನಿಮಗೆ ಇದು ಎಷ್ಟು ಹಿಡಿಸಿತು ಎಂಬುದನ್ನು ಹಾಗೂ ನಿಮ್ಮ ಸಲಹೆಗಳನ್ನು ತಪ್ಪದೆ ತಿಳಿಸಿ.

ಈ ವಾರದಿಂದ 'ಸಂಪದ'ದಲ್ಲಿ ಸೇರಿಸಲಾಗುವ ಪ್ರತಿ ಲೇಖನಕ್ಕೂ ಲೇಖಕರಿಗೆ 'ಪಾಯಿಂಟ್ಸ್' ದೊರೆಯುವುದು. ತಮಾಷೆಯಲ್ಲ :) ಸದಸ್ಯರಲ್ಲಿ ಬರೆಯುವ ಹವ್ಯಾಸವನ್ನೂ ಹೀಗಾದರೂ ಹೆಚ್ಚು ಮಾಡಬಹುದೋ ನೋಡೋಣವೆಂದು ನಡೆಸಿರುವ ಪ್ರಯೋಗ.
ದೊರೆಯುವ ಪಾಯಿಂಟ್ಸ್ ಗಳು:
ಪ್ರತಿ ಲೇಖನಕ್ಕೆ: ೧೦
ಪ್ರತಿ ಬ್ಲಾಗ್ ದಾಖಲೆಗೆ: ೨
ಪ್ರತಿಯೊಂದು ಟಿಪ್ಪಣಿ, ಕಾಮೆಂಟು, ಮತ್ತಿತರೆಗಳಿಗೆ: ೧

ಮುಂದೊಮ್ಮೆ ಅತಿ ಹೆಚ್ಚು ಪಾಯಿಂಟುಗಳನ್ನು ಗಳಿಸಿರುವ ಸದಸ್ಯರು ಕೆಲವರಿಗೆ ಏನಾದರೂ ಗಿಫ್ಟು ಕೊಟ್ಟು ಅವರ ಕನ್ನಡ ಪ್ರೇಮಕ್ಕೆ ಮೆಚ್ಚುಗೆ ತೋರಿಸಬಹುದು. ಏನಂತಿರಿ? ;)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet