ಮತ್ತೆ ಚಿಗುರಿದ ಮರ ಮತ್ತು ಅನಿಲ್

ಮತ್ತೆ ಚಿಗುರಿದ ಮರ ಮತ್ತು ಅನಿಲ್

ಅನಿಲ್ ನಿಮ್ಮ ಚಿತ್ರಕ್ಕೊಂದು ನನ್ನ ಕಥೆ, ಬೆಳಗ್ಗೆ ಆರರ ಸಮಯ ಅನಿಲ್ ಎದ್ದು ತನ್ನ ನಿತ್ಯ ಕರ್ಮಗಳನ್ನು ಮುಗಿಸಿ ವಾಕಿಂಗ್ ಹೊರಟ, ಇನ್ನೆನು ಹೊಸಿಲು ದಾಟಬೇಕು ಮನೆಯಾಕೆ ಊರುಗೋಲು ತಂದು ಮುಂದಿಡಿದಳು ದಿನಾ ನೆನಪು ಮಾಡ್ಬೇಕೆ ಇನ್ನು ಚಿಕ್ ಹುಡುಗ್ರೆ ಮೊನ್ನೆ ಹಾಗೆ ಹೋಗಿ ಬಿದ್ದಿದ್ದು ಮರ್ತ್ ಹೋಯ್ತು ಒಳ್ಳೆ ಕಥೆ ..ಬೇಗ ಬಂದ್ಬಿಡಿ..... ಹೊತ್ ಮಾಡ್ಬೇಡಿ.....ಮನೆಯಾಕೆ ಗೊಣಗುಟ್ಟುತ್ತಲೆ ಒಳನಡೆದಳು...ಅನಿಲನಿಗೆ ಇದು ನಿತ್ಯದ ಕಥೆಯಾದರು ಒಂದು ರೀತಿ ಅವಮಾನವಾದಂತಾಯಿತು. ಮನಸ್ಸು ಹಿಂದೆ ಓಡಿತು ಯಾಕೊ ತನಿಗೆ ವಯಸ್ಸಾಗಿದೆ ಎಂದರೆ ನಂಬುವುದಕ್ಕೆ ತಯಾರಿರಲಿಲ್ಲ ಮನಸ್ಸು...ಆದರು ದೇಹ ಅದನ್ನು ನೆನಪಿಸುತ್ತಿತ್ತು ಹಿಂದೆಲ್ಲ ಎಷ್ಟು ಗಟ್ಟಿ ಇದ್ದೆ...ಎಷ್ಟೊಂದು ಚಾರಣ ,ಸಾಹಸ ಅಂತ ಮಾಡ್ತಾ ಇದ್ದೆ ಛೆ!!!! ಹಾಗೆ ಯೋಚಿಸುತ್ತ ತಾನು ಮತ್ತು ತನ್ನ ಸ್ನೇಹಿತರು ಒಮ್ಮೆ ಸಿದ್ದರ ಬೆಟ್ಟಕ್ಕೆ ಹೋಗಿದ್ದು ನೆನಪಾಯಿತು...ಅದನ್ನೆ ನೆನೆಯುತ್ತ ವಾಕಿಂಗ್ ಮುಗಿಸಿ ಮನೆ ತಲುಪಿದ....ಬೇಗ ಬೇಗ ಕೈಕಾಲು ತೊಳೆದು..ಆ ನೆನಪಿನಲ್ಲೆ ತನ್ನ ಕೊಠಡಿಗೆ ಹೋಗಿ ತನ್ನ ಹಳೆಯ ಟ್ರಂಕ್ ತೆಗೆದ.. ಕಾಫಿ ಕಪ್ಪನ್ನು ಕೈಲಿಡಿದು ಬಂದ ಹೆಂಡತಿ ಅದನ್ನು ನೋಡಿ ಶುರುವಾಯಿತೆ ನಿಮ್ಮ ಹಾಳು ಪುರಾಣ ಅದೇನ್ ನಿಮ್ ಆಸ್ತೀನೆ ಯಾವ್ ಗಂಟ್ ಮಾಡ್ಲಿಲ್ಲಾ ಅಂದ್ರು ಈ ಗಂಟುನ್ನ್ನಂತು ಕಾಪಾಡ್ಕೊಂಡ್ಬಂದಿದೀರ ಲೊಚಗುಟ್ಟುತ್ತಲೆ ಒಳನಡೆದಳು , ಇವಳದ್ದು ಇದ್ದದೆ ಎಂದು ಅನಿಲ್ ಅದನ್ನು ತೆಗೆದು ನೋಡಲಾರಂಬಿಸಿದ....ಹಳೆಯ ಫೋಟೊಗಳು ಕಣ್ಣಿಗೆ ಬಿದ್ದವು......ಓ ಸಿದ್ದರ ಬೆಟ್ಟಕ್ಕೆ ಹೋದಾಗ ತೆಗೆದದ್ದು....ಒಂದೊಂದೆ ತೆಗೆದು ನೋಡಲಾರಂಬಿಸಿದ...ಅದರಲ್ಲಿ ಒಂದು ಫೋಟೊ ಅವನನ್ನು ಆಕರ್ಷಿಸಿತು... ಯಾಕೊ ಆ ಫೋಟೊ ತನ್ನನ್ನು ಅಣಕಿಸುವಂತೆ ಇತ್ತು..... ಮತ್ತೆ ಸಿದ್ದರ ಬೆಟ್ಟ ನೋಡುವ ಆಸೆಯಾಯಿತು ಮನ ಹೊಯ್ದಾಡಿತು ..ಸರಿ ಹಾಲಿಗೆ ಆ ಫೋಟುಸಮೆತ ಬಂದ ಹರಿಗೆ ಫೋನಾಯಿಸಿದ.....ಹರಿಯ ಮಗಳು ರಿಸೀವರನ್ನು ತೆಗೆದುಕೊಡಳು ಓ ಆಂಕಲ್ ನೀವಾ ಹೇಗಿದ್ದೀರಿ? ನಿಮ್ಮ ಆರೋಗ್ಯ ಹೇಗಿದೆ? ಅವಳ ಪ್ರಶ್ನೆಗಳು ತನ್ನನ್ನು ನಿಮಗೆ ವಯಸಾಗಿದೆ ಎನ್ನುವಂತಿತ್ತು....ಬೇಸರವಾಗಿ ಅದಕ್ಕೆ ಉತ್ತರಿಸದೆ ನಿಮ್ ತಂದೆ ಇದಾರೇನಮ್ಮ ಎಂದು ಕೇಳಿದ...ಇದಾರೆ ಆಂಕಲ್ ಒಂದ್ನಿಮಿಶ...ಅಪ್ಪ ಅನಿಲ್ ಆಂಕಲ್ ಫೋನ್ ಎಂದು ತಂದೆ ಕೈಗಿಟ್ಟಳು ಅತ್ತ ಕಡೆ ಕೆಮ್ಮುತ್ತಲೆ ಹರಿ ರಿಸೀವರ್ ತೆಗೆದುಕೊಂಡ....ಯಾಕೊ ಹರಿ ಹುಶಾರಿಲ್ವೇನೊ....ಹಾಗೆನಿಲ್ವೊ ವಯಸ್ಸಾಯ್ತಲ್ಲ....ತಥ್ ಇವನು ವಯಸ್ಸನ್ನು ನೆನೆಸ್ಸಿದ್ದು ಬೇಸರವಾಗಿ ಮನ ಮುದುಡಿದರು ಸಿದ್ದರ ಬೆಟ್ಟದ ನೆನಪು ಅದನ್ನು ಮರೆಮಾಚಿತು...ಏನು ವಿಷಯ..ಆರೋಗ್ಯವಾಗಿದೀಯ?? ಅದೆಲ್ಲ ಇರ್ಲಿ ಕಣೊ ಇವತ್ತು ಹಳೆ ನೆನಪೆಲ್ಲ ಆಗ್ತಾ ಇತ್ತು ಹಾಗೆ ನಾವೆಲ್ಲ ಸಿದ್ದರ ಬೆಟ್ಟಕೋಗಿದ್ವಿ ನೆನಪ್ದ್ಯನಿನಿಗೆ....ರಾಗವೆಳೆದ...ಮರಿಯೋಕಾಗುತ್ತೇನೊ ಅದುನ್ನ ..ವಯಸ್ಸಾದ್ಮೇಲೆ ಇನ್ನೇನ್ ಇರುತ್ತೆ ಹೋಳು ಹಳೆದೆಲ್ಲ ನೆನುಸ್ಕೋಂತಾ ಕೊರ‍ೋದಲ್ವ...ಹಾಗಲ್ಲ ಹರಿ ನಾ ಹೇಳಿದ್ದು ನಾವೆಲ್ಲ ಮತ್ತೆ ಸೇರಿ ಸಿದ್ದರ ಬೆಟ್ಟಕ್ಕೆ ಯಾಕ್ ಹೋಗ್ಬಾರ್ದು ಅಂತ....ಅಯ್ಯಯ್ಯೋ ಏನಯ್ಯ ಹೇಳ್ತಾಇದೀಯ ಈ ವಯಸ್ನಲ್ಲಿ ಆ ಬೆಟ್ಟ ಹತ್ತೊಕಾಗುತ್ತ್ಯೆ ನಮ್ ಕೈಯಲ್ಲಿ.....ಅಯ್ಯೊ ನಿನ್ನ ಮಾತ್ ಮಾತಿಗು ವಯಸ್ಸಾಯ್ತು ಅಂತ ಹೇಳ್ಬೇಡಯ್ಯ..ಅಂತ ಏನ್ ಮಹಾ ವಯಸಾಗಿರೋದು ಈಗಿನ್ನು ೬೦ ದಾಟ್ತಾಇದೀವಿ ಅಷ್ತೆ....ಅದೆಲ್ಲ ಬಿಡು ಈಗೇಳು ನಾವೆಲ್ಲ ಮುಂದಿನ ಭಾನುವಾರ ಬೆಟ್ಟಕೋಹೋಗಣ.. ಅತ್ತ ಕಡೆಯಿಂದ ಹರಿ.. ಹೋಗೋದ್ ದೊಡ್ಡುದಲ್ಲಯ್ಯ ಆ ಬೆಟ್ಟ ನಮ್ ಕೈಯಲ್ಲಿ ಹತ್ತೊಕಾಗುತ್ತ ಅಂತ.. ಯಾಕಾಗಲ್ಲ ಅಂತ ಎಷ್ಟು ಸಾರಿ ಹತ್ತಿಲ್ಲ ಅಂತ ನಾನಿನ್ನು ನೀನ್ ತೆಗ್ದೆದ್ಯಲ್ಲ ಒಂದು ಫೋಟೊ ಅದೆ ಸಂಪದ ಬ್ಲಾಗ್ಗು ಹಾಕಿದ್ವಲ್ಲಯ್ಯ ....ಅದುನ್ನೆ ನೋಡ್ತಾಇದೀನಿ.... ಅಲ್ಲಯ್ಯ ಅದು ಸರಿ ಆದ್ರೆ ಆವಗಿನ ವಯಸ್ಸೆಷ್ಟು...ಇವಾ.. ಅವನ ಮಾತನ್ನು ಅರ್ಧಕ್ಕೆ ಅನಿಲ್ ತುಂಡರಿಸುತ್ತ ಮತ್ತೆ ವಯಸಿನ ವಿಷ್ಯಕ್ಕೆ ಬಂದ್ಯ....ಹೀಗೇನು ನೀನ್ ಬರ್ತೀಯೊ ಇಲ್ವೊ ಅಷ್ಟೇಳು...... ಯಾಕೊ ಅನಿಲನ ಮನಸನ್ನು ನೋಯಿಸಲಾರದೆ ಹೂಂ ಅಂದ... ನಾಳೆ ಭಾನುವಾರನೆ ಬೆಳಗಿನ್ ಜಾವ ಬಿಡಣ..ಎಂದು ಫೋನಿಟ್ಟ.. ಸರಿ ಎಲ್ಲರಿಗು ಫೋನಾಯಿಸಿ ಹೊರಡಲು ಸಿದ್ಧಪಡಿಸಿದ. ಅನಿಲನಿಗಾಗಲೆ ಬೆಟ್ಟವನ್ನು ತಲುಪಿಯೆ ಬಿಟ್ಟೆವು ಅನ್ನುವಷ್ಟು ಸಡಗರ ತುಂಬಿತ್ತು.. ಹೆಂಡತಿಗೆ ಹೇಳಲು ಹೊರಟ.. ಅಂತು ಎಲ್ಲರು ಮನೆಯಲ್ಲಿ ರಂಪ ರಾಮಾಯಣಗಳನ್ನು ಮಾಡಿಕೊಂಡು ಒಪ್ಪಿಗೆಯನ್ನು ಪಡೆದು ಭಾನುವಾರ ಹೊರಡಲು ಅಣಿಯಾದರು.. ಅನಿಲ್ ಅಂತು ಭಾನುವಾರ ಬಂದಿದ್ದೆ ತಡ ಬೆಳಿಗ್ಗೆನೆ ೨ರ ಸುಮಾರಿಗೆ ಎದ್ದು.ಎಲ್ಲರು ಬರುವುದ್ದನ್ನೆ ಕಾಯುತ್ತಿದ್ದ.... ಕಾರಿನ ಹಾರ್ನ್ ಕೇಳಿದ್ದೆ ತಡ ದಡಬಡಾಯಿಸಿ ಹೊರನಡೆದ....ಹೆಂಡತಿ ಗೊಣಗುಟ್ಟುತ್ತಲೆ ಬೀಳ್ಕೊಟ್ಟಳು.. ಅಂತು ಕಾರು ಸಿದ್ದರ ಬೆಟ್ಟ ತಲುಪಿತು...ಎಲ್ಲರು ಹಳೆಯನೆನಪನ್ನು ಕೆದಕುತ್ತ ಸಾಗಿದರು, ಡಿಸೆಂಬರ್ ತಿಂಗಳಾದ್ದರಿಂದ ಅಷ್ಟಾಗಿ ಬಿಸಿಲಿರಲಿಲ್ಲ..ಎದುರುಸಿರು ಬಿಡುತ್ತ ಬೆಟ್ಟವನ್ನು ತಲುಪಿದ್ದರು ಅಷ್ಟರಲ್ಲಾಗಲೆ ಎಲ್ಲರ ಜೀವ ಕೈಯಿಗೆ ಬಂದಂತಾಗಿತ್ತು. ಬೇಕಾಗಿತ್ತೆ ಈ ವಯಸ್ನಲ್ಲಿ ಎಂದು ಗೊಣಗುಟ್ಟುತ್ತಲ್ಲೆ ಮೇಲೇರಿದರು ...ವಯಸ್ಸಿನ ವಿಷ್ಯ ಕಿವಿಗೆ ಬಿದ್ದಾಗಲೆಲ್ಲ ಅನಿಲ್ ಸಿಡಿಮಿಡಿಗೊಳ್ಳುತಿದ್ದ.. ಅಂತು ಇಂತು ಮೇಲೇರಿಬಂದಾಗ ಸೂರ್ಯನು ತನ್ನ ಪ್ರಕರತೆಗೇನು ವಯಸ್ಸಾಗಿಲ್ಲ ಎನ್ನುವಂತೆ ಮೋಡದಿಂದ ಹೊರ ಬಂದಿದ್ದ.. ಎಲ್ಲರು ಅಲ್ಲೆ ಕುಳಿತು ಮನೆಯಿಂದ ತಿಂದಿದ್ದ ತಿಂಡಿಯನ್ನು ತಿಂದರು...ಆಗಿನ್ದಾಗೆ ಬರುವ ಫೋನ್ಗಳ ಕಾಟ ಬೇರೆ... ಹುಶಾರು..ನಿಧಾನ..ಮೆಲ್ಲಗೆ... ಬರೆ ಇವೆ ಮಾತುಗಳೆ....ಫೋನ್ ನಲ್ಲಿ..ಅನಿಲ್ಗಂತು ಫೋನ್ ನನ್ನು ಕುಕ್ಕಬೇಕೆನಿಸಿತು.. ಅವನ ಆಸೆಯಂತೆ ಆ ಮರದ ಬಳಿ ಬಂದ.. ಒಂದು ಕ್ಷಣ ತನ್ನ ಕಣ್ಣನ್ನೆ ನಂಬದಾದ....ಮರವನ್ನು ತಾನು ತಂದಿದ್ದ ಆ ಫೋಟೊವನ್ನು ಕಣ್ಣು ಬದಲಾಯಿಸಿ ಬದಲಾಯಿಸಿ ನೋಡಿದ..ಮರ ತನ್ನನ್ನು ಅಣಕಿಸುವಂತೆ ಮೈಯೆಲ್ಲ ಹಸಿರು ತುಂಬಿಕೊಂಡು ಇವನನ್ನು ನೋಡಿ ನಕ್ಕಂತಾಯಿತು..... ಎ ಏ.. ಛೆ!!!! ಎಂದು ಹರಿಗೆ ಆ ಫೋಟೊ ತೋರಿಸುತ್ತ ಮತ್ತೆ ಅದೆ ಸ್ಥಳದಲ್ಲಿ ಅದೆ ರೀತಿ ಫೋಟು ತೆಗೆಯುವಂತೆ ಹೇಳಿದ... ಹರಿ ಅದರಂತೆ ತೆಗೆದ..... ಎಲ್ಲರಿಗು ತಮ್ಮ ಹಳೆಯ ನೆನಪನ್ನು ಕೆದಕುತ್ತ ಹೊತ್ತು ಹೋಗಿದ್ದೆ ತಿಳಿಯಲಿಲ್ಲ ಮತ್ತೆ ಫೋನುಗಳ ಕಾಟ ಶುರುವಾಯಿತು ಹೊರಡಿ ಹೊರಡಿ ಎಂದು.... ಎಲ್ಲರು ಹೊರಡಲನುವಾದರು ಅನಿಲನಿಗಂತು....ಮತ್ತೆ ಪಕ್ಷಿಯೊಂದು ಅನಿವಾರ್ಯವಾಗಿ ಪಂಜರಕ್ಕೆ ಸೇರುವಂತ ಪರಿಸ್ಥಿತಿ ಅನಿಸಿತು...ಆದರು ಹೊರಟ..ಆದರೆ ಹರಿಗೆ ನಾಳೆ ಬೆಳೆಗ್ಗೆನೆ ಫೋಟೊವನ್ನು ತಂದುಕೊಡುವಂತೆ ಹೇಳಲು ಮರೆಯಲಿಲ್ಲ.. ಕಾರು .. ತನಗು ವಯಸ್ಸಾಯಿತು ಎನ್ನುವಂತೆ.... ಧಡ ಭಡ ಎಂದು ಮನೆಯತ್ತ ಸಾಗಿತು.... ಎಲ್ಲರು ಮನೆ ತಲುಪಿದರು... ಅನಿಲ್ ಅಂತು ಬೆಳೆಗ್ಗೆ ಯಾವಾಗಾಗುತ್ತದೆಯೊ ಆ ಫೋಟುವನ್ನು ಯಾವಾಗ ನೋಡುತ್ತೇನೆಯೊ ಎಂದು ಕಾಯುತ್ತಿದ್ದ....ಹಾಗೆ ನಿದ್ರೆ ಹೋದ.. ಬೆಳೆಗ್ಗೆ ಬೇಗ ಎದ್ದ ಹರಿಯ ಬರುವಿಕೆಗಾಗೆ ಕಾಯುತ್ತ ಕುಳಿತ...೧೦ ಘಂಟೆ ಆಗುತ್ತ ಬಂದರು ಹರಿಯ ಸುಳಿವೆ ಇಲ್ಲ....ಮನದಲ್ಲೆ ಶಪಿಸುತ್ತ ಫೋನಾದರು ಮಾಡೋಣವೆ ಎಂದು ಹಾಲಿಗೆ ಬಂದು ನಂಬರ್ ಡಯಲ್ ಮಾಡಬೇಕೆನಿಸುವಷ್ಟರಲ್ಲೆ...ಕಾರಿನ ಹರ್ನ್ ಶಬ್ದವಾಯಿತು....ಹರಿ ಬಂದ ಎಂದು ಎದ್ದ..ಆದರೆ ಒಳ ಬಂದಿದ್ದು..ಹರಿಯ ಮಗ...ಮಗ ಒಳ ಬಂದು ಅನಿಲನ ಕೈಗೆ ಒಂದು ಕವರನ್ನಿಟ್ಟು...........ನಿಮ್ಮಪ್ಪ ಬರ್ಲಿಲ್ವೇನಪ? ಇಲ್ಲ ಆಂಕಲ್ ಅಪ್ಪಂಗೆ ತುಂಬಾ ಕೆಮ್ಮು ವಯಸ್ಸಾಯ್ತಲ್ವ....ಹೇಳಿದ್ ಮಾತ್ ಕೇಳಲ್ಲ..ಎಂದು ಗೊಣಗುಟ್ಟುತ್ತಲೆ ಬರ್ತೀನಾಂಕಲ್ ಆಫೀಸಿಗೆ ಹೊತ್ತಾಯ್ತು ನನಿಗೆ ಎಂದು ಹೊರನಡೆದ..ವಯಸ್ಸಾಯ್ತು ಅಂತ ಪದ ಕೇಳಿ ಮಯ್ಯೆಲ್ಲ ಉರಿದಂತಾಯಿತು..ಅದರು ಗಮನವೆಲ್ಲ ಆದಷ್ಟು ಬೇಗ ಆ ಫೋಟವನ್ನು ನೋಡುವುದಾಗಿತ್ತು...ಸರಿ ಎಂದು ಅವನನ್ನು ಬೀಳ್ಕೊಟ್ಟು...ರೂಮಿಗೆ ಬಂದು ಫೋಟೊವನ್ನು ಹೊರತೆಗೆದ... ಅದನ್ನು ನೋಡಿ ಮನಸ್ಸು ಒಂದು ಕ್ಷಣ ಮುದುಡಿದರು..ಯಾವುದೊ ಕಹಿ ಸತ್ಯವನ್ನು ಒಪ್ಪಿಕೊಂಡಿತು.. ವಾಕ್ ಹೋಗುವ ಮನಸ್ಸಾಯಿತು ಎಲ್ಲವನ್ನು ಟ್ರಂಕ್ ಒಳಗಡೆ ಇಟ್ಟು ಧಡ್ ಎಂದು ಮುಚ್ಚಿದ....ಆ ಹಳೆಯ ಟ್ರಂಕ್ ತನಗೆ ವಯಸ್ಸಾಯಿತು ನಿಧಾನ ಎಂಬಂತೆ ಕುಯ್ ಗುಟ್ಟಿತು. ಅದನ್ನರಿತಂತೆ...ಹೆಚ್ಚು ಕಡಿಮೆ ತನ್ನಷ್ಟೆ ವಯಸ್ಸು ಎಂಬಂತೆ ಅದನ್ನು ಸವರಿ ಮೇಲಿಟ್ಟು ನೆನೆದವನಂತೆ ತನ್ನ ಊರುಗೋಲನ್ನು ತೆಗೆದುಕೊಂಡು ಹೊರನಡೆದ.. ಬಗ್ಗಿ ನೋಡಿದ ಹೆಂಡತಿ ಕೈಯಲ್ಲಿದ್ದ ಊರುಗೋಲನ್ನು ನೋಡಿ... ಈಗಲಾದರು ವಯಸ್ಸಾಯಿತು ಅಂತ ಗೊತ್ತಾಯ್ತಲ್ಲ ಎಂದು ಗೊಣಗುಟ್ಟುವುದು ಕೇಳಿತು.........

Rating
No votes yet

Comments