ಕವನ

ಕವನ

ಕವನವದು ಕಾರಂಜಿ
ಪುಟಿದು ಕುಣಿಯುವದು
ಮನಿಸ್ಸಿನಾಳದಿಂದ
ಓಂದು ಶೆಲೆಯಾಗಿ ಹುಟ್ಟಿ
ಹಲವು ಝರಿಯಾಗಿ ಹರಿಯುವದು
ನೂರೆಂಟು ಭಾವಗಳು ಒಟ್ಟುಗೂಡಿ.

ತಿನುಕಿ ಬರೆಯುವದಲ್ಲ
ಭಾವ ಸ್ಫುರನೆಯದು
ಚಿಮ್ಮುವುದು ತಾನೆತಾನಾಗಿ.

ಕವನ ಹುಟ್ಟುವಾಗ
ನೀ ಬರೆಯಬೇಕು
ಬರೆಯಬೇಕೆಂದಾಗ
ಕವನ ಹುಟ್ಟದು ಗೆಳೆಯ.

ಕವನ ಬರುವದು
ಬಾಳ ಕಣ್ಣಾಗಿ
ಮೋಹದ ಹೆಣ್ಣಾಗಿ.

ಕವನ ಹೊಳೆಯಲು ಸಮಯ
ಕಣ್ಣು ಮಿಟಿಕಿಸುವಷ್ಟು
ಅದು ತಾನಾಗಿ ಹೊಳೆದರೆ
ಬರೆಯಬೇಕೆಂದು ಕುಳಿತರೆ
ವರ್ಷವೂ ಉರಳಬಹುದು.

ಕವನವನು ಬರೆಯದಿರು
ಬಂದಾಗ ಬರೆದಿಡು ಅಷ್ಟೆ.

********************
ಎಮ್.ಡಿ.ಎನ್.ಪ್ರಭಾಕರ್
********************

Rating
No votes yet

Comments