ನಿನ್ನ ವಿರಹದ ಪ್ರತಿ ಕ್ಷಣ ..............

ನಿನ್ನ ವಿರಹದ ಪ್ರತಿ ಕ್ಷಣ ..............

ನಲ್ಮೆಯ ಅಪ್ಪಿ ,

ನಿನಗೂ ಆ ಧಾರವಾಡದ ಮಳೆಗೂ ಅದೇನು ಅಂದರೆ ಏನೂ difference ಇಲ್ಲ ನೋಡು .ಬರ್ತೀಯ ಅಂತ ಕಾಯ್ದರೆ ಬರೋಲ್ಲ ,ಬರೋಲ್ಲ ಅಂತ ಬಿಟ್ರೆ ನಿಮ್ಮ ಅಪ್ಪನ ಆನೆಗೂ ನೀನು ಬಂದೇ ತೀರ್ತಿಯಾ.ನಿನ್ನ ಮೇಲೆ ಸಾಯೋವಷ್ಟು ಪ್ರೀತಿ ಇಟ್ಕೊಂಡು ನಿನಗೋಸ್ಕರ ಅದೂ ನಿನಗೋಸ್ಕರ ಮಾತ್ರ ಕಾಯ್ತಾ ಇರ್ತೀನಿ ನೋಡು ಅದಕ್ಕೆ ಸ್ವಲ್ಪ ಕೊಬ್ಬು ಜಾಸ್ತಿ ನಿಂಗೆ.ಅದೇನಾದರೂ 'ನವಗ್ರಹ'ಗಳ ಪರಿಚಯ ನನಗಿದ್ದಿದ್ದರೆ , ಎಲ್ಲ ಬಿಡು at least 'ಶನಿಗ್ರಹ'ದ Contact address ಇದ್ದರೇ ಅವನಿಗೆ ಏನಾದರೂ ಮಸ್ಕಾ ಹೊಡೆದು ಅವನನ್ನ ನಿಪ್ಪನ್ನ ಸುತ್ತ ಸುತ್ತೋಕೆ ಹೇಳಿ , ನಾನು ನೀನು ಇಬ್ಬರೂ ಮಜವಾಗಿ ಸ್ವಲ್ಪ ಎಲ್ಲಾದರೂ ಸುತ್ತಾಡಿಕೊಂಡು ಬರಬಹುದಿತ್ತು. ಆಗ ನಿಪ್ಪಪ್ಪ ತನ್ನ ಒಬ್ಬಳೇ ಒಬ್ಬ ಮಗಳನ್ನು ಸ್ವಲ್ಪ free ಆಗಿ ಬಿಡುತ್ತಿದ್ದ ಅನ್ನೋ ಆಶಾ ಜೀವಿ ನಾನು.

ಹೇ 'ಅಪ್ಪಿ' ಯಾಕೆ ನೀ ಈವತ್ತು Central Library ಕಡೆ ಬರ್ತೀನಿ ಅಂತ ಯಾಕೇ ಬರಲಿಲ್ಲ? ನಿನ್ನ ಭೇಟಿಗಾಗಿ ಇಷ್ಟೊಂದು ಕಾಯಬೇಕ ನಾನು . ಹೋಗಲಿ ಬಿಡು ಆ ಕಯೋದರಲ್ಲೇ ಒಂಥರಾ ಖುಸಿಯಿದೆ. ನಿನ್ನ ವಿರಹದ ಪ್ರತಿಯೊಂದೂ ಕ್ಷಣ ಕೂಡ ನಿನ್ನ ನೆನೆಪಿಗೆ ಮೀಸಲಾಗಿರುತ್ತೆ .

" ನಿನ್ನ ಬರುವಿಕೆಗಾಗಿ ಹಂಬಲಿಸಿ ಕಾಯುವೆನು
ಬಾರದಿರೆ ನೀ ಹೀಗೆ ಮಮ್ಮಲ ನಾ ಮರುಗುವೆನು
ಕೊರಗುವೆನು ಕಾಣದಯೇ ನಿನ್ನ ಮೋಹದ ಮೊಗವ
ಬಂದುಬಿಡು ಸುಮ್ಮನೆ ಕರಗಿ ಹೋಗಲಿ ವಿರಹ ".

ಆ ಭೂಮಿಗಿರೋ ಗುರುತ್ವಾಕರ್ಷಣೆ ಶಕ್ತಿಗಿಂತ ನಿನ್ನ ಪ್ರೀತಿಯ ಮೇಲಿರೋ ಸೆಳೆತ ಹೆಚ್ಚು ಶಕ್ತಿಯುತ . ಈ ದಿನ ಅಂತೂ ನೀನು ಬರಲಿಲ್ಲ, at least ನಾಳೆ ಇದೇ ಸಮಯಕ್ಕೆ ,ಇದೇ ಜಾಗದಲ್ಲಿ, ನಿನಗಾಗಿ ಸಿರ್ಫ್ ನಿನಗಾಗಿ ನಾನು ಕಾಯ್ತಾ ಇರ್ತೀನಿ ಅಂತ ಗೊತ್ತಿರಲಿ .

ಈ ನಿನ್ನ ಪ್ರೀತಿಗೆ ನಾನು ಸಾಯೋಕೂ ಸಿದ್ಧ ಆದರೆ ಸತ್ತಮೇಲೂ ನಾ ನಿನ್ನ ಬಿಡೋ ಪ್ರೇಮಿ ಅಲ್ಲವೇ ನಾನು, ನಿನ್ನ ಬಗ್ಗೆ ಸಾಗರದಷ್ಟು ಪ್ರೀತಿ ಒಡಲಲ್ಲಿ ಇಟ್ಟುಕೊಂಡು ಬದುಕುತ್ತಿರುರವ ನನಗೆ ಆ ಸಾವೂ ಕೂಡ ನನ್ನ ಹತ್ತರ ಯಾಕೆ ಸುಳಿಯುತ್ತೆ ?
ಆಗಲೀ Its getting late ನಾನು ಈಗ ಹೋಗಿ ನೀನು ಬರೆದಿರೋ ಪತ್ರಗಳ ಜೊತೆ ನಾ ನನ್ನ ರಾತ್ರಿ ಕಳಿತೀನಿ ಮತ್ತೆ ಹಗಲಲ್ಲಿ ಬಂದು ನಿನಗಾಗಿ ಕಾಯ್ತಾ ಇರ್ತೀನಿ.

ಇಂತಿ ನಿನ್ನವ

'ಚಿನ್ನು '

Rating
No votes yet

Comments