ಸವಾರೀನೋ ಪಯಣವೋ !

ಸವಾರೀನೋ ಪಯಣವೋ !

ಮೇ ೨೧. ದಿನದ ವಿಶೇಷ ಏನ್ ಗೊತ್ತಾ ? ರಾಜೀವ್ ಗಾಂಧಿ ಹತ್ಯೆ ನಡೆದಿತ್ತು ಅಂತೀರಾ ನೀವು ! ಆದ್ರೆ ನಾನ್ ಹೇಳ್ತೇನೆ ಇದೇ ತಾರೀಕಿನಂದು ನಾನು ಭೂಮಿಗೆ ಬಂದ್ ಆಕಾಶ ನೋಡಿದ್ದು ಅಂತ. ಈ ತಾರೀಕಿನ್ನು ಈ ವರ್ಷ ಅವಿಸ್ಮರಣೀಯ ಮಾಡ್ಬೇಕು ಅಂದ್ಕೊಂಡಿದ್ದೆ. ಅದಕ್ಕೆ ಕಾಲವೂ ಕೂಡಿ ಬಂದಿತ್ತು. ಎಲೆಕ್ಷನ್ ಅನ್ನೋ ಕಾರಣಕ್ಕೆ ಎರಡೂವರೆ ತಿಂಗ್ಳಿಂದ ಊರಿಗೆ ಹೋಗಿರ್‍ಲಿಲ್ಲ. ಐದ್ ದಿನ ರಜೆ ಹಾಕಿ ಎಲ್ಲಾದ್ರೂ ಹೋಗೋಣ ಅಂತಿದ್ದೆ. ಚಾನೆಲ್ ಹಿರಿಯರಿಂದ ಮೇ ೨೦ ರಂದು ಅದಕ್ಕೆ ಸಮ್ಮತಿ ಕೂಡಾ ಸಿಕ್ಕಿತು.

ಮೇ ೨೧ ೨೦೦೯

ಬೆಳಗ್ಗೆ ೬ ಗಂಟೆಗೆ ಎಚ್ಚರಾಯ್ತು. ಬೆಳಗ್ಗೆ ಬೆಳಗ್ಗೆ ಮೊಬೈಲ್‌ನಲ್ಲಿ ಎಸ್ಸೆಮ್ಮೆಸ್ ಕುಣಿದಾಡ್ತಾ ಇತ್ತು. ಏನು ಅಂತ ನೋಡಿದ್ರೆ ! ಇನ್ನಾದ್ರೂ ಹೊರಗೆ ಬಂದ್ ನೋಡು... ಸೂರ್ಯ ಆಗ್ಲೇ ಹುಟ್ಟಿದ್ದಾನೆ ಅಂತ ! ಹಾಗೆ ಎದ್ದು, ನಿತ್ಯ ಕರ್ಮ ಮುಗಿಸಿ ಹೊರಡೋಣ ಅಂತ ಯೋಚಿಸ್ತಿರೋವಾಗ ವಾರ್ತಾವಾಚಕಿಯೊಬ್ರು ಕಾಲ್ ಮಾಡಿ ಶುಭಾಶಯ ಕೋರಿದ್ರು... ಅಬ್ಬಾ ! ಇನ್ನಾದ್ರೂ ಹೊರಡೋಣ ತಮ್ಮನ್ ಜೊತೆಗೆ ಇಂದಾದ್ರೂ ನಾಸ್ಟಾ ಮಾಡೋಣ ಅಂತ ಅಂದ್ಕೋತಿದ್ದೆ. ಅವನಿಗೆ ಎಸ್‌ಎಂಎಸ್ ಕೂಡಾ ಮಾಡಿದ್ದಾಗಿತ್ತು. ಇನ್ನಿಬ್ರು ಹಿತೈಷಿಗಳೂ ಕಾಲ್ ಮಾಡಿ ವಿಷ್ ಮಾಡಿದ್ರು.ಅಷ್ಟರಲ್ಲೇ ಗೆಳೆಯ ಸುನಿಲ್ ಫೋನ್ ಮಾಡಿ ವಿಷ್ ಮಾಡಿದ. ಹಾಗೆ ಅವನನ್ನ ಮನೆಗೆ ಆಹ್ವಾನಿಸಿದೆ. ಇದೆಯಲ್ಲಾ ಪುಳಿಯೋಗರೆ ಮಿಕ್ಸ್. ಅದನ್ನ ಅನ್ನಕ್ಕೆ ಕಲಸಿ ತಿಂದು ಹೊರಡೋಣ ಅನ್ನೋವಾಗ ಗಂಟೆ ಹನ್ನೆರಡು. ಇಲ್ಲಿಂದಲೇ ಶುರು.. ಅದನ್ನ ಪಯಣ ಅಂತ ಹೇಳ್ಬೇಕೋ ಅಥವಾ ಸವಾರಿ ಅಂತಾನೋ !

ಸವಾರಿ ಅಂದ್ರೆ !

ಸುಂಕದಕಟ್ಟೆಯಿಂದ ಹೊರಟೆ ನೋಡಿ. ಸವಾರಿಗೆ ಸಾಥ್ ನೀಡಿದ್ದು ಹೀರೋ ಹೋಂಡಾ ಎನ್‌ಎಕ್ಸ್‌ಜಿ. ಔಟರ್ ರಿಂಗ್ ರೋಡ್ ಕಡೆಗೆ ಹೋಗುವಾಗ ಎಡಗಡೆಯಲ್ಲೊಂದು ಪೆಟ್ರೋಲ್ ಬಂಕ್ ಕಾಣಿಸ್ತು. ಸರಿ ನಂದೇನೋ ಹೊಟ್ಟೆ ತುಂಬಿದೆ. ಸಾಥಿಗೆ ಹೊಟ್ಟೆ ತುಂಬಿಸ್‌ಬೇಕಲ್ಲಾ ಅಂತ ಅತ್ತ ಕಡೆ ತಿರುಗಿಸಿದೆ ಸಾಥೀನ. ಅದಕ್ಕೆ ೨೦೦ ರೂಪಾಯಿ ಪೆಟ್ರೋಲ್ ಕುಡಿಸಿದೆ. ಪೆಟ್ರೋಲ್ ಬಂಕ್ ಅಂಕಲ್‌ಗೆ ಕೇಳ್ದೆ "ತುಮಕೂರು ರೋಡ್‌ಗೆ ಹೇಗೆ ಹೋದ್ರೆ ಹತ್ರ?" ಅಂತ. ಅವರೇನಂದ್ರು ಗೊತ್ತೆ ? ಸೀದಾ ವಾಪಸ್ ಹೋಗಿ. ೩ ಕಿ.ಮೀ. ಹೋದ್ರೆ ನೈಸ್ ರೋಡ್ ಸಿಗತ್ತೆ. ಅಲ್ಲಿಂದ ಹೋಗೋದ್ ಸುಲಭ ಅಂತ.
ಅವರ ವಿವರಣೆ ಕೇಳಿ ಸುಸ್ತಾಗಿ ಹೋದೆ.
ಏನಾದ್ರಾಗ್ಲಿ ಅಂತ ಔಟರ್ ರಿಂಗ್ ರೋಡ್‌ಗೆ ಬಂದೆ. ಅಲ್ಲಿಂದ ಸೀದಾ ಹೋಗಿ ತುಮಕೂರು ರೋಡ್‌ಗೆ ಸೇರ್‍ದೆ. ಅಲ್ಲಿಂದ ನೆಲಮಂಗಲ ಸೇರೋಕೆ ಒಂದು ಗಂಟೆ ಬೇಕಾಯ್ತು. ಮಧ್ಯಾಹ್ನ ಆದ್ರೂ ಬೆಂಗಳೂರು ಟ್ರಾಫಿಕ್ ಹೇಳ್ಬೇಕಾ...! ಬೈಕ್ ಆದ ಕಾರಣ. ಸ್ವಲ್ಪ ಬೇಗಾನೇ ನೆಲಮಂಗಲ ತಲುಪಿದೆ ಅನ್ನಿ.
ಜಿಗ್ ಜಾಗ್ ಮಾಡ್ತಾ ಹೋಗೋದೆ ಖುಷೀನಪ್ಪಾ ! ಆದ್ರೆ ತುಂಬಾ ಏನೂ ಜಿಗ್ ಜಾಗ್ ಮಾಡ್ಲಿಲ್ಲ. ಯಾಕೋ ಭಯ ! ಮುಂದೆ ಸಾಲು ಸಾಲಾಗಿ ಬೈಕ್‌ಗಳು, ಲಾರಿಗಳು, ಬಿಎಂಟಿಸಿ ಬಸ್‌ಗಳು, ಕಾರುಗಳು ಹೀಗೇ ಇರುವೆಗಳ ತರಹ ಹೋಗ್ತಾ ಇದ್ರೆ ಅವುಗಳ ನಡುವೆ ತೂರಿಕೊಂಡು ಹೋಗೋದೇ ಒಂಥರಾ ಥ್ರಿಲ್ ! ಹಾಗೂ ಹೀಗೂ ನೆಲಮಂಗಲ ದಾಟಿದ್ದಾಯ್ತು...
<ಮುಂದುವರೆಯತ್ತೆ...>

Rating
No votes yet

Comments