ಅರುಂಧತಿ (ಹೆಣ್ಣುಮಗಳೊಬ್ಬಳ ನಿಜ ಕಥೆ)

ಅರುಂಧತಿ (ಹೆಣ್ಣುಮಗಳೊಬ್ಬಳ ನಿಜ ಕಥೆ)

ಹಿಂದೊಮ್ಮೆ ಲ್ಯೆಂಗಿಕ ಶೋಷಣೆ ಕುಟುಂಬದಲ್ಲೇ ಯಾಕೆ ? ಎಂಬ ಬ್ಲಾಗ್ ಬರಹವನ್ನು ಬರೆದಿದ್ದೆ, ಅದರಲ್ಲಿ ಸುಮುಖನ ಮನಕಲಕುವ ವಿಚಾರಗಳನ್ನು ಬಹಿರಂಗಪಡಿಸಿದ್ದೆ. ಲ್ಯೆಂಗಿಕಶೋಷಣೆ ಕುಟುಂಬದಲ್ಲೇ ಯಾಕೆ ? ಈಗ ಇದೇ ಸರಣಿಯಲ್ಲಿ ಮತ್ತೊಂದು ನಿಜ ಸ್ವರೂಪವನ್ನು ಒಬ್ಬ ಹೆಣ್ಣುಮಗಳ ಜೀವನ ಕಥೆಯನ್ನು ತೆರೆದಿಡುವ ಪ್ರಯತ್ನ ಮಾಡುತ್ತಿದ್ದೇನೆ.

 

ಇಲ್ಲಿ ಪದ್ಮಾ (ಹೆಸರು ಬದಲಿಸಲಾಗಿದೆ) ಕಥೆಯ ನಾಯಕಿ,

"ಅಯ್ಯೋ ! ಏನಾಯ್ತೇ ಚಂಡಾಳಿ, ನನ್ನ ಮಗನಿಗೆ ಏನು ಮಾಡಿಸಿದೆ, ಅವನು ಹೀಗೆ ಆಸ್ಪತ್ರೆಯಲ್ಲಿ ದಿನಗಟ್ಟಲೆ ಇದ್ದು, ತಪಾಸಣೆಗಳು, ಮಾತ್ರೆಗಳು ಹೀಗೆ ಒಂದರ ಮೇಲೊಂದರಂತೆ ತೆಗೆದುಕೊಂಡರು, ಅವನ್ಯಾಕೆ ಹೀಗಾಗಿದ್ದಾನೆ" ನಾನು ತೀರ್ಥಯಾತ್ರೆಗೆ ಹೋಗಿ ಬರುವುದರೊಳಗೆ ಅವನನ್ನು ಹೀಗೆ ಮಾಡಿದ್ದೀಯಾ, ನಿನ್ನ ಮುಖ ತೋರಿಸಬೇಡ, ಹೊರಡಿನ್ನು, ಸಾವಿತ್ರಿಬಾಯಿ ಮಗನ ಅವಸ್ಥೆಯನ್ನು ನೋಡಿ, ಸೊಸೆಗೆ ಹಿಗ್ಗಾಮುಗ್ಗಾ ಬ್ಯೆಯ್ಯುತ್ತಿರುತ್ತಾಳೆ, ಅತ್ತೆ ನಾನೇನು ಮಾಡಲಿಲ್ಲ, ಈಗ್ಗೆ ಕೆಲವು ದಿನಗಳಿಂದ ಅವರಿಗೆ ಇದ್ದಕ್ಕಿದ್ದಂತೆ ಸುಸ್ತು, ಜ್ವರ ಬಿಟ್ಟು ಬಿಟ್ಟು ಬರುತ್ತದೆ, ನಾನು ಡಾ!! ಸುರೇಶರ ಬಳಿ ಕರೆದುಕೊಂಡು ಹೋಗಿದ್ದೆ, ಅವರು ಇಲ್ಲಿಗೆ ಸೇರಿಸಲು ಹೇಳಿದರು, ಆದರೆ ಇವರಿಗೆ ಏನಾಗಿದೆ ಅಂತ ನನ್ನ ಹತ್ರ ಹೇಳಲಿಲ್ಲ, ಪದ್ಮಾ ಪರಿಪರಿಯಾಗಿ ಸಾವಿತ್ರಿಬಾಯಿಗೆ ಪರಿಸ್ಥಿತಿಯನ್ನು ವಿವರಿಸಿದರೂ, ತಾಯಿ ಕರಳು ಮಗನ ಸ್ಥಿತಿಯ ಬಗ್ಗೆಗಷ್ಟೆ ಯೋಚನೆ.

ಇಷ್ಟೆಲ್ಲಾ ಮಾತುಕತೆಗಳು ನಡೆಯುತ್ತಿದ್ದರು ಶ್ರೀನಿವಾಸ ತನಗೇನು ಸಂಬಂಧವಿಲ್ಲದಂತೆ, ಹಾಸಿಗೆಯಲ್ಲಿ ಮಲಗಿಕೊಂಡು ಎಲ್ಲವನ್ನೂ ನೋಡುತ್ತಿರುತ್ತಾನೆ, ಅವನಿಗೆ ತಾಯಿಯ ಬಾಯಿಗೆ ಎದುರಾಡುವ ಧ್ಯೆರ್ಯವಾದರೂ ಎಲ್ಲಿಂದ ಬರಬೇಕು. ಅವಮಾನ ತಾಳಲಾರ ಪದ್ಮಾ ಹೊರಗೆ ಬಂದು ದುಖಿಃಸುತ್ತಿರುವಾಗ, ಶ್ರೀನಿವಾಸನ ತಂದೆ ರಾಮಚಂದ್ರರಾಯರ ಆಗಮನ, ಮಾವನನ್ನು ನೋಡಿದ ಮೇಲೆ ಪದ್ಮಾಳಿಗೆ ದುಃಖ ತಡೆಯಲಾಗಲಿಲ್ಲ. ಮಾವ, ಯಾರೂ ನನ್ನ ಮಾತನ್ನು ಕೇಳುತ್ತಿಲ್ಲಾ, ಅತ್ತೆ ತುಂಬಾ ಹೀನಾಯವಾಗಿ ನನ್ನನ್ನು ಬ್ಯೆಯ್ಯುತ್ತಿದ್ದಾರೆ, ಇದರಲ್ಲಿ ನನ್ನ ತಪ್ಪೇನು ? ಅಂತಾ. ರಾಮಚಂದ್ರರಾಯರಿಗೆ ಪದ್ಮಾಳನ್ನು ಸಂತ್ಯೆಸಲಾಗದೆ, ಸುಮ್ಮನಾಗಿ ಹೋದರು.

 

ಪದ್ಮಾ ಅಂದರೆ ನೀವೆನಾ..........? ಡಾಕ್ಟರ್ ಕರೀತಿದ್ದಾರೆ ನಿಮ್ಮನ್ನ, ವಾರ್ಡ್ ಬಾಯ್ ಕರೆದಾಗಲಿ ಪದ್ಮಾ ಎಚ್ಚೆತ್ತಿದ್ದು, ಹಾ.........ನಾನೇ ಪದ್ಮಾ,,,,  ಎಂದು ಲಗುಬಗನೆ, ಡಾಕ್ಟರ್ ಇದ್ದ ಕೋಣೆಗೆ ದೌಡಾಯಿಸಿದಳು. ಡಾ!! ಸತ್ಯನಾರಾಯಣ, ಬಹು ಪ್ರಸಿದ್ದ ತಜ್ಣರು, ಪದ್ಮಾ ಒಳಗೆ ಬರುತ್ತಿದ್ದಂತೆ ಡಾಕ್ಟರರ ಗಂಭೀರ ಮುಖ ನೋಡಿ, ಅಳು ತಡೆಯಲಾಗದೆ, ಡಾಕ್ಟರ್ ನನ್ನ ಗಂಡನನ್ನು ಉಳಿಸಿಕೊಡಿ, ನಾನು ಅನಾಥೆ, ನನಗೆ ಅವರನ್ನು ಬಿಟ್ಟರೆ ಬೇರೆ ದಿಕ್ಕಿಲ್ಲ ?, ಅವರನ್ನು ನಂಬಿಕೊಂಡು ನಾನು, ನನ್ನ ಹೊಟ್ಟೆಯಲ್ಲಿರೋ ಕುಡಿ ಜೀವ ಇಬ್ಬರೂ ಇದ್ದೇವೆ. ದಯವಿಟ್ಟು ಉಳಿಸಿಕೊಡಿ...................... ಪದ್ಮಾರವರೆ, ಸ್ವಲ್ಪ ಧ್ಯೆರ್ಯವಹಿಸಬೇಕು, ನೀವು ಗರ್ಭಿಣಿ ಹೀಗೆಲ್ಲಾ ಅನಾಯಾಸವಾಗಿ ಆಯಾಸ ಮಾಡಿಕೊಳ್ಳಬಾರದು, ನಾನು ಹೇಳುವುದನ್ನ ಧ್ಯೆರ್ಯವಾಗಿ ಕೇಳಿ, ನಿಮ್ಮ ಗಂಡ ಶ್ರೀನಿವಾಸನನ್ನು ಉಳಿಸಲು ನಮ್ಮಿಂದ ಸಾಧ್ಯವಿಲ್ಲ, ಆದರೆ ಅವರನ್ನು ಕೆಲವು ದಿನಗಳವರೆಗೆ ಬದುಕಿಸಿಕೊಡಲಷ್ಟೆ ನಮ್ಮಿಂದ ಸಾಧ್ಯ, ಧ್ಯೆರ್ಯತಂದುಕೊಳ್ಳಿ....ಡಾ!! ಸತ್ಯನಾರಾಯಣ್ ತಮ್ಮ ಅಸಹಾಯಕತೆಯನ್ನು ವಿವರಿಸುತ್ತಿದ್ದಂತೆ, ಪದ್ಮಾಗೆ ಇದ್ದ ಒಂದು ಆಸರೆಯೂ ಕಣ್ಮರೆಯಾಗಿತೆಂಬ ಭಾವನೆ.

 

ಏನಾಯ್ತು ಡಾಕ್ಟರ್ ? ನನ್ನವರಿಗೆ ? ಅದೇ ಅಮಾಯಕ ಪ್ರಶ್ನೆ ಪದ್ಮಾಳದು.........................

 

 

(ಮುಂದುವರೆಯುವುದು)

 

 

 

 

 

Rating
No votes yet

Comments