ನಾ ಮಾಡ್ತಿರೋದು ಸರಿನಾ?

ನಾ ಮಾಡ್ತಿರೋದು ಸರಿನಾ?

ಸ್ನೇಹಿತರೆ,

ನಾನು ಶಿವಮೊಗ್ಗ ವಾಪಸಾಗಬೇಕೆಂದು ತೀರ್ಮಾನ ಮಾಡಿದ್ದೇನೆ. ಈಗ ಮಾಡ್ತಿರೋ ಕೆಲಸ ಬಿಡೋ ನಿರ್ಧಾರ.. ಮಾಡಿದ್ದೇನೆ..

ಇದು ನನ್ನ ಬಹು ದಿನದ ಆಸೆ.. ಎಷ್ಟೋ ದಿನದಿಂದ, ಪ್ರತಿ ಬಾರಿ ಶಿವಮೊಗ್ಗ ಬಂದು ಹೋದಾಗಲೆಲ್ಲ ಮತ್ತೆ ನಾ ಯಾವಾಗ ತಿರುಗಿ ಇಲ್ಲಿಗೆ ಬರುವೆ? ಶಿವಮೊಗ್ಗದಲ್ಲೇ ಸೆಟಲ್ ಅಗೋ ನನ್ನ ಆಸೆ ಯಾವತ್ತಪ್ಪ ಈಡೇರೋದು ಅಂತ ಪ್ರತಿ ಬಾರಿ ಅಂದುಕೊಳ್ಳುತ್ತಲೇ ವಾಪಸಾಗುತ್ತಿದ್ದೆ.

ಈ ಬಾರಿ ಶಿವಮೊಗ್ಗ ಹಿಂತಿರುಗಿದಾಗ ನನ್ನ ನಿರ್ಧಾರದಲ್ಲಿ ಶಿವಮೊಗ್ಗ ಹಿಂತಿರುಗಬೇಕೆಂಬ ಆಸೆ ಬಹು ಬಲವಾಗಿತ್ತು.

ನಾನೀಗ ಪುಣೆಯಲ್ಲಿ ಇದ್ದೇನೆ.. ಒಂದು ಒಳ್ಳೆ ಕಂಪನಿಯಲ್ಲಿ (ಸಾಫ್ಟ್ವೇರ್ ಡಿವಿಷನ್) ಕೆಲಸ. ಸದ್ಯ ಪರ್ಮನೆಂಟ್ (ಅಂದ್ರೆ pay-roll) ಆಗಿಲ್ಲವಾದ್ದರಿಂದ ಇನ್ನು ಬಹು ಕಡಿಮೆ ಸಂಬಳ..(ಮೂರು ವರ್ಷ ಆಗೋಯ್ತು ಆಗಲೇ ಕೆಲಸ ಶುರು ಮಾಡಿಕೊಂಡು).

ಶಿವಮೊಗ್ಗ ವಾಪಸ್ ಹೋದರೆ ಸಂಬಳ ಜಾಸ್ತಿ ಸಿಗೋಲ್ಲ ಅನ್ನೋ ಕಾರಣದಿಂದ ವಾಪಸಾಗಲು ಹೆದರಿದ್ದ ನನಗೆ, ನನ್ನ ಸಾಫ್ಟ್ವೇರ್ ಗ್ರಾಹಕ, ಇಂದಿಗೆ ಸ್ನೇಹಿತರಾಗಿರುವ ಒಬ್ಬರು "ನಮ್ಮಲ್ಲೇ ಮ್ಯಾನೇಜರ್ ಆಗಿ ನಮ್ಮ ಚಿಕ್ಕ ಈ Pharmaceutical Distributors ಅಂಗಡಿಗೆ" ಅಂದಾಗ, ನನ್ನ ನಿರ್ಧಾರ ಬಲಗೊಂಡಿತು. ಕೆಲಸ ಬಿಡೋ ಯೋಚನೆ ಮಾಡಿದೆ.

ನನಗೆ ಈಗ ಬರೋ ಸಂಬಳದಲ್ಲಿ ನಾನು ಎಲ್ಲ ಖರ್ಚು ತೆಗೆದು ಉಳಿಸೋ ಪ್ರಯತ್ನದಲ್ಲಿ ಸದಾ ಕಾಲ ಸೋಲು ಆಗುತ್ತಿರುವಾಗ, ಬರೋ ಸ್ವಲ್ಪ ಸಂಬಳದಲ್ಲೂ ಶಿವಮೊಗ್ಗದಲ್ಲಿ ಉಳಿಸ ಬಹುದು.. ಅಂತ ಅನ್ನಿಸಿತು.

 

ಹೂಂ.. ಇನ್ನು ಸದ್ಯಕ್ಕೆ ಶಿವಮೊಗ್ಗ ಹಿಂತಿರುಗಲು ಮುಖ್ಯವಾಗಿ ಎರಡು ಕಾರಣಗಳು.

೧. ನನಗೆ ಪೂನಾದಲ್ಲಿ ಒಂದು ವರ್ಷದ ಮೇಲೆ ಇದ್ದೂ ಕೂಡ ಇನ್ನೂ ಪೂನಾದ ಊಟ ಹಿಡಿಸದೆ ನನ್ನ ಆರೋಗ್ಯ ಪೂರ ಹಾಳಾಗಿರುವುದು

೨. ಇದು ಅತಿ ಮುಖ್ಯವಾದ ಕಾರಣ.. ನನ್ನ ತಂದೆ ತಾಯಿಯರು ಆಗ್ಲೇ ೬೦ ಹಾಗು ೫೦ ದಾಟಿರೊದ್ರಿಂದ ಅವರ ಜೊತೆ ಸದ್ಯ ಯಾರು ಇಲ್ಲದೇ ಇರೋದ್ರಿಂದ, ಅವರ ಆರೋಗ್ಯ ಅತಿಯಾಗೆ ನನ್ನನ್ನು ಬೇಡುತ್ತಿರುವುದರಿಂದ, ನನ್ನ ಪ್ರಸ್ತುತಿ ಅಲ್ಲಿನ ಅತ್ಯವಶ್ಯಕತೆಗೆ ಹೆಚ್ಚು ಅನ್ನಿಸುತ್ತಿರೋದ್ರಿಂದ.

೩. ಇನ್ನೂ.. ನಗಣ್ಯ ಕಾರಣಗಳು.. ನನಗೆ ನಾನು ಏನೇ ಮಾಡಿದರು ಶಿವಮೊಗ್ಗದಲ್ಲೇ ಮಾಡಬೇಕು, ಕೊನೆಗೂ ಶಿವಮೊಗ್ಗ ಹೋಗಿ ಸೆಟಲ್ ಆಗಲೇ ಬೇಕಲ್ವೆ ಅನ್ನೋ ಯೋಚನೆಗಳು.

[quote]ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ...[/quote] ಹಾಗಂತ ಶ್ರೀ ರಾಮಚಂದ್ರನೇ ಹೇಳಿದ್ದಾನೆ.. ನಂದೇನು ಇನ್ನೂ ಒಗ್ಗರಣೆ..

 

ಆದರೆ, ಸ್ನೇಹಿತರೆ,

ನೋಡೋಕ್ಕೆ ಸಣ್ಣದಾದ ಈ ನಿರ್ಧಾರ, ಜೀವನದ ಮಹತ್ವದ ತೀರ್ಮಾನ ಅನ್ನೋದು ನನಗೆ ತಿಳಿದಿದೆ. ಹಾಗಾಗಿ ಹೆಚ್ಚು ಕಡಿಮೆ ಒಂದು ತಿಂಗಳಿಂದ ಒದ್ದಾಟದಲ್ಲಿ ಇದ್ದೇನೆ..

ಬಹು ಕಷ್ಟ ಆಗಿದೆ.. ನೆಮ್ಮದಿ ಅನ್ನೋದು ಎಲ್ಲೋ ಹಾರಿಹೋಗಿದೆ..

ಬಹುಶ ಸಂಪದಿಗರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಅನ್ಕೋತೀನಿ.

ಅದಕ್ಕೆ.. ಅದರ ಒತ್ತಡ ತಡೆಯಲಾರದೆ.. ಅದನ್ನ ನಿಮ್ಮೆಲ್ಲರ ಮುಂದೆ ಇಟ್ಟಿದ್ದೇನೆ..

ನಿಮಗೇನನ್ನಿಸುತ್ತೆ..ನನ್ನ ನಿರ್ಧಾರ ಸರಿಯೇ.. ತಪ್ಪೇ..

ತಪ್ಪು ಅಂತ ತಿಳಿಸಿದರೂ, ಸಮಯ ಮೀರಿದೆ ಬದಲಾಯಿಸಲು ಈಗ ಅಂದರೂ ಕೂಡ, ನನಗೆ ನಿಮ್ಮ ಮುಂದೆ ಇಡುವುದರ ಮೂಲಕ ಮನಸ್ಸಿಗೆ ಒಂದು ಸಮಾಧಾನ ಸಿಗಬಹುದೇ ಅಂತ ಒಂದು ಆಸೆ..ಇಂತ ವಿಚಿತ್ರ ಸನ್ನಿವೇಶ, ಮಹತ್ವದ ತೀರ್ಮಾನದ ಘಳಿಗೆಗಳು ಎಲ್ಲರಿಗೂ ಎಷ್ಟೋ ಸಮಯ ಎದುರಾಗಿರುತ್ತೆ ಅಲ್ವೇ? ನನಗೆ ಯಾರಿಂದಾದರೂ, ಯಾವುದರಿಂದಾದರೂ, ಸಮಾಧಾನ ಸಿಗಬಹುದೇನೋ ಅನ್ನೋ ಒಂದು ಸಣ್ಣ ಆಸೆ..

ಸಂಪದಿಗರೇ ನಿಮ್ಮ ಅನಿಸಿಕೆ ಏನು?

ಏನು ಅನ್ನಿಸುತ್ತದೆ ನಿಮಗೆ..

 

ನಿಮ್ಮ ಉತ್ತರಕ್ಕೆ ಕಾಯತ್ತಿರುವ

ನಿಮ್ಮೊಲವಿನ,

ಸತ್ಯ.

Rating
No votes yet

Comments