ಹೊಡಿ..ಹೊಡಿ..ಬಿಡಬೇಡ ಬಾಂಗ್ಲಾನ
ಮೊನ್ನಿನ ಬಾಂಗ್ಲಾ ವಿರುದ್ಧದ ಪಂದ್ಯ ದಲ್ಲಿ ವಿನ್ ಆದರೂ ಎಲ್ಲೂ ಪಟಾಕಿ ಸದ್ದೇ ಇಲ್ಲಾ.ಎಲ್ಲರಿಗೂ ಖುಶಿಗಿಂತ ಬೇಸರವೇ ಜಾಸ್ತಿ ಆಯಿತುಕಾಣುತ್ತದೆ.ದ್ರಾವಿಡ್ ಶತಕ ಹೊಡೆದಾಗ ಡಿಕ್ಲೇರ್ ಮಾಡುತ್ತಾರೆ ಎಂದಿದ್ದೆ. ದ್ರಾವಿಡ್ ಔಟ್-ಡಿಕ್ಲೇರ್ ಇಲ್ಲಾ.,ಸಚಿನ್ ೫೦ಹೊಡೆದ,೧೦೦ ಹೊಡೆದ…ಊಹೂಂ…ಬಾಂಗ್ಲಾ ವಿರುದ್ಧ ೬೦೦+ ರನ್ ದಾಖಲೆ.ಪುಣ್ಯಕ್ಕೆ ಗಂಗೂಲಿ ಔಟಾದ.ಇಲ್ಲದಿದ್ದರೆ ಸ್ಕೋರ್ ೭೦೦-೮೦೦ ದಾಟುತಿತ್ತು.
(ಗಲ್ಲಿ ಕ್ರಿಕೆಟ್ನಲ್ಲೂ ಸಹ ಎದುರಾಳಿ ಟೀಮ್ ದುರ್ಬಲವಿದ್ದರೆ, ಪ್ರಮುಖರನ್ನು ಆಡಲು ಬಿಡದೆ ಹೊಸಬರನ್ನು ಆಡಿಸುವರು .ಇಲ್ಲಾ ಒಂದು ಸಾಧಾರಣ ಮೊತ್ತಕ್ಕೆ ಡಿಕ್ಲೇರ್ ಮಾಡುವರು.) ನಮ್ಮ ಪ್ರಮುಖ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಹೀಗೆ ಬರ್ಮುಡ,ಕೆನ್ಯಾ, ಜಿಂಬಾಬ್ವೆ ಮೇಲೆ ಆಗಾಗ ಟೆಸ್ಟ್ ಸರಣಿಗಳನ್ನು ಇಡುವುದು ಒಳ್ಳೆಯದು
Rating
Comments
ಉ: ಹೊಡಿ..ಹೊಡಿ..೨ ವರ್ಷ ಪೂರ್ತಿ..