ಇಂತಹ ವ್ಯವಸ್ಥೆ ಇಲ್ಲೇಕೆ ಸಾಧ್ಯವಾಗ್ತಾ ಇಲ್ಲ?

ಇಂತಹ ವ್ಯವಸ್ಥೆ ಇಲ್ಲೇಕೆ ಸಾಧ್ಯವಾಗ್ತಾ ಇಲ್ಲ?

ನಾನು ಇತ್ತೀಚೆಗಷ್ಟೇ ಉತ್ತರ ಭಾರತಕ್ಕೆ ಹೋಗಿದ್ದೆ.. ಅಲ್ಲಿನ ಬಿಸಿಲು ಬೇಗೆ ಬೆಂಗಳೂರಿನ ನೆನಪನ್ನು ನೋರುಪತ್ತು ಹೆಚ್ಚಿಸಿತ್ತು. ಇದಲ್ಲದೆ ನನಗೆ ಬೆಂಗಳೂರಿನ ನೆನಪು ತಂದ ವಿಷಯಗಳು ಬೇಕಷ್ಟು.
ನಾನು ದೆಲ್ಲಿಯಿಂದ ಉತ್ತರಪ್ರದೇಶಕ್ಕೆ ಹೋಗಿದ್ದೆ. ಮತ್ತೆ ಮಧ್ಯ ಪ್ರದೇಶಕ್ಕೆ. ಇಲ್ಲೆಲ್ಲ ಜನರು ತಮ್ಮ ನಿತ್ಯ ವ್ಯವಹಾರಗಳಿಗೆ ಬಳಸುವುದು ಹಿಂದಿ ಮತ್ತು ಹಿಂದಿ ಮಾತ್ರ. ಅಲ್ಲಿನ ಜನರಿಗೆ ತಮ್ಮ ತಾಯ್ನುಡಿಯನ್ನು ಬಿಟ್ಟು ಮತ್ತೆ ಬೇರೇನನ್ನು ಬಳಸುವ ಕಾರಣವೆ ಇಲ್ಲ. ದೆಲ್ಲಿಯಿಮ್ದ ಕೆಲವೇ ಕೆಲವು - ಅಂದ್ರೆ ಸುಮಾರು ೫೦ ಕಿ. ಮೀ ಗಳ ನಂತರ ಎಲ್ಲಾದರು ಇಂಗ್ಲಿಷಿನ ಬೋರ್ಡ್ಗಳು ಕಾಣುವುದು ತುಂಬಾ ಕಡಿಮೆ. ಇಂತ ಉರು ಇಂತ ಕಡೆ ಇದೆ, ಇಲ್ಲ ಇಂತ ಉರು ಇಷ್ಟು ದೂರ ಇದೆ.. ಇದೆಲ್ಲ ಅಲ್ಲಿಗೆ ಬರುವ ಬೇಕಷ್ಟು ಯಾತ್ರಿಕರಿಗೆ ಬೇಕಾಗುವ ವಿಷಯಗಳದ್ರು, ಇವೆಲ್ಲ ಇರೋದು ಹಿಂದಿಯಲ್ಲಿ ಮಾತ್ರ... ಅದೇ ನಮ್ಮ ಕರ್ನಾಟಕದಲ್ಲಿ, ಇದಕ್ಕೆ ತದ್ವಿರುಧ್ಧ... ಕನಕಪುರದಿಂದ ಯಾವುದೊ ಒಂದು ಸಣ್ಣ ಹಳ್ಳಿಗೆ ಎಷ್ಟು ದೂರ ಅನ್ನೋ ಮೈಲಿಗಲ್ಲುಗಳು ಬೇಕಾದಷ್ಟು ಹಿಂದಿಯಲ್ಲಿ ಮಾತ್ರ ಇವೆ... ಇದು ಯಾರ ಉಪಯೋಗಕ್ಕಾಗಿ?
ಇಷ್ಟೇ ಅಲ್ಲ, ಬಹುತೇಕ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಕೂಡ ಕೇವಲ ಹಿಂದಿ ಮಾತ್ರ ಇರುತ್ತೆ... ಚಿಕ್ಕ ಹಳ್ಳಿಗಳಲ್ಲಿ ಮಾತ್ರ ಹೀಗೆ ಎಂದೇನಲ್ಲ... ಮಧ್ಯ ಪ್ರದೇಶದ ಜಬ್ಬಲ್ ಪುರ ಸಾಕಷ್ಟು ದೊಡ್ಡ ಊರು...ಅಲ್ಲಿನ ರೈಲ್ವೆ ನಿಲ್ದಾಣದಲ್ಲಿ 'Reservation Counter' ಅಂತ ಎಳ್ಳು ನಿಮಗೆ ಇಂಗ್ಲಿಷ್ನಲ್ಲಿ ಕಾಣದು.. 'Counter closed/open' ಇದು ಕೂಡ ಹಿಂದಿಯಲ್ಲಿ ಮಾತ್ರ.

ನಾನು ಬೆಂಗಳೂರಿಗೆ ವಾಪಸ್ಸು ಬಂದದ್ದು ದೆಲ್ಲಿಯ ಏರ್- ಪೋರ್ಟ್ನಿಂದ.. ಅಲ್ಲಿಯೂ ಎಲ್ಲಾ ಹಿಂದಿಯೇ.. Indian Airlinies ನಲ್ಲಿ ಇರ‍ೋಗಗನ ಸಖಿಯರುಹೆಚ್ಚಾಗಿ ಮಾತಾಡೊದು ಹಿಂದಿನೇ.. Indian airlines ನಲ್ಲಿ ದೆಲ್ಲಿಯಿಂದ ಬೆಂಗಳೂರಿಗೆ ಬರ್ತಾಇರೋ ವಿಮಾನದಲ್ಲಿ ಕಡೇ ಪಕ್ಷ ಕನ್ನಡದಲ್ಲಿ ಒಂದು ಪ್ರಕಟಣೇನೂ ಇರೋದಿಲ್ಲ.. ಹಿಂದಿಯಲ್ಲಿ ಇರ‍ೊ ಪ್ರಕಟಣೆಗಳ ೫೦% ಮಾತ್ರ ಇಂಗ್ಲಿಷ್ನಲ್ಲಿ ಇರುತ್ವೆ.. 

ಇದಿಷ್ಟು public transport ಬಗ್ಗೆ ಆಯ್ತು... ಅಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳು, ಕ್ಲಿನಿಕ್ಗಳ ಹೆಸರುಗಳು, ವೈದ್ಯರುಗಳ ಹೆಸರುಗಳು, ಎಲ್ಲಾ ಹಿಂದಿಯಲ್ಲಿ ಮಾತ್ರ..

ಇದನ್ನೆಲ್ಲ ನೋಡಿ ನನಗನ್ನಿಸಿದ್ದು ಇಷ್ಟು... ಹೇಗೆ ಜಪಾನ್-ನಲ್ಲಿ ಜಪಾನೀಯರು ತಮ್ಮ ಮಾತ್ರು ಭಾಷೆಯಿಂದ ತಮ್ಮ ಜೀವನ ಸಗ್ಸ್ತಾಇದಾರೋ, ಹಾಗೆ ಭಾರತದಲ್ಲಿ ಹಿಂದಿ ತಾಯ್ನುಡಿಯವರು ತಮ್ಮ ಭಾಷೆಯೊಂದಿಗೆ (ತಮ್ಮ ತಾಯ್ನಾಡಿನಲ್ಲಿ) ಆನಂದವಾಗಿ ಜೀವನ ಸಾಗ್ಸ್ತಾ ಇದಾರೆ.. ಅವರಿಗೆ ತಮ್ಮ ನಿತ್ಯ ಜೀವನಕ್ಕಾಗಿ ತಮ್ಮದಲ್ಲದ ಬೇರೆ ಇನ್ನೊಂದು ಭಾಷೆಯನ್ನು ಕಲಿಯೋ ಅಗತ್ಯ ಅಷ್ಟಾಗಿ ಇಲ್ಲ... ಅಲ್ಲಿನ ಜನಗಳಿಗೆ ಇದು ಎಷ್ಟು ಚೆನ್ನ ಅಲ್ವೆ? ಆದ್ರೆ, ನೋಡಿ, ನಮ್ಮ ಕರ್ನಾಟಕದಲ್ಲಿ ಹೀಗೆ ನಡೀತಾ ಇದ್ಯ? ಇಲ್ಲ.. ಇಲ್ಲಿ ಕನ್ನಡ ಇಲ್ದೇ ಆರಾಮಾಗಿ ಬದುಕೋ ಹಾಗೆ ಆಗ್ತಾ ಇದೆ.. ಕನ್ನಡಿಗರಿಗೆ ತಮ್ಮದಲ್ಲ ಬೇರೊಂದು ನುಡಿಯನ್ನ ಕಲಿಯೋ ವ್ಯವಸ್ತೆ ಬರ್ತಾ ಇದೆ.. ಭಾರತ ಸರ್ಕಾರ ಹಿಂದಿಗೆ ಕೊಡೋ ಎಲ್ಲಾ ಸವಲತ್ತುಗಳನ್ನ ಕನ್ನಡಕ್ಕೂ ಕೊಡ್ಬೇಕು.. ಕರ್ನಾಟಕದಲ್ಲಿ ಕನ್ನಡ ಇಲ್ದೆ ಬದುಕೋದಕ್ಕೆ ಸಾಧ್ಯ ಇಲ್ಲ ಅನ್ನೋ ಪರಿಸ್ತಿತಿ ಬರ್ಬೇಕು.. ಕನ್ನಡಿಗರು ಕೂಡ ಎಲ್ಲೇ ಹೋದ್ರು ಕನ್ನಡ ಮಾತ್ರ ಗೊತ್ತಿದ್ರೆ ಸಾಕು ಅನ್ನೋ ವ್ಯವಸ್ತೆ ಬರ್ಬೇಕು.. 

 

Rating
No votes yet

Comments