ಭಾವಗೀತೆಯ ಸೊಗಡು...

ಭಾವಗೀತೆಯ ಸೊಗಡು...

ಭಾವಗೀತೆ ಎಂದರೆ ನಂಗೆ ತುಂಬಾ ಇಷ್ಟ. ಭಾವಗೀತೆಗಳನ್ನು ನಮಗೆ ನಾವೆ (ಯಾರಿಗೂ ಕೇಳಿಸದ ಹಾಗೆ ) ಗುಣುಗಿಕೊಂಡರೆ ಮನಸ್ಸಿಗೆ ಏನೋ ಒಂದು ಸಮಾಧಾನ. ..ಕಣ್ಣಲ್ಲಿ ಎರಡು ಹನಿ ನೀರು (ಕೆಲವು ಸಲ ಆನಂದ ಭಾಷ್ಪ) ಬಂದರೆ ಅದಕ್ಕಿನ್ನೂ ಬಹುಮಾನ/ಪ್ರಶಸ್ತಿ ಬೇಕಾ...?
ಈ ಕೆಳಗಿನ ಸಾಲ್ಗಳ ಎತ್ತರ (ಭಾವ) ಗಮನಿಸಿ....ಪ್ರೇಮದಲ್ಲೂ ಎಷ್ಟೂಂದು ಧನಾತ್ಮಕವಾದ
ಆಕಾಂಕ್ಷೆಗಳನ್ನು (ಕವಿ) ವ್ಯಕ್ತಪಡಿಸಿದ್ದಾರೆ.

ನೀನಿಲ್ಲದೆ ನನಗೇನಿದೆ
ಮನಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ ನನಗೇನಿದೆ

ನಿನಗಾಗಿ ಕಾದು ಕಾದು
ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವ(ವು)
ಹಗಲಿರುಳು ತಂದೆ ನೀನು ||೨||

ಎದೆಯಾಸೆ ಎನೋ ಎಂದು ನೀ ಕಾಣದಾದೆ
ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೆ ನಿನ್ನಿಂದ ನಾ ಬಯಸಿದೆ

ನೀನಿಲ್ಲದೆ ನನಗೇನಿದೆ
ಮನ್ಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ ನನಗೇನಿದೆ

ಒಲವೆಂಬ ಕಿರಣ ಬೀರಿ
ಒಳಗಿರುವ ಕಣ್ಣ ತೆರಿಸಿ
ಒಣಗಿರುವ ಎದೆನೆಲದಲ್ಲಿ
ಭರವಸೆಯ ಜೀವ ಹರಿಸಿ ||೨||

ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗೊ
ಹೊಸ ಜೀವೆ ನಿನ್ನಿಂದ ನಾ ಕಾಣುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ

ನೀನಿಲ್ಲದೆ ನನಗೇನಿದೆ
ಮನ್ಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ ನನಗೇನಿದೆ
---------------------
ಸಾಹಿತ್ಯ : ಎಂ. ಎನ್. ವ್ಯಾಸ ರಾವ್
ಸಂಗೀತ : ಸಿ. ಅಶ್ವಥ್

ನಿಮಗಿಷ್ಟವಾದ ಭಾವಗೀತೆಗಳು ಯಾವ್ದು..?

Rating
No votes yet

Comments