"ಆವರಣ" ದ ಬಗ್ಗೆ ಅನಂತಮೂರ್ತಿಯ ಅಸಂಬದ್ಧ ಪ್ರಲಾಪಗಳು
ಮನುಷ್ಯ ಸಹಜ ಮತ್ಸರದ ಪ್ರಭಾವಕ್ಕೆ ಒಳಗಾಗಿ ಅನಂತಮೂರ್ತಿಯವರು ಆಡಿದ ಮಾತುಗಳಿಗೆ ಮೌನವಾಗಿದ್ದು ಅವರ ಕುರಿತು ಅನುಕಂಪ ಸೂಚಿಸಿ ಕೇವಲ ಮೌನವಾಗಿರವುದು ಸಹ್ಯವಾಗಲಿಲ್ಲ. ಅನಂತಮೂರ್ತಿಯರ ವಿಪರೀತ ವರ್ತನೆಗಳಿಗೆ ಸಹ ಸಾಹಿತಿಯ ಕುರಿತಾಗಿ ಮಾತ್ಸರ್ಯ,ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮಾನನೀಯ ಬೈರಪ್ಪನವರು ಬೆಂಬಲ ಕೊಡದಿರುವುದು, ಅನಂತಮೂರ್ತಿಯವರ ಮಾತುಗಳಲ್ಲಿ ಆಗಾಗ ಇಣುಕುವ "ನಮ್ಮೂರ್ನಾಗೆ ನಾನೊಬ್ನೆ ಜಾಣ" ಎಂಬ ಭಾವ ಇವುಗಳೆಲ್ಲ ಕಾರಣವಾಗಿದೆ.
ತಮ್ಮ ಬಾಲಿಶ ದೋರಣೆಗಳಿಗೆ ತಾತ್ವಿಕ "ಆವರಣ" ರಚಿಸುವ ಅನಂತಮೂರ್ತಿಯವರ ಪ್ರಯತ್ನ ನಗೆಪಾಟಲಿಗೀಡಾಗಿದೆ.
ಇತಿಹಾಸವೆಂದರೆ ತನ್ನ ಮನೋಭಾವಕ್ಕೆ ಸರಿಯಾಗಿ ಬೇಕಾಬಿಟ್ಟಿ ಬರೆಯಬಹುದಾದ ಕಥೆ,ಕವನ,ಕಾದಂಬರಿಯಲ್ಲವಲ್ಲ. ಅದು ಆಗಿ ಹೋಗಿರುವ ಘಟನೆಗಳು. ಹಿಂದೆ ನಡೆದ ಘಟನಾವಳಿಯಿಂದ ಪಾಠ ಕಲಿತು ಮುಂದಿನ ಜೀವನ ರೂಪಿಸಿಕೊಳ್ಳುವುದೇ ಇತಿಹಾಸದ ಅಧ್ಯಯನದ ಉದ್ದೇಶ. ಹಿಂದೆ ನಡೆದ ಘಟನೆಗಳಿಗೆ ಇಂದಿನವರನ್ನು ದೂರುವುದು ಹೇಗೆ ತಪ್ಪೊ ಹಾಗೆ ಇತಿಹಾಸದಿಂದ ಏನೂ ಕಲಿಯದೆ ತಪ್ಪುಗಳನ್ನು ಪುನಾರಾವರ್ತಿಸುವುದೂ ತಪ್ಪಾಗುತ್ತಲ್ಲವೆ?
ಈ "ಬುದ್ದಿಜೀವಿ"ಗಳು ಇತಿಹಾಸದ ವಾಸ್ತವತೆಗಳಿಗೆ ಸೌಮ್ಯತೆಯ ಕಪಟ ಮುಖವಾಡ ತೊಡಿಸಲು ಯಾಕೆ ಯತ್ನಿಸುತ್ತಾರೆ ? ಸುಳ್ಳಿನ ತಳಪಾಯದ ಮೇಲೆ ರಚಿಸಿದ ಇತಿಹಾಸವನ್ನು ಕಲಿತು ಡಿಗ್ರಿ ಪಡೆದುಕೊಳ್ಳುವ ಅರ್ಥವಾದರೂ ಏನು? ಈ ಪ್ರಗತಿ(?) ಪರರು, ವಿಚಾರವಾದಿಗಳ "ಗುಪ್ತ ಕಾರ್ಯಸೂಚಿ" ಏನು?
Comments
ಉ: "ಆವರಣ" ದ ಬಗ್ಗೆ ಅನಂತಮೂರ್ತಿಯ ಅಸಂಬದ್ಧ ಪ್ರಲಾಪಗಳು
In reply to ಉ: "ಆವರಣ" ದ ಬಗ್ಗೆ ಅನಂತಮೂರ್ತಿಯ ಅಸಂಬದ್ಧ ಪ್ರಲಾಪಗಳು by narendra
ಉ: "ಆವರಣ" ದ ಬಗ್ಗೆ ಅನಂತಮೂರ್ತಿಯ ಅಸಂಬದ್ಧ ಪ್ರಲಾಪಗಳು