ಕನ್ನಡವನ್ನು ಹಾರಲು ಬಿಡದ B.I.A.L

ಕನ್ನಡವನ್ನು ಹಾರಲು ಬಿಡದ B.I.A.L

ಕರ್ನಾಟಕದಿಂದ ಹೊರರಾಜ್ಯ ಅಥವಾ ವಿದೇಶಕ್ಕೆ ವಿಮಾನದ ಮೂಲಕ ಪ್ರಯಾಣಿಸಿರುವ ಪ್ರತಿಯೊಬ್ಬರನ್ನೂ ಗಾಢವಾಗಿ ತಾಗಿರುವ ಅಂಶವೆಂದರೆ, "ಏರ್ಪೋರ್ಟ್ ಅಥವಾ ವಿಮಾನಗಳಲ್ಲಿ ಕನ್ನಡದ ಅನುಪಸ್ಥಿತಿ". ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ್ಗೊಂಡು, ವಿಮಾನಯಾನ ಸೇವೆ ನೀಡುವ ಪ್ರತಿಯೊಂದು ಸಂಸ್ಥೆಗಳಲ್ಲಿ ಕನ್ನಡದ ಬಳಕೆ "ತೀರಾ ಕಡಿಮೆ" ಅಥವಾ "ಇಲ್ಲವೇ ಇಲ್ಲ" ಎನ್ನಬಹುದು. 
B.I.A.L ಅಂತೂ ಕನ್ನಡ ಪತ್ರಿಕೆಗಳಿಗೆ ಬಹಿಷ್ಕಾರನೇ ಹಾಕಿಬಿಟ್ಟಿದೆ.  ಇದೇ ಕಾರಣಕ್ಕೆ ಕರ್ನಾಟಕ ಸರ್ಕಾರದಿ೦ದ ಛೀಮಾರಿ ಕೂಡ ಹಾಕಿಸಿಕೊ೦ಡಿದೆ. 
B.I.A.L ನಲ್ಲಿ ಗ್ರಾಹಕರನ್ನು ಕನ್ನಡದಲ್ಲಿ ಮಾತಾಡಿಸುವುದಿಲ್ಲ. ವಿಶ್ರಾ೦ತಿ ಕೊಠಡಿಗಳಲ್ಲಿ, ತೆರಿಗೆ ರಹಿತ ಅ೦ಗಡಿಗಳಲ್ಲಿ ಮತ್ತು ವಿಮಾನದ ಒಳಗಡೆ ಕನ್ನಡದ
ದಿನಪತ್ರಿಕೆಗಳಾಗಲಿ, ಹೊತ್ತಿಗೆಗಳಾಗಲಿ ಸಿಗುವುದಿಲ್ಲ. 

ನಾಮಫಲಕಗಳಲ್ಲಿ ಕನ್ನಡ ಮೂಲೆಗು೦ಪಾಗಿದೆ.

tax & duty free shop in BIAL


ಮತ್ತು ಹಲವಾರು ಕಡೆ ನಾಮಫಲಕಗಳು ಹಿ೦ದಿ ಮತ್ತು ಇ೦ಗ್ಲೀಷ್ ನಲ್ಲಿ ಮಾತ್ರ ಇವೆ.

instruction in BIAL


ಇವರ ಕನ್ನಡದ ಕಡೆಗಣನೆಯಿ೦ದ ಗ್ರಾಹಕರಿಗೆ ಉಂಟಾಗುತ್ತಿರುವ ಅನಾನುಕೂಲವನ್ನು ಕ೦ಡು ಸರ್ಕಾರಾವು ತಾನೂ ಒ೦ದು ಮಾತು ಹೇಳಿ ನೋಡೋಣ ಎ೦ದು, "ಗ್ರಾಹಕರಿಗೆ  ಕನ್ನಡದ ದಿನಪತ್ರಿಕೆ ವಿಮಾನದ ಒಳಗೆ ಹಾಗು ಹೊರಗೆ ಸಿಗುವ ಹಾಗೆ ಮಾಡಿ ಅಂತ ಆದೇಶ ನೀಡಿದೆ".

ಹೊರಜಗತ್ತಿಗೆ ನಮ್ಮ ನಾಡಿನ ಹೆಬ್ಬಾಗಿಲಿನಂತಿರುವ ಏರ್ಪೋರ್ಟ್-ಗಳು ಈ ನಾಡಿನ ವಿಶೇಷತೆಯನ್ನು ಎತ್ತಿ ಸಾರುವಂತಿರಬೇಕಲ್ವಾ? ನಮ್ಮ ನಾಡಿಗೆ ಬರುವ ಅತಿಥಿಗಳನ್ನು ಕನ್ನಡದ ಕಂಪಿನೊಂದಿಗೆ ಬರಮಾಡಿಕೊಂಡರೆ ನಮ್ಮ ವಿಭಿನ್ನತೆ ಜಗತ್ತಿಗೆ ತೋರಿಸಿದಂತೆ.
ಇದರಿಂದ ನಮ್ಮಲ್ಲಿ ಬರುವ ಅತಿಥಿಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚುತ್ತದೆ ಎ೦ಬುದು B.I.A.L ಅರಿತುಕೊಳ್ಳಬೇಕು.

B.I.A.Lನಲ್ಲಿ ಆಗ್ತಿರೋ ಕಡೆಗಣನೆಗೆ ಕೈ ಜೋಡಿಸಿದ ಹಾಗೆ ಸ್ಪೈಸ್ ಜೆಟ್, ಕಿಂಗ್ ಫಿಷರ್ ನಂತಹ ವಿಮಾನಯಾನ ಸಂಸ್ಥೆಗಳು ತಮ್ಮ ಜಾಹೀರಾತುಗಳನ್ನು ಕೇವಲ ಇಂಗ್ಲಿಷ್-ನಲ್ಲಿ ಹಾಕುತ್ತಾರೆ. ಬೆಂಗಳೂರಿನಲ್ಲಿ ಎಲ್ಲೆಡೆ ಕಾಣಲು ಸಿಗುವ ಜಾಹಿರಾತುಗಳೇ ಇರಲಿ, ವಿಮಾನದೊಳಗೆ ಒದಗಿಸುವ ಸೇವೆಯಲ್ಲೇ ಇರಲಿ, ಎಲ್ಲೂ ಕನ್ನಡಕ್ಕೆ ಸೂಕ್ತ ಸ್ಥಾನ ಕೊಟ್ಟಿಲ್ಲ. 
ಕನ್ನಡ ಬಲ್ಲವರು ವಿಮಾನಗಳಲ್ಲಿ ಪ್ರಯಾಣ ಮಾಡುವುದಿಲ್ಲ ಎಂದು ನ೦ಬಿಕೊ೦ಡಿದ್ದಾರಾ ?

ಕೋರಮ೦ಗಲದಲ್ಲಿನ ಸ್ಪೈಸ್ ಜೆಟ್ ನ ಜಾಹೀರಾತು ಫಲಕದಲ್ಲಿ ನೋಡಿ ಎಷ್ಟು ದೊಡ್ದದಾಗಿ ಕಾಣುತ್ತಿದೆ ಕನ್ನಡದ ಲಿಪಿ (ಫಲಕದ ಎಡ ತುದಿಗೆ)

spice jet hoarding in koramangala"


ಕನ್ನಡಿಗರು ಎಷ್ಟೇ ಭಾಷೆ ಕಲಿತರೂ ಅವರ ಹೃದಯದ ಭಾಷೆ ಕನ್ನಡವೊಂದೇ, ಈ ನಮ್ಮ ಹೃದಯದ ಭಾಷೆ ಎತ್ತರೆತ್ತರ  ಹಾರಲು ತಾನು ಅಡ್ಡ ಬರದ ಹಾಗೆ BIAL ನೋಡಿಕೊಳ್ಳಬೇಕು. ಬನ್ನಿ, "ಜಗತ್ತಿನೆಲ್ಲೆಡೆ ಕನ್ನಡದ ಕಂಪು ಪಸರಿಸಲು ನೀವು ಕಾರಣರಾಗಬಹುದು" ಅಂತ ಇವರಿಗೆ ತಿಳಿಸೋಣ. 
"ಇದರಿಂದ ನಮ್ಮ ವಿಭಿನ್ನತೆಯ ಪರಿಚಯ ಜಗತ್ತಿಗೇ ಮಾಡಿಸಬಹುದು" ಅಂತ ನಾವು ತೋರಿಸಿಕೊಡೋಣ. 
ಈ ವಿಷಯದ ಬಗ್ಗೆ B.I.A.L ಅಥವಾ ಬೇರೆ ವಿಮಾನಯಾನ ಸಂಸ್ಥೆಗಳಿಗೆ ಬರೆಯಲು ಈ ಮಿಂಚೆ-ಗಳನ್ನು ಬಳಸಿರಿ

BIAL: feedback@bialairport.com

Spicejet: custrelations@spicejet.com

Kingfisher: http://www.flykingfisher.com/feedback.aspx

indigo: customer.relations@goindigo.in

paramount: feedback@paramountairways.com

Jet airways: customerrelations@jetairways.com

Rating
No votes yet

Comments