"ಸಂಪದ" ಸಹೃದಯರೇ

Submitted by mdnprabhakar on Wed, 06/03/2009 - 14:05

ಬಂದಿಹೆನು "ಸಂಪದ" ಕೆ
ಬರಮಾಡಿಕೋ ಎನ್ನ
" ಬರವಣಿಗೆ " ತಂದಿಹೆನು
ಓದಿ ಹರಸೆನ್ನ.

ಸಂಪಿಗೆಯ ಗುಂಪೊಂದು
"ಸಂಪದ"ವೇ ಆಗಿಹುದು
ಆಗ ಬಯಸುವೆ ನಾನು
ಆ ಗುಂಪೊಂದರ "ಹೂ "ವ.

ಆಕ್ಕರೆಯ ನಗೆಯವರೇ
ಸಕ್ಕರೆಯ ಮಾತಿನವರೇ
ತಪ್ಪಿದರೆ ತಿದ್ದುವ
ಸಹೃದಯ ಓದುಗರೇ.

ನನಗಿಂತ ಕಿರಿಯರಿಲ್ಲ
ನಿಮಗಿಂತ ಹಿರಿಯರಿಲ್ಲ
ನನ್ನ ತಿದ್ದಿ ಹರಸುವ ಭಾರ
ಹಿರಿಯರದೇ ಎಲ್ಲಾ.

ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ
ಅದರಿಂದಲೇ ಏಳ್ಗೆ
ನಮ್ಮೆಲ್ಲರ ಬಾಳ್ಗೆ .

********************
ಎಮ್.ಡಿ.ಎನ್.ಪ್ರಭಾಕರ
********************

Rating
No votes yet

Comments