ಕೆಲವು ಜನ, ಹಲವು ಮಾತು

Submitted by raghava on Thu, 06/04/2009 - 00:45

ಪತಿಯ (ಭೋರ್ಗರೆದುಕ್ಕಿ ಹರೀತಿರೋ) ಭಕ್ತಿ ಬಗ್ಗೆ ಹೆಂಡ್ರ ಉವಾಚ: ನಮೆಜ್ಮಾನ್ರು ಬಿಡಿ! ಏನ್ಭಕ್ತೀ ಏನ್ಸಂಸ್ಕಾರ! ಕೆಲ್ಸಕ್ಕೊಂದರ್ಧ ಗಂಟೆ ಲೇಟಾದ್ರೂ ಪರ್ವಾಗಿಲ್ಲಾ, ದಿನಾ ಸಹಸ್ರನಾಮ ಓದೋದು ತಪ್ಸೋದೇ ಇಲ್ಲ! ಒಂದರ್ಧಗಂಟೆ ಮುಂಚೇನೇ ಬಂದು ಪ್ರವಚನಕ್ಕೆ ತಪ್ದೇ ಹೋಗ್ತಾರೆ! ಏನ್ಭಕ್ತೀ, ಏನಾಚಾರಾ! ಅಯ್ಯೋ!
/* ಏನಾದ್ರೂ ಅವ್ನೇ ಎಲ್ಲಾ ನೋಡ್ಕೋತಾನೇ! ******ರ್ಪಣಮಸ್ತು! */

ಪ್ರವಚನ ಕೊಡೋ ಪುಣ್ಯಾತ್ಮ (ಪ್ರವಚನದಲ್ಲೇ): ನಮ್ದೇವ್ರು ರೀ! ಅವ್ನ್ಮುಂದೇನಾ? ಅವ್ನೇ ಎಲ್ಲಾ! ಅವ್ನ್ಮುಂದೆ ಬೇರೇ ಎಲ್ಲಾ ದೇವ್ರುಗ್ಳೂ ಕಾಲ್ಕಸ! ಪುರಾಣ ಶಾಸ್ತ್ರಗಳೇ ಹೇಳಿಲ್ವೇ! ಪ್ರೂವಾಗ್ಹೋಗಿದೇಂತೀನೀ! (ಅಲ್ಲೇ ಇದ್ದ ಮರಿಜೂನಿಯರ್ನೆಕ್ಸ್ಟಿನ್ಕಮಾಂಡ್ ದೇವ್ರೇಜೆಂಟುಗಳು ತಲೆ ಅಲ್ಲಾಡ್ಸ್ಕೊಂಡು ಜೈಕಾರ ಹಾಕ್ತವೆ) ನಾವೂ ನೋಡೋ ತನ್ಕ ನೋಡ್ತೀವ್ರೀ! ನಮ್ದೇವ್ರ ಬಗ್ಗೆ ಯಾರಾದ್ರೂ ಏನಾದ್ರೂ ಹೇಳ್ದ್ರೇ ಸುಮ್ನೇ ಬಿಡ್ತೀವಾ? ಹಿಡ್ದು ದರ್ದ್ಬಿಡ್ತೀವಿ ಮತ್ತೆ!
/* ಯಾವ್ನೋ ಎಲ್ಲೋ ಹೇಳ್ಬುಟ್ನಂತೇ ಅದೇನೋ ದಯವೇ ಮೂಲಾ ಮಣ್ಣು ಮಸೀಂತಾ, ದೇವ್ರೇ ಏನೂ ಹಂಗ್ಹೇಳಿಲ್ವಂತೇ, ಇನ್ನಿದನ್ಯಾವನ್ಕೇಳ್ತಾನೆ! */

ತಮ್ಮೊಬ್ನೇ ಮಗ್ನಿಗೆ ಹೆಣ್ಹುಡುಕ್ತಿರೋರು‌ (ಅತ್ಲಾ ಕಡೆ ತಮ್ಮಗ್ಳಿಗೆ ಗಂಡನ್ಹುಡುಕ್ತಿರೋರ್ಗೆ): ಓ! ತಂಗೀನೂ ಇದಾಳಾ? ಇನ್ನೂ ಓದ್ತಿದಾಳಾ? ಮುಂದೇ ಎಮ್ಬೀಬೀಯೆಸ್ಮಾಡ್ತಾಳಂತಾ? ಎಮ್ಡೀನೂ ಓದ್ಬೇಕಂತಾ? ಬೆಂಗ್ಳೂರಲ್ಲೇನೂ ಆಸ್ತಿ ಇಲ್ವಾ ಹೆಣ್ಮಕ್ಳಹೆಸ್ರಿಗೆ? (ಮನ್ಸಲ್ಲಂದ್ಕಳದು: 'ಪ್ರಯೋಜ್ನ್ವಿಲ್ಲ, ಏನೂ ಲಾಭ್ವಿಲ್ಲ!') ನೋಡ್ಬಿಟ್ಹೇಳ್ತೀವ್ಬಿಡಿ!
/* ಮದ್ವೇ ಮಾರ್ಕೆಟ್ಟೋ ಮದ್ವೇ ಮಾರ್ಕೆಟ್ಟು‌ */

ತಮ್ಮೊಬ್ಳೇ ಮಗ್ಳಿಗೆ ಗಂಡಿನ ಅನ್ವೇಷಣೆಯಲ್ಲಿರೋರು (ಅತ್ಲ ಕಡೆ ತಮ್ಮಗ್ನಿಗೆ ಹೆಣ್ಹುಡುಕ್ತಿರೋರ್ಗೆ): ಓ! ಬೆಂಗ್ಳೂರಲ್ಮನೆ ಇಲ್ವಾ? ಸೈಟೂ ಇಲ್ವಾ? ಮಾರುತಿ ಏಐಠಂಡ್ರೆಡ್ಡೇನಾ ಇನ್ನೂ ಇಟ್ಕೊಂಡಿರೋದು?! ಫಾರಿನ್ನಿಗೂ ಹೋಗಿಲ್ವಾ? ಮದ್ವೆ ಆದ್ಮೇಲೂ‌ ಅಪ್ಪ-ಅಮ್ಮನ್ಜೊತೆ ಇರೋ ಯೋಚ್ನೇನಾ? ( ಮನ್ಸಲ್ಲೇ ಅಂದ್ಕಳದು, 'ಓ! ಇದ್ಯಾದೋ ಪ್ಯಾದೆ! ನಮ್ಸುರ್ಸುಂದ್ರಿಗೆ ಈ ಗಂಡ್ಬೇಡಪ್ಪ!') ನೋಡ್ಬಿಟ್ಹೇಳ್ತೀವ್ಬಿಡಿ!
/* ಮೂವತ್ರೊಳ್ಗೇ ಹುಡುಗ್ರು ಸೆಟ್ಲಾಗಿರ್ಬೇಕು, ಮನೆ ಆಸ್ತಿ ಎಲ್ಲಾ ಮಾಡ್ಕೊಂಡು! ಇಲ್ಲಾಂದ್ರೆ ಅವ್ರೇನೂ ಪ್ರಯೋಜ್ನ ಇಲ್ಲ! ಭಾಳ ಒಳ್ಳೇ‌ ಲಾಜಿಕ್ಕು! */

ಮನೇಕೆಲ್ಸದ್ಸಾಕಮ್ಮಂಗೆ ಹೈಸೊಸೈಟಿ ಶೀಲಾ ಹೇಳ್ತಿರೋದು (ಸಾಕಮ್ಮ ಮಗ್ಳ ಸ್ಕೂಫೀಸಿಗೆ ಬೇಕು, ಇವತ್ಕೊನೇ ದಿನಾ, ಮುಂದಿನ್ತಿಂಗ್ಳ ಸಂಬ್ಳ ಮೊದ್ಲೇ ಕೊಡೀಂತ ಕೇಳಿದ್ದಕ್ಕೆ ) : ಓ, ಮರ್ತೇ ಬಿಟ್ಟೆ ಸಾಕ್ಸ್! ಯೂನೋ, ನಾನು ಈಗ್ತಾನೇ ಚೈಲ್ಡ್ ವೆಲ್ಫೇರ್ ಎಂಡ್ ಲಿಟರಸೀ ಬಗ್ಗೇಂತ ಒಂದು ಈವೆಂಟಿದೆ, ಅದ್ಕೆ ಅರ್ಜೆಂಟ್ ಹೊರ್ಟಿದೀನಿ. ನಾಳೇ ಮೋಸ್ಟ್ಲೀ ಮುಂಚೇನೇ ಹೊರ್ಟ್ಬಿಡ್ತೀನಿ ಇನ್ನೊಂದು ಎಜುಕೇಶನ್ಫಾರಾಲ್ ಅನ್ನೋ ಪ್ರೋಗ್ರಾಮ್ಗೆ. ಅದೆಲ್ಲಾ ನಂಸಂಘದ್ದೇ ಗೊತ್ತಾ? ಪೇಪರ್ನಲ್ಲಿ ಫೋಟೋ ಕೂಡ ಬರತ್ತೆ! ನೋಡು! ಅಯ್! ನಾನೊಳ್ಳೇ, ನಿಂಗೆಲ್ಲಿ ಓದೋಕ್ಬರತ್ತಲ್ವಾ! ಸರ್ಸರಿ, ನಂಗ್ಲೇಟಾಯ್ತು. ನಾಳಿದ್ದು ಬಂದು ಕೊಡ್ತೀನಿ!
/* 'ಛೆಛೆಛೆಛೆ .. ಒಂತಾ ದೊಡ್ಗುಣ. ಏನೇನೆಲ್ಲಾ ಒಳ್ಳೇ ಕೆಲ್ಸಾ ಮಾಡ್ತಾರೆ ಶೀಲಾ ಮೇಡಮ್ಮು ತಮ್ಸಂಘದ್ವತಿಯಿಂದಾ!‌' ಪೇಪರ್ರಲ್ನೋಡಿ ಒಬ್ಬನ ಉದ್ಗಾರ. */

/* ಇನ್ನೂ ಇಂಥಾವು ಸಿಕ್ಕಾಬಟ್ಟೆ ಇವೆ, ಸಮ್ಯ ಸಿಕ್ಕಿ ನೆನ್ಪಿಗ್ಬಂದಾಗ್ಲೆಲ್ಲಾ ಇಲ್ಗೀಚಿಡ್ತೀನಿ. */

Rating
No votes yet

Comments