ಬಾ ಸಖಿ

ಬಾ ಸಖಿ

ಹುಸಿ ಮುನಿಸು ತೋರದಿರು ಸಖಿ
ನಿನ್ನ ಹಸನಾದ ಮುಖಕ್ಕಲ್ಲ
ಅದು ಭೂಷಣ ಕಿಸಿ ಕಿಸಿ ಅಂತೊಮ್ಮೆ ನಕ್ಕು
ಖುಷಿಯ ಅಲೆಯನ್ನೊಮ್ಮೆ ನನ್ನ ಬಾಳಲಿ ತಾ

ಬಾಳ ದಾರಿಯಲಿ ಇರಬಹುದು
ನೂರೆಂಟು ಕಲ್ಲುಗಳು ಅಂದ ಮಾತ್ರಕ್ಕೆ
ಬಿಡುವುದೇ ನಡೆಯುವುದನ್ನೇ ?
ಸರಿಸಿ ನೋಡೊಮ್ಮೆ ಆ ಕಲ್ಲುಗಳ
ನೀ ಕಾಣುವೆ ಮೆತ್ತಗಿನ ಹೂವು ಹಾಸಿನ ದಾರಿಯ

ನಾ ಇಡುವ ಪ್ರತಿ ಹೆಜ್ಜೆಯಲೂ ಕಂಡಿಹೆನು
ನಾ ನಿನ್ನ ಮೊಗವ ಆ ಹೆಜ್ಜೆಗೆ
ನಿನ್ನ ಆ ಒಲವೆಂಬ ಪ್ರೀತಿಯ ಸುರಿದು
ಹೆಜ್ಜೆಯೊಳಗಿನ ಗುರುತಾಗಿ ಬಾ

ಬಾಳ ಈ ಪಯಣದಲಿ ಇರುವರು
ನೂರೆಂಟು ಮಂದಿ ನಿನ್ನ ನೋಯಿಸಲು
ಎಲ್ಲವನು ಮರೆತು ಬಾ ಒಮ್ಮೆ ನೀ ನಿಲ್ಲಿ
ಸೇರೆನ್ನ ಈ ಬಂಡಿಯ ಎಳೆಯ ಹೊರಟಿರುವೆನು
ನಾ ಇದ ಒಂಟಿ ಗಾಲಿಯಲಿ .

Rating
No votes yet

Comments