ಬೆಂಗ್ಳೂರಲ್ಲಿ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ!!!

ಬೆಂಗ್ಳೂರಲ್ಲಿ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ!!!

ನಮ್ಮೂರ ಕಡೆ ಮಳೆ ಬಂದಾಗ ರಸ್ತೆಯ ನೀರೆಲ್ಲಾ ಚರಂಡಿಗೆ
ಬೆಂಗ್ಳೂರಲ್ಲಿ ಹಾಗಲ್ಲ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ

ಅಲ್ಲಿ ಮಳೆ ಬಂದಾಗ ಅಂಗಳದ ನೀರು ಬೈಲಿಗೆ ಹರಿಯುತ್ತದೆ
ಇಲ್ಲಿ ಮಳೆ ಬಂದರೆ ಅಂಗಳದ ನೀರು ಮನೆಯೊಳಕ್ಕೆ ನುಗ್ಗುತ್ತದೆ

ಕರಾವಳಿಯ ಮಳೆಯಲ್ಲಿ ಜನ ಬೈಕು ಓಡಿಸಿ ತೊಳೆಯುತ್ತಾರೆ
ಜನ ಇಲ್ಲಿ ನೀರು ತುಂಬಿ ಓಡಿಸಲಾಗದ ಬೈಕನ್ನು ತಳ್ಳುತ್ತಾರೆ

ಬೆಂಗಳೂರ ಚರಂಡಿ ದುರಸ್ಥಿಗೆ ಮುಂಗಾರು ನೀಡಬೇಕು ಸೂಚನೆ
ಚರಂಡಿಗಳ ಅವಸ್ಥೆ ಎಂದಿನಂತೆಯೇ ಖಾಲಿಯಾದರೂ ಖಜಾನೆ

ಮೊದಲ ಮಳೆಯ ಮರುದಿನ ಮಂತ್ರಿಗಳು ಮಾಡ್ತಾರೆ ಘೋಷಣೆ
ಅದೆಲ್ಲಾ ಕಾರ್ಯರೂಪಕ್ಕೆ ಬರುವ ಮೊದಲೇ ಮಳೆಗಾಲದ ಕೊನೆ

ಪ್ರತೀ ವರುಷ ಚರಂಡಿ ಪಾಲಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ
ಆದರೂ ನಗರಪಾಲಿಕೆ ಅಧಿಕಾರಿಗಳ ಕಣ್ಣದೇಕೋ ಮುಚ್ಚಿಯೇ ಇದೆ

ಮಗು ಸತ್ತಿದ್ದು ತಾಯಿಯ ಬೇಜವಾಬ್ದಾರಿತನದಿಂದ ಎನ್ನುತ್ತಾರೆ
ತೆರಿಗೆ ವಸೂಲಿ ಮಾಡಿದ ಮೇಲೆ ಸೇರಿ ಬಾಡೂಟ ಉಣ್ಣುತ್ತಾರೆ

ಜನ ತೆರಿಗೆ ಕಟ್ಟಿದರೆ ಅದೇಕೋ ಅವರೇ ಜವಾಬ್ದಾರರಾಗುತ್ತಾರೆ
ಜವಾಬ್ದಾರಿ ತೋರಬೇಕಾದಲ್ಲಿ ಸಬೂಬು ನೀಡಿ ನುಣುಚಿಕೊಳ್ತಾರೆ

ನಮ್ಮೂರ ಕಡೆ ಮಳೆ ಬಂದಾಗ ರಸ್ತೆಯ ನೀರೆಲ್ಲಾ ಚರಂಡಿಗೆ
ಬೆಂಗ್ಳೂರಲ್ಲಿ ಹಾಗಲ್ಲ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ

ಚಿತ್ರ ಸಾಲ: http://media.bonnint.net/apimage/XAR10607051408.jpg

Rating
No votes yet

Comments