ಮೈಸೂರ್ ಷಾಕಾ(Shocka) ಇಲ್ಲ ಧಾರವಾಡ ಪೆದ್ದನ ...

ಮೈಸೂರ್ ಷಾಕಾ(Shocka) ಇಲ್ಲ ಧಾರವಾಡ ಪೆದ್ದನ ...

ಸುಮಾರು ಆರು ವರ್ಷದ ಹಿಂದಿನ ಮಾತು ಅಲ್ಲಲ್ಲ ಸುದ್ದಿ. ಯಾಕಂದ್ರ ನಾನು ಧಾರವಾಡದವಾ ಇದ್ದೇನಲ್ಲ ಅದಕ್ಕ. ಮೈಸೂರಿಗೆ ನೌಕ್ರಿಗೆ ಅಂತ ಬನ್ದಿದೆ ಅವರ ಭಾಷೆ ನೋಡಿ ಅಂದ್ರ ಕೇಳಿ ನನಗ ಅಲ್ಲೇ ಅಡ್ಜಸ್ಟ್ ಆಗೋದ ಸ್ವಲ್ಪ ಕಷ್ಟ (ತ್ರಾಸ) ಆತು. ಯಾಕಂದ್ರ ನಾವು ಯಾವದ ವಿಷ್ಯ ಇರಲಿ ಬಹಳ ಎಳಯನ್ಗಿಲ್ಲ. ಆದ್ರ ಮೈಸೂರಿನವರು ರಬ್ಬರ್ ಏಳದ ಹಂಗ ಏಳಿತಾರಿರೀ. ಮೊದ್ಲ ಹೋದ ಮ್ಯಾಲೆ ಭ್ಯಟ್ಟಿಯಾಗಿದ್ದು ಗೌಡ್ರನ್ನ ಬಾಳ ಒಳ್ಳೆ ಮನ್ಶ್ಯರೀ ಆದ್ರ ಅವನ್ದು ನಂದು ಸ್ವಲ್ಪ ಹೊಂದಾಣಿಕಿ ಆಗ್ಲಿಲ್ಲ. ಯಾಕಂದ್ರ ನಮ್ಮ ಭಾಷ್ಯ ಅವ್ರಿಗೆ ಇಷ್ಟ ಆಗ್ಲಿಲ್ಲ. ನಾವು ಎಲ್ಲಾನು Short Cut ನ್ಯಾಗ ಮತ್ತು Fast ಆಗಿ ಮಾತಾಡ್ತೆವಿ. ಅದು ಅವ್ರಿಗೆ ಅರ್ಥ ಆಗ್ಲಿಲ್ಲ ಅಂತ ಅನ್ಸ್ಥದ. ಗೌಡ್ರನ್ನ ಬಾಳ(ಬಾಲ) ಒಳ್ಳೆ ಮನ್ಶ್ಯರೀ(ಮುಷ್ಯ) ಅಂತ ಅರ್ಥ ಮಾಡ್ಕೋ೦ದಿರಬೇಕು ಪಾಪ. ಅದಕ್ಕ ನನ್ನ ಮಹಿಷಾಸುರನಂಗ ಕಾಣ್ತಿದ್ರು. ಅವ್ರ ಭಾಷೆ ನನಗ ಸ್ವಲ್ಪ ಕಿರ್ಕಿರಿನೆ ಇತ್ತು ಅವ್ರು ಯಾವಾಗಲು "ಹಿಂಸೆ" ಅನ್ನೋ ಪದ ಬಳಸ್ತಿದ್ರು. ನಮ್ ಕಡೆ ಹಿಂಸೆ ಅಂದ್ರ ಬಹಳ ಅಪಾರ್ಥವಾಗಿ ತಿಳಿದ್ಕೊಳ್ತಿವಿ.

ಹೀಗೆ ೬ ತಿಂಗಳ ತ್ರಾಸ ಅಲ್ಲ ಹಿಂಸೆ ಅನುಭವಿಸಿ ಕೊನೆಗೆ ಬಳ್ಳಾರಿಗೆ transfer ಆಯಿತು.

ಅದರಲ್ಲೋ ಒಂಥರಾ ಮಜಾನೇ ಇತ್ತನ್ನಿ. ಅವರದ್ದು ಒಂಥರಾ ಮೈಸೂರ್ ಪಾಕ್ ಇದ್ದಂಗ ಭಾಷಾ ಆದ್ರೆ ನಮ್ದು ಧಾರವಾಡ ಪೇಡ. ಎರಡು ಚಲೊನ ಅಲ್ಲೇನೆ ..... ಆದ್ರ ಈ ಧಾರವಾಡ ಪೆದ್ದನಿಗೆ ಅರ್ಥ ಆಗಬೇಕಲ್ಲ.

Rating
No votes yet

Comments