ಕನ್ನಡ ಅರಸರ ಅಕನ್ನಡ ಪ್ರಜ್ಞೆ

ಕನ್ನಡ ಅರಸರ ಅಕನ್ನಡ ಪ್ರಜ್ಞೆ

ಸಪ್ನಾ ಬುಕ್ ಹೌಸಿಗೆ ಇತ್ತೀಚೆಗೆ ನಾನು ಹೋದಾಗ ಈ ಪುಟ್ಟ ಪುಸ್ತಕ ನನ್ನ ಗಮನಸೆಳೆಯಿತು. ಬರೆದವರು ಸಂಶೋಧಕ ಎಂ. ಎಂ. ಕಲಬುರ್ಗಿಯವರು . ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಪ್ರಕಟಣೆ . ಬೆಲೆ ಇಪ್ಪತ್ತೈದು ರೂಪಾಯಿ.
ಈ ಪುಸ್ತಕದ ಬಗ್ಗೆ ಕಿರು ಪರಿಚಯ ಇಲ್ಲಿದೆ.

ನಮ್ಮ ರಾಜರಿಗೆ ತಮ್ಮ ಅಸ್ತಿತ್ವ , ಅಂತಸ್ತು ಉಳಿಸಿಕೊಳ್ಳುವುದೇ ಮುಖ್ಯವಾಗಿತ್ತೇ ಹೊರತು ನಾಡಿನ , ನಾಡವರ ಏಳಿಗೆ ಅಲ್ಲ . ಅವರು ನಾಡು-ನುಡಿ-ನಾಡವರನ್ನು ಬಲಿ ಕೊಡುತ್ತ ಬಂದರು. ಇಂದು ಬೆಂಗಳೂರು ಪ್ರದೇಶದಲ್ಲಿ ತಮಿಳರ , ಬಳ್ಳಾರಿ ಪ್ರದೇಶದಲ್ಲಿ ತೆಲುಗರ , ಬೆಳಗಾವಿ ಪ್ರದೇಶದಲ್ಲಿ ಮರಾಠರ ಪ್ರಾಬಲ್ಯ ಬೆಳೆದು ನಿಂತುದಕ್ಕೆ ಮತ್ತು ಕನ್ನಡಿಗರು ನಿರಭಿಮಾನಕ್ಕೆ ನಮ್ಮ ರಾಜರೇ ಕಾರಣ .
ಕನ್ನಡಿಗರಾದ ಗಂಗರ ಮಂತ್ರಿ ಚಾವುಂಡರಾಯನ ತಮಿಳುಪ್ರೀತಿ , ಹೊಯ್ಸಳರ ಮಂತ್ರಿ ಗಂಗರಾಜನ ಮರಾಠಿಪ್ರೀತಿ , ವಿಷ್ಣುವರ್ಧನನ ತಮಿಳುಮೂಲದ ಶ್ರೀವೈಷ್ಣವ ಮತಾಂತರ , ಕೃಷ್ಣದೇವರಾಯನ ತೆಲುಗು ಭಾಷಾಪ್ರೀತಿ - ಹಂಪಿ ವಿರೂಪಾಕ್ಷನ ಬದಲು ತಿರುಪತಿ ವೆಂಕಟೇಶನ ಭಕ್ತಿ, ಚಿಕ್ಕದೇವರಾಯನು ಶ್ರೀವೈಷ್ಣವನಾಗುವ ಮೂಲಕ ತಮಿಳು ಪ್ರಜೆ-ಭಾಷೆ-ಸಾಹಿತ್ಯಗಳಿಗೆ ತೋರಿದ ಒಲವು ಇತ್ಯಾದಿಗಳ ಕೆಟ್ಟಪರಿಣಾಮಗಳ ವಿವರ ಇಲ್ಲಿದೆ. ಒಬ್ಬರ ಉತ್ತರಾಧಿಕಾರಿ ಇನ್ನೊಬ್ಬರಂತೆ ಆಳಿದ ಗಂಗ-ಹೊಯ್ಸಳ-ವಿಜಯನಗರ-ಮೈಸೂರು ರಾಜಮನೆತನಗಳು ಕನ್ನಡಕ್ಕೆ ಮಾಡಿದ ಅನ್ಯಾಯದ ಚಿತ್ರ ಇಲ್ಲಿದೆ.
ತಾಳೀಕೋಟೆ ಕಾಳಗವು ಹಿಂದೂ-ಮುಸಲ್ಮಾನರ ಕಾಳಗ ಅಲ್ಲವಂತೆ - ಕನ್ನಡಿಗ-ತೆಲುಗರ ಕಾಳಗವಂತೆ ; ತೆಲುಗರ ಪ್ರಾಬಲ್ಯವನ್ನು ತಪ್ಪಿಸಲು ಕನ್ನಡಿಗರು ಆದಿಲಶಾಹಿ ಅರಸರೊಂದಿಗೆ ಕೈಗೂಡಿಸಿದರಂತೆ.
ಈ ಪುಟ್ಟ ಪುಸ್ತಕವನ್ನು ಕೊಂಡು ಓದಿ.

Rating
No votes yet

Comments