ಅಗಲುವಿಕೆ - ೧

ಅಗಲುವಿಕೆ - ೧

(ಇಂದು ಬೆಳಿಗ್ಗೆ ಬಿ ಎಂ ಟಿ ಸಿ ಬಸ್ಸಿನಲ್ಲಿ ಕಳೆದುಕೊಂಡ ನನ್ನ ಮೊಬೈಲ್ ಬಗ್ಗೆ )

ತೊರೆದಿದ್ದಳೆನ್ನ ನಲ್ಲೆ
ಅನ್ನುತ್ತಿರುವಾಗಲೇ
ನೀನು ನನ್ನ ತೊರೆದೆಯ
ಹೇಳದೆ ಕೇಳದೆ

ನಾ ಏನ ಕಡಿಮೆ ಮಾಡಿದ್ದೆ ನಿನಗೆ
ನೀ ಹಸಿವು ಎಂದಾಗಲೆಲ್ಲ
ನನ್ನ ಹಸಿವ ನಿಗಿಕೊಂಡು
ತುಂಬಿಸಿರಲಿಲ್ಲವೇ ನಿನ್ನ ಹೊಟ್ಟೆ ?

ಮಳೆಗಾಲ ಶುರುವಾಯಿತೆಂದು
ನೀ ಗೋಗರೆದಾಗ
ಕೊಡಿಸಿರಲಿಲ್ಲವೇ ನಾ ನಿನಗೆ
ಬೆಚ್ಚನೆಯ ಚೀಲ

ಏನೋ ಸಿಟ್ಟು ಬಂದಾಗ ಒಮ್ಮೆ
ನೆಲಕ್ಕೆ ಅಪ್ಪಳಿಸಿರಬಹುದು,
ನೀರಿನಲೋಮ್ಮೆ ಮುಳುಗಿಸಿರಬಹುದು
ಅಷ್ಟಕ್ಕೆ ತೊರೆದು ಬಿಡುವುದೇ

ಮನಸಿಕೆ ಬೇಜಾರಾದಗೆಲ್ಲ
ನಿನ್ನನೊಮ್ಮೆ ಕೂಗಿಸಿ
ಖುಶಿಪಡುತ್ತಿದ್ದೆ ನಾ
ಇನ್ಯಾರ ಕೂಗಿಸಲಿ ನಾ

ನನ್ನ ಮೃದು ಬೆರಳ
ಸ್ಪರ್ಶಕ್ಕೆ ನಾಚಿ ತಕಪಕನೆ
ನೀ ಅಲ್ಲಾಡಿಸುತ್ತಿದ್ದೆ ನೀ ನಿನ್ನ
ಅಂಗಾಂಗಗಳ , ಇನ್ಯಾರ
ಸ್ಪರ್ಶಕ್ಕೆ ಸಿಕ್ಕಿ ನರಳುವೆಯೋ ನೀನು

ಹೋಗಲಿ ಬಿಡು
ನಿನ್ನ ನನ್ನ ಸಂಬಂಧದ ಕೊಂಡಿ
ಕಳಚಿದೆಂದನಿಸುತ್ತಿದೆ ಇಂದಿಗೆ
ಎಲ್ಲೇ ಇರು ಹೇಗೆ ಇರು
ಎಂದೆಂದಿಗೂ ರಿಂಗ್ ಆಗುತ್ತಲೇ ಇರು

Rating
No votes yet

Comments