Internetನಲ್ಲಿ ದಾರಿ ತಪ್ಪಿದ್ದು

Internetನಲ್ಲಿ ದಾರಿ ತಪ್ಪಿದ್ದು

Comments

ಬರಹ

ಇತ್ತೀಚಿಗೆ ನನ್ನ ಸ್ನೇಹಿತನೊಬ್ಬರು ತಿಳಿಸಿದರು. ಈ ಸಂಪದದಲ್ಲಿ ಕನ್ನಡ ಎಲ್ಲಿದೆ ಮಾರಾಯ ಎಂದು ಕೇಳಿದರು. ನನಗೆ ಅರ್ಥವಾಗಲಿಲ್ಲ. ಕೊನೆಗೆ ತಿಳಿದು ಬಂದದ್ದೆಂದರೆ ಅವರು ಟೈಪಿಸಿದ್ದು ಬೇರೆಯೇ ವಿಳಾಸ. ಅವರು ತಲುಪಿದ್ದು www.sampada.in ಗೆ. ಅದು ಚಂಡೀಗಡ ಕೇಂದ್ರಾಡಳಿತ ಪ್ರದೇಶದ ಎಸ್ಟೇಟ್ ಕಾರ್ಯಾಲಯದ ತಾಣ.

ಅದರ URL ವಿಳಾಸ ಕೂಡ ನಮ್ಮ ಸಂಪದದ URL ವಿಳಾಸಕ್ಕೆ ಹೊಂದುವುದರಿಂದ ಕುತೂಹಲಕಾರಿಯಾಗಿದೆ. ಈಗೀಗ co.in ಹಾಗೂ .in ವಿಳಾಸದ ಬಳಕೆ ಜಾಸ್ತಿಯಾಗುತ್ತಿದೆ. ಅವರೂ ವೃತ್ತಪತ್ರಿಕೆಗಳಲ್ಲಿ ಈಗೀಗ co.in ಹಾಗೂ .in ನೋಡುತ್ತಿದ್ದಾರೆ. ಹೀಗಾಗಿ ನಮ್ಮ ಸಂಪದ ತಲುಪಲು ಅವರೂ in ಬಳಸಿದರು.

ಅವರ ತಂದೆ/ತಾಯಿ ಹೇಳಬಹುದು 'Internetನಲ್ಲಿ ದಾರಿ ತಪ್ಪಿದ ಮಗ' ಎಂದು ;-)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet