ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

(ಈ ವಿಷಯವನ್ನು ಎಲ್ಲಿ ಹಾಕಬೇಕೆಂದು ತಿಳಿಯಲಿಲ್ಲ ಹಾಗಾಗಿ ಬ್ಲಾಗಿನಲ್ಲೇ ಹಾಕಿದ್ದೇನೆ)

ಗೆಳೆಯರೆ,

ನಿಮಗಿನ್ನು ಗೊತ್ತಿಲ್ಲದಿದ್ದರೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯ ತಾಣಕ್ಕೆ ಭೇಟಿ ಕೊಡಿ. ಇಲ್ಲಿ ಗೂಗಲ್ ಬುಕ್ಸ್ ಮಾದರಿಯಲ್ಲಿ ಬಹಳ ಕನ್ನಡ ಪುಸ್ತಕಗಳಿವೆ .  ಆ ತಾಣಕ್ಕೆ ಹೋದ ಮೇಲೆ ನೀವು ಪುಸ್ತಕ ಓದಲು "interface2(beta)" ಒತ್ತಿ (interface1 ನನಗೆ ಕೆಲಸ ಮಾಡುತ್ತಿಲ್ಲ).

ನನಗೆ ಹಲವು ಹಳೆಯ ಕನ್ನಡ ಪುಸ್ತಕಗಳು (ಮನೋಹರ ಗ್ರಂಥ ಮಾಲೆ, ಬೆಂಗಳೂರು ಪ್ರೆಸ್ ಇವರು ಪ್ರಕಾಶಿಸಿರುವ)ಇಲ್ಲಿ ದೊರೆತವು.

ನಿಮ್ಮ ಅನಿಸಿಕೆಗಳು ಅಥವ ಇನ್ನೇನಾದರೂ ಹೊಸತು ಈ ತಾಣದಲ್ಲಿ ಸಿಕ್ಕರೆ ಹಂಚಿಕೊಳ್ಳಿ.

-ಜೈ ಕರ್ನಾಟಕ.

Rating
No votes yet

Comments

Submitted by smurthygr Fri, 06/12/2015 - 19:14

ನಾನೂ DLI ಇಂದ ಪುಸ್ತಕಗಳನ್ನು ಇಳಿಸಿ ಅವುಗಳನ್ನು PDF ರೂಪಕ್ಕೆ ಪರಿವರ್ತಿಸುವ ಸುಲಭ ಉಪಾಯಗಳ ಬಗ್ಗೆ ಒಂದೆರಡು ಲೇಖನ ಬರೆದಿದ್ದೆ, ಹಾಗೂ ಇನ್ನೂ ಅನೇಕರು ಬರೆದ ಲೇಖನಗಳಿಗೆ ನನ್ನ ಪ್ರತಿಕ್ರಿಯೆಗಳಲ್ಲೂ , ವಿಂಡೋಸ್ ಮತ್ತು ಲಿನಕ್ಸ್ ಎರಡರಲ್ಲೂ ಇಂತಹ ಉಪಾಯಗಳ ಬಗ್ಗೆ ಹೇಳಿದ್ದೆ. ಆದರೆ ಬಹಳ ದಿನಗಳ ನಂತರ ಲಿನಕ್ಸ್ ನಲ್ಲಿ ಬಳಸಲು ಒಂದು ಉಪಾಯದ ಬಗ್ಗೆ ಹುಡುಕಲು ಹೊರಟರೆ ನಾನು ಬರೆದ ಒಂದೂ ಲೇಖನವಾಗಲೀ, ಪ್ರತಿಕ್ರಿಯೆಯಾಗಲೀ ಇಲ್ಲ! ನಾಡಿಗರು ಹೇಳಿದಂತೆ ನನ್ನ ID ಡಿಲೀಟ್ ಆಗಿತ್ತು ಅದನ್ನು ಪುನಃ ಸರಿಮಾಡಿಕೊಟ್ಟಿದ್ದರೂ ಕೂಡಾ ನನ್ನ ಇತಿಹಾಸವೆಲ್ಲಾ ಅಳಿಸಿಹೋಗಿದೆ ಅಂತ ಕಾಣುತ್ತೆ.