ವಿಶ್ವ ಪರಿಸರ ದಿನದಂದು ನಾವು ಬರೆದ ಚಿತ್ರ

ವಿಶ್ವ ಪರಿಸರ ದಿನದಂದು ನಾವು ಬರೆದ ಚಿತ್ರ

ಇದನ್ನ ಬರೆಯಬೇಕೆಂದು ಕೊಂಡಿದ್ದು ಕೆಲ ದಿನಗಳ ಹಿಂದೆ, ಆದರೆ ಬರೆಯುತ್ತಿರುವುದು ಇಂದು.ನಾನು ನನ್ನ ಕೆಲಸಗಳೆಲ್ಲ ಇದೆ ತರ. ಈ ಚಿತ್ರ ಮೊನ್ನೆ ಮೊನ್ನೆ ಆಯ್ತಲ್ಲ 'ವಿಶ್ವ ಪರಿಸರ ದಿನ'ದಂದು ವಿಜೇತ ಮತ್ತೆ ನಾನು ಸೇರಿ ಬರೆದಿದ್ದು (೯೦% ಅವಳೇ ಬರೆದಿದ್ದು .ಐಡಿಯಾ ನಂದು,ಬಣ್ಣ ಬಳಿದಿದ್ದು,ಹಾಗೆ ಒಂದೆರಡು ಸಾಲು ಇವೆಲ್ಲ ಸೇರಿಸಿ ನಂಗೆ 10 % ಕ್ರೆಡಿಟ್ಟು ;))
ಅವತ್ತು ನಮ್ಮ ಆಫೀಸಿನಲ್ಲಿ ಚಿತ್ರಕಲಾ ಸ್ಪರ್ಧೆ ಇತ್ತು. 'ಪರಿಸರ ಉಳಿಸಿ - ನಾಳೆಯನ್ನು ಹಸಿರಾಗಿಸಿ' ಅನ್ನೋದೇ ಕೊಟ್ಟ ಥೀಮ್. ಅಷ್ಟರಲ್ಲಾಗಲೇ ನಮ್ಮ ಸಾಫ್ಟವೇರ್ ಬುದ್ದಿ ಕೇಳ್ಬೇಕಾ? ಬೆಳಗ್ಗಿನಿಂದ google ಮಾಡಿದ್ದೆ ಮಾಡಿದ್ದು.

ವಿಜೇತಾ ಅಂತು ಬೆಳಿಗ್ಗೆಯಿಂದ ಒಂದೇ ಸಮನೆ ಪೀಡಿಸುತಿದ್ದಳು "ಸರ್ , ಕ್ಯಾ ಲಿಖ್ನ ಹೈ? ಬೋಲೋ ನ.. ಆಪ್ ಐಡಿಯಾ ದೋ .. ಮೈ ಯುನ್ ಲಿಕ್ ದೂನ್ಗಿ".. ನಾನು ದೊಡ್ಡ ಜ್ಞಾನಿಯಂತೆ , ಗಡ್ಡ ಮೇಲೆ ಕೈಯಿಟ್ಟು, ಆಫೀಸಿನ ಮೂಲೆಯನ್ನೇ ದಿಟ್ಟಿಸುತ್ತಾ ಹೇಳಿದೆ "ಧರ್ತಿ ಮಾ ರೋ ರಹಿ ಹೈ, ಮೆಟ್ರೋ ಟ್ರೈನ್ ಹಾಕೇ ಪೇಡ್ ಕೆ ಊಪರ ಚಲ್ ರಹಾ ಹೈ" ಹಾಗೆ ಬಡ ಬಡಿಸುತ್ತಿದ್ದವನ ನಿಲ್ಲಿಸಿ,
ಹಿಂದಿಯಲ್ಲಿ ಹೇಳಿದಳು "ಹಮೆ ಪೈಟಿಂಗ್ ಕರ್ನಾ ಹೈ , ಕಹಾನಿ ಲಿಖ್ನ ನಹಿ". ನಾ ಹೇಳಿದೆ "ಅರ್ರೆ, ಇಸಸೇ ಜ್ಯಾದ ಸೋಚ್ನ ಮುಜ್ಸೆ ನಹಿ ಹೋಗಾ".
ಇವ್ನ ತಲೆಗೆ ಇದು ಹೊಳೆದಿದ್ದೇ ಜಾಸ್ತಿ ಅನ್ಕೊಂಡ್ಲೋ, ಏನೋ ;) ಮರು ಮಾತಾಡಲಿಲ್ಲ.

ಸ್ಪರ್ಧೆ ಶುರುವಾಗಿದ್ದು ಸಂಜೆ ೫ರ ಹೊತ್ತಿಗೆ, ಪೆನ್ಸಿಲ್ ,ಎರಸೆರ್ ,ಕ್ರೆಯಾನ್ ಬಣ್ಣಗಳು ಇವೆಲ್ಲ ಮುಟ್ಟಿ ಅದ್ಯಾವ ಕಾಲವಾಗಿತ್ತೋ, ಬಹುಷಃ ಶಾಲೆಯೇ ಕಡೆಯಿರಬೇಕು.ಆಮೇಲೆ ಪೆನ್ಸಿಲ್ ಹಿಡಿದಿದ್ದರೂ,ಬಣ್ಣ ಎಲ್ಲ ಮುಟ್ಟಿರಲಿಲ್ಲ.ಮತ್ತೆ ಆ ಬಣ್ಣ ಬಣ್ಣದ ಪೆನ್ಸಿಲ್ ಕೈಯಲ್ಲಿಡಿದಾಗ , ಮನಸ್ಸು ಮಗುವಂತಾಗಿತ್ತು.ಬಣ್ಣಗಳ ಲೋಕದಲ್ಲಿ ಮಕ್ಕಳಾಗಿದ್ದೆವು ಅಂದು :). ಏನೋ ಒಂದು ರೀತಿಯ ಸಡಗರ ಮನೆ ಮಾಡಿತ್ತು , ಹಿಂದಿನ ತಾನೇ 'ತಾರೆ ಜಮೀನ್ ಪರ್' ಬೇರೆ ನೋಡಿದ್ದೇ.ಒಂತರ ಮಜ್ವಾಗಿತ್ತು ಅನುಭವ.

ಹಾಂ , ಚಿತ್ರವೇನೋ ಬರೆದಾಯ್ತು .ಇದಕ್ಕೆ ಏನಾದ್ರೂ ವರ್ಡಿನ್ಗ್ಸ್ ಬರಿಬೇಕಿತ್ತಲ್ಲ , ಇಂಗ್ಲಿಷನಲ್ಲಿ 'Take Care of Me , I Will Take Care of U' ಅಂತ ಬರೆದೆ. ಕನ್ನಡದಲ್ಲಿ ನನಗೆ ಹೊಳೆದಿದ್ದು , ನಾವು ಚಿಕ್ಕವರಿದ್ದಾಗ ದೂರದರ್ಶನದಲ್ಲಿ ಬರುತಿದ್ದ ಒಂದು ಹಾಡಿನ ಸಾಲು
"ಹೃದಯಾಂತರಾಳದಲ್ಲಿ ಅಡಗಿರುವ ನೋವುಗಳು ನೂರೆಂಟು ನನ್ನ ನಲ್ಲ,
ಬರಿಯ ನೋವುಗಳಲ್ಲ , ಭಯದ ಆತಂಕಗಳು ಕಾಡುತಿದೆ ವಿಶ್ವವೆಲ್ಲ"

ನಮ್ಮ ಚಿತ್ರ ಗೆಲ್ಲಲಿಲ್ಲವಾದರೂ, ಆಫೀಸಿನಲ್ಲಿ ಕೆಲವರಿಗೆ ಬಹಳ ಹಿಡಿಸಿತು ಅಂತ ಖುಷಿ ಆಯ್ತು. ಚಿತ್ರ ಹೇಗಿದೆ ಹೇಳ್ತಿರಲ್ಲಾ?

(ಈ ಫೋಟೋ ಸರಿಯಾಗಿ ತೆಗೆದಿಲ್ಲ, ಇನ್ನೊದು ಚಿತ್ರ ಹಾಕೋಣವೆಂದರೆ ಅದು 1.02 MB ಇದೆ, ಅಪ್ಲೋಡ್ ಆಗ್ತ ಇಲ್ಲ )

Rating
No votes yet

Comments