ಗೂಗ್ಲ್ ತರಲೆ

ಗೂಗ್ಲ್ ತರಲೆ

ಗೂಗ್ಲ್‌ನಲ್ಲಿ bendre ಎಂದು ಬೆರಳಚ್ಚು ಮಾಡಿ I am feeling lucky ಅಥವಾ ಕನ್ನಡ ಭಾಷೆಯ ಇಂಟರ್‌ಫೇಸ್ ಬಳಸುವವರಾದರೆ "ನಾನೇ ಅದೃಷ್ಟವಂತ/ತೆ" ಮೇಲೆ ಕ್ಲಿಕ್ ಮಾಡಿ ನೋಡಿದರೆ ದ ರಾ ಬೇಂದ್ರೆ ಅಲ್ಲ ಸೊನಾಲಿ ಬೇಂದ್ರೆ ಸಿಗುತ್ತಾಳೆ ಅಂಬ ಹಳೆಯ ಜೋಕು ನಿಮಗೆಲ್ಲ ಗೊತ್ತಿರಬೇಕು. ಇದನ್ನೇ ಸ್ವಲ್ಪ ಮುಂದುವರಿಸೋಣ ಎಂದು ಗೂಗ್ಲ್ ತೆರೆದೆ. ಕನ್ನಡ ಲಿಪಿಯಲ್ಲಿ (ಯುನಿಕೋಡ್) ಕೆಲವು ಪದಗಳನ್ನು ಬೆರಳಚ್ಚು ಮಾಡಿ "ನಾನೇ ಅದೃಷ್ಟವಂತ/ತೆ" ಮೇಲೆ ಕ್ಲಿಕ್ ಮಾಡಿದೆ. ಅದರ ಫಲಿತಾಂಶ ಇಲ್ಲಿದೆ-

ಹುಡುಕಿದ ಪದ ದೊರಕಿದ ತಾಣ
ಪೆದ್ದ ಶ್ಯಾಮ ಕಶ್ಯಪ ಅವರ [http://shamkashyap.blogspot.com/2005_01_01_shamkashyap_archive.html|ಬ್ಲಾಗ್]
ಮೂರ್ಖ ಕನ್ನಡ ವಿಕಿಪೀಡಿಯಾದಲ್ಲಿರುವ [http://kn.wikipedia.org/wiki/%E0%B2%B5%E0%B2%BF%E0%B2%B5%E0%B3%87%E0%B2%95%E0%B2%BE%E0%B2%A8%E0%B3%A6%E0%B2%A6|ಸ್ವಾಮಿ ವಿವೇಕಾನಂದ ಪುಟ]
ಹುಚ್ಚ ಕನ್ನಡ ಸಾಹಿತ್ಯ ತಾಣದಲ್ಲಿರುವ [http://www.kannadasaahithya.com/uniarc/index.php?layout=main&cslot_1=275|ಕಂಬಾರರ ಜೋಕುಮಾರ ಸ್ವಾಮಿ ನಾಟಕ]
ಕಳ್ಳ ಕನ್ನಡ ಸಾಹಿತ್ಯ ತಾಣದಲ್ಲಿರುವ [http://www.kannadasaahithya.com/uniarc/index.php?layout=main&cslot_1=270|ಕಂಬಾರರ ಕರಿಮಾಯಿ]
ಸೋಮಾರಿ [http://www.google.com/search?hl=kn&q=%E0%B2%B8%E0%B3%8B%E0%B2%AE%E0%B2%BE%E0%B2%B0%E0%B2%BF&btnI=%E0%B2%A8%E0%B2%BE%E0%B2%A8%E0%B3%87+%E0%B2%85%E0%B2%A6%E0%B3%83%E0%B2%B7%E0%B3%8D%E0%B2%9F%E0%B2%B5%E0%B2%82%E0%B2%A4%2F%E0%B2%A4%E0%B3%86|ಹರಿಪ್ರಸಾದ್ ನಾಡಿಗ್]!!!!

ಅಂದ ಹಾಗೆ ಈ ಫಲಿತಾಂಶಗಳು ಈ ದಿನ (ಅಕ್ಟೋಬರ್ 26ರಂದು). ಹಲವು ದಿನ, ತಿಂಗಳು ಕಳೆದಾಗ ಅವು ಬದಲಾಗುವ ಸಾಧ್ಯತೆಗಳಿವೆ.

ಸಿಗೋಣ,
ಪವನಜ

Rating
No votes yet

Comments