ಕಾಗೆಯ ಮರಿಗೂ ಬಂತು ಗತ್ತು!!!

Submitted by asuhegde on Wed, 06/24/2009 - 14:02

ಸಖೀ,

ಕಾಗೆಯ ಗೂಡಿನಲಿ ಕೋಗಿಲೆ ಮರಿಗಿತ್ತು ಗಮ್ಮತ್ತು
ಅದರ ಸಂಗದಲಿ ಕಾಗೆಯ ಮರಿಗೂ ಬಂತು ಗತ್ತು

ಕೋಗಿಲೆ ಮರಿ ಹಾಡಲು ಕೇಳಿದವರಿಗೆಲ್ಲಾ ಆನಂದ
ಅದನ್ನು ಕೇಳಿ ಕಾಗೆ ಹಾಡಲು ಏನಿಹುದದರಲ್ಲಿ ಅಂದ

ಸಹವಾಸದಿಂದಲೇ ಸಾಧಿಸಲೇನೂ ಆಗದು ಇದು ಸತ್ಯ
ಸಹವಾಸವೇ ಎಲ್ಲರ ಕೆಡಿಸುವುದೆಂಬುದೂ ನಿಜ ಮಿಥ್ಯ

ನಾಯಿ ಬೆಕ್ಕುಗಳು ಒಂದೇ ಮನೆಯಲ್ಲಿ ಬದುಕಿದ್ದರೇನು
ನಾಯಿ ಬೆಕ್ಕಾಗುವುದೇನು ಆ ಬೆಕ್ಕು ಬೊಗಳುವುದೇನು

ತನ್ನ ಅರಿವು ತನಗಿದ್ದು ಸದಾ ತನ್ನ ಗುರಿಯ ನೆನಪಿದ್ದು
ಮುಂದೆ ಸಾಗುತಿರಲು ತೋರಿಸಬಹುದು ಎಲ್ಲರೂ ಗೆದ್ದು

ಅವರಿವರಂತೆ ನೀನಾಗ ಬೇಕೆಂದು ಎಂದಿಗೂ ಅನಬೇಡ
ಅವರಿವರು ನಿನ್ನಂತೆ ಇರಬೇಕೆಂದೂ ನೀನು ಕಾಡಬೇಡ

ನೀನು ನೀನಾಗಿರುವುದಕೇ ನಿನಗೆ ನಾನೀಡುತಿರುವೆ ಬೆಲೆ
ನಾ ಅವರಿವರಂತೆ ಇರಲು ಹೇಗರಿಯುತ್ತಿದ್ದೆ ನೀ ನನ್ನ ಕಲೆ

Rating
No votes yet

Comments