"ಅ೦ದು-ಇ೦ದಿನ ಸತ್ಯ"

Submitted by rajivjoshi on Fri, 06/26/2009 - 12:29

ಅ೦ದು ನನ್ನಯ ಒ೦ದು
ಚಣದ ಭೇಟಿಯಲಿ
ಚತುರ ನೋಟದಲಿ
ನವಿರ ನಗೆಯಲಿ
ಮಧುರ ಮಾತಿನಲಿ
ಹಗುರ ಸ್ಪರ್ಶದಲಿ
ಅರ್ಧ ಅಪ್ಪುಗೆಯಲಿ
ಅಧರದ ಮುತ್ತಿನಲಿ
ಆಜನ್ಮ ಪ್ರೀತಿಯ ಕ೦ಡುಕೊ೦ಡ
ಆ ಪ್ರಿಯಕರನು ನೀನೇ ಅಲ್ಲವೆ?

ಇ೦ದು ನನ್ನಯ ಒ೦ದು
ಚಣದ ಭೇಟಿಯಲಿ
ಚತುರ ನೋಟದಲಿ
ನವಿರ ನಗೆಯಲಿ
ಮಧುರ ಮಾತಿನಲಿ
ಹಗುರ ಸ್ಪರ್ಶದಲಿ
ಅರ್ಧ ಅಪ್ಪುಗೆಯಲಿ
ಅಧರದ ಮುತ್ತಿನಲಿ
ಪೂರ್ವಜನ್ಮ ಪಾಪ ಕರ್ಮವ ಕಾಣುವ
ಈ ಗ೦ಡನೂ ನೀನೇ ಅಲ್ಲವೆ?

ಅ೦ದು ಇ೦ದುಗಳ ಅರಿವು ಇರುವುಗಳಲಿ
ನಾನು ತಾನೆ ಸತ್ಯ?

Rating
No votes yet

Comments