ತಾಯಿಯ ಅಂತಃಕರಣ..

Submitted by malathi shimoga on Tue, 06/30/2009 - 16:28

ಹೋಗುವ ಉಸಿರ ಬಿಗಿ ಹಿಡಿದು
ನೋವ ನುಂಗಿದಳು
ಕಂದವೊಂದು ಕಣ್ಣ ಬಿಟ್ಟು
ನಕ್ಕಿತು ಜಗವ ಕಂಡು
ಜೀವನ ಸಾರ್ಥಕವೆನಿಸಿತು
ಕೈ ಹಿಡಿದು ನುಡಿಸಿದಳು
ಕೈಹಿಡಿದು ನಡೆಸಿದಳು
ಕೈ ಹಿಡಿದು ಬರೆಸಿದಳು
ಕೈ ಹಿಡಿದು ಬಾಳ್ವೆಯ ಕಲಿಸಿದಳು
ಕೈ ಹಿಡಿದು ಅವನುಗೊಪ್ಪುವ
ಮನದನ್ನೆಯನ್ನು ಕೈ ಹಿಡಿಸಿದಳು
ತನ್ನನ್ನು ಹಿಡಿದ ಕೈ ಬಿಟ್ಟ
ತಾನಿಡಿದ ಕೈಯ ಕೂಗಿಗೆ ಓ ಗೊಟ್ಟ
ಬಿಟ್ಟ ಕೈಯಿಗೆ ಮತ್ತೆ ಹೋಗುವ ಉಸಿರು ಬಂದಿತು
ಆಗ ಉಸಿರು ಬಿಗಿ ಹಿಡಿಯಲಿಲ್ಲ
ಏಕೆಂದರೆ ಜೀವನ ಸಾಕೆನಿಸಿತು

Rating
No votes yet

Comments