ಸೊರಗ್ಯಾನೆ!?
ಬರಹ
ಕೆಲ ವರ್ಷಗಳ ಹಿಂದೆ (ನಾನು ಪಿಯುಸಿ ಓದುತ್ತಿದ್ದಾಗ) ನಾನೊಮ್ಮೆ ವಿಷಮಶೀತಜ್ವರದಿಂದ ತುಂಬಾ ಬಳಲಿದ್ದೆ, ಸುಮಾರು ೩-೪ ವಾರಗಳವರೆಗೂ ಇದ್ದ ಜ್ವರ ಯಾವ ಔಷಧಕ್ಕೂ ಬಗ್ಗುತ್ತಿರಲಿಲ್ಲ. ಆಮೇಲೆ ಯಾವುದೋ ಆಯುರ್ವೇದ ಔಷಧ ತಗೊಂಡ ಮೇಲೆ ಜ್ವರ ಕಡಿಮೆಯಾಯಿತೆಂದು ನೆನಪು. ಒಟ್ಟಾರೆ ಆ ಜ್ವರದಿಂದ ನಾನು ತುಂಬ ಸಣಕಲಾಗಿ ಹೋಗಿದ್ದೆ. ಅದು ಆ ಜ್ವರದ ನಿವ್ವಳ ಫಲಿತಾಂಶ.
ಸರಿ, ಆಮೇಲೊಮ್ಮೆ ನಾನು ಸಿರ್ಸಿಯಲ್ಲಿರುವ ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದೆ. ಆಲ್ಮೋಸ್ಟ್ ಅಸ್ಥಿಪಂಜರದಂತಾಗಿದ್ದ ನನ್ನನ್ನು ಕಂಡು ಅಲ್ಲಿ ಅಜ್ಜಿಯೊಬ್ಬರು "ಶ್ರೀವತ್ಸ ಈಗ ಸೊರಗ್ಯಾನೆ..." ಎಂದಿದ್ದರು.
ಅವರೆಂದದ್ದು - ಸೊರಗಿದ್ದಾನೆ ಎಂಬ ಕನ್ನಡ ಪದದ ಆಡುಭಾಷೆಯ ರೂಪ, "ಸೊರಗ್ಯಾನೆ" ಎಂದು.
ಆದರೆ ಈ ಪದವನ್ನು ಸೊರಗಿ + ಆನೆ ಎಂದು ಯಕಾರಾಗಮ ಸಂಧಿಯಾಗಿ ಪರಿಗಣಿಸಿ ಬಿಡಿಸಿದರೆ ಏನು ಮಜಾ ಬರುತ್ತದೆ ನೋಡಿ!
ಸೊರಗಿ ಆನೆ ಆಗಿದ್ದಾನೆಂದಾದರೆ ಒಂದುವೇಳೆ ಸೊರಗದೇ ಇದ್ದಿದ್ದರೆ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸೊರಗ್ಯಾನೆ!?
In reply to ಉ: ಸೊರಗ್ಯಾನೆ!? by ASHOKKUMAR
ಉ: ಸೊರಗ್ಯಾನೆ!?
In reply to ಉ: ಸೊರಗ್ಯಾನೆ!? by srivathsajoshi
ಉ: ಸೊರಗ್ಯಾನೆ!?