ನಾನೇಕೆ ಬರೆಯುತ್ತೇನೆ?

ನಾನೇಕೆ ಬರೆಯುತ್ತೇನೆ?

ಬರೆಯಬೇಕೆಂಬ ಮಹದಾಸೆ ಬಹಳ ದಿನದಿಂದಿದ್ದರೂ, ಸೋಮಾರಿತನದಿಂದ ಬಹು ಕಾಲ blog Create ಮಾಡಿ ಹಾಗೆಯೇ ಬಿಟ್ಟಿದ್ದೆ. ಇವತ್ತೇಕೊ ಶುರೊ ಮಾಡಬೇಕೆಂಬ ಉತ್ಸಾಹ ಪುಟಿದೆದ್ದಿದೆ. ಅನಿಸಿದ್ದನ್ನು ಬರೆಯಲೆ? ಎಲ್ಲರೂ ಮಾಡುವುದು ಅದನ್ನೆ, ನಡೆದದ್ದನ್ನು ಅನುಕರಿಸಲೇ? ಮಕ್ಕಳಾಟಿಕೆಯಾದೀತೆಂಬ ಭಯ. ಸಾಮಾನ್ಯ ಸಂಗತಿಯನ್ನು ಅಸಾಮಾನ್ಯವೆಂಬಂತೆ ಅಭಿವ್ಯಕ್ತಿಸಲೇ? ಕವಿಯ ಕಲ್ಪನೆಯಾದಿತೆಂಬ ಕಸಿವಿಸಿ. ಆದರೂ ಬರೆಯುತ್ತೇನೆ. ಅನಿಸಿದ್ದನ್ನು ಅನುಕರಿಸಿ, ಸಾಮಾನ್ಯವಾದ್ದನ್ನು ಅಂತರ್ ದ್ರುಷ್ಟಿಯಿಂದ ನೋಡಲೆತ್ನಿಸಿ ನವೀನತೆಯನ್ನು ತರುತ್ತೀನೋ ನೋಡಬೇಕು.

ಬರೆಯುವ ಉದ್ದೇಶ ಮಾತ್ರ ಇಷ್ಟೆ, ಒಳಗಿರುವ ಮನಸ್ಸಿಗೆ ಕನ್ನಡಿ ಹಿಡಿಯುದರ ಜೊತೆಗೆ, ಅದರಲ್ಲಿ ಕಾಣುವ ವಸ್ತುಗಳಲ್ಲಿ ಬೇರೊಂದು ಅರ್ಥವನ್ನು ಕಾಣುವ ಹಂಬಲ. ಕೆಲವರು ಅದನ್ನೆ "ಪ್ರತಿಭೆ" ಎನ್ನುತ್ತಾರೆ. ಅಂಥ ಪ್ರತಿಭೆಯನ್ನು ಹೊರಗೆಡುವುವ ಪ್ರತಿಭಾನ(Intuition) ನನ್ನಲ್ಲಿದೆಯೇ ಗೊತ್ತಿಲ್ಲ. ಪ್ರಯತ್ನವಾದರೂ ಮಾಡೋಣ ಎಂಬ ಹಂಬಲ, ಅದಕ್ಕೆ ಬರೆಯುತ್ತೇನೆ. ನೋಡೋಣ ಎಲ್ಲಿಯವರೆಗು ಸಾಗುವೆನೆಂದು......

Rating
No votes yet

Comments