ಎಲ್ಲಾ ಗುಣಗಳನ್ನು ಹೆಂಡತಿಯರಲ್ಲೇ ಏಕೆ ಹುಡುಕುತ್ತಾರೆ?

ಎಲ್ಲಾ ಗುಣಗಳನ್ನು ಹೆಂಡತಿಯರಲ್ಲೇ ಏಕೆ ಹುಡುಕುತ್ತಾರೆ?

ಸಾತ್ವಿಕ್ ಅವರು ಎಂಥಾ ಹೆಂಡತಿ ಬೇಕು ಎನ್ನುವುದಕ್ಕೆ ಸುರೇಶ್‌ರವರು ಈ ಮಾತನ್ನು ಹೇಳಿದ್ದಾರೆ


ರೂಪೇಶು ಲಕ್ಷ್ಮೀ
ಶಯನೇಶು ರಂಭಾ
ಕರಣೇಶು ಮಂತ್ರೀ
ಭೋಜ್ಯೇಶು ಮಾತಾ
ಕಾರ್ಯೇಶು ದಾಸಿ
ಕ್ಷಮಯಾ ಧರಿತ್ರೀ


ಅದನ್ನು ಓದಿದಮೇಲೆ ನನಗನಿಸಿದ್ದು


ಯಾಕೆ ಈ ಎಲ್ಲಾ ಗುಣಗಳನ್ನು ನಮ್ಮಲ್ಲೇ ಬಯಸುತ್ತಾರೆ


ಹೆಣ್ಣು ದೇವತೆ ಭೂಮಿ ಅದು ಇದು ಎನ್ನುತ್ತಲೇ ರೂಪ, ಶಯನ ಬುದ್ದಿವಂತಿಕೆ, ಪಾಕಕ್ಕೆ, ಕ್ಷಮೆಗೆ ಎಲ್ಲಕ್ಕೂ ಹೆಣ್ಣನ್ನೇ ಹೊಣೆ ಮಾಡುವ ತಂತ್ರ ಇದಲ್ಲವೇ?


 


ಇಂದು ನಮ್ಮಲ್ಲಿ ಪೇಮೆಂಟ್ ಕಲೆಕ್ಟ್ ಮಾಡಿಕೊಳ್ಳಲ್ಲು ಬಂದಳು ಶಬಾನಾ ಈಗಾಗಲೇ ಎಂಟು ತಿಂಗಳು ಆಕೆಗೆ ಕಳೆದಿವೆ.


ನೂರು ಸಾರಿ ಇದೇ ರಸ್ತ್ಯೆಯಲ್ಲಿ ಓಡಾಡುತ್ತಾನೆ ಅವಳ ಗಂಡ ಕರೀಮ್ .  ಒಮ್ಮೆಯೋ ಪೇಮೆಂಟ್‌ಗಾಗಿ ಬರಲಿಲ್ಲ . ಹೆಂಡತಿಯನ್ನು ಕಳಿಸಿದ್ದಾನೆ


ಈ ತುಂಬು ಗರ್ಭಿಣಿ ಬಸ್ ಸ್ಟಾಂಡ್‌ನಿಂದ ನಮ್ಮ ಆಫೀಸಿನವರೆಗೆ ನಡೆದುಕೊಂಡು ಬಂದಳು. ಆಯಾಸಗೊಂಡಿದ್ದಳು ಚೆಕ್ ಕೊಟ್ಟು ಅವಳ ಸ್ಥಿತಿ ನೋಡಿ ಬೇಸರವಾಗಿ ರವಿಯ ಜೊತೆ ಗಾಡಿಯಲ್ಲಿ ಡ್ರಾಪ್ ಮಾಡಿ ಕಳಿಸಿದೆ. ಅಲ್ಲಿಂದ ರವಿಗೆ ಬೇರೆ ಕೆಲಸವಿತ್ತು ಹಾಗೆ ಹೊರಟು ಹೋದ.


ಈ ಲೇಖನ ಬರೆಯಲು ಆರಂಭಿಸಿದೆ ಆಗಲೆ ಮತ್ತೆ ಬಂದಳು


ಆ ಕಪ್ಪು ಮೇಲು ವಸ್ತ್ರ ಧರಿಸಿ .ಬಿಸಿಲಿನ ಝಳ ಬೇರೆ  ಕರುಳು ಕಿತ್ತು ಬರುವಂತಾಯ್ತು


ಯಾಕಮ್ಮ ಬಂದೆ ಎಂದರೆ


ಚೆಕ್ ಬೇರೆ ಹೆಸರಿಗೆ ಕೊಡಲು ಹೇಳಿದರು ಅವರು .ಕರೀಮನ ಮೇಲೆ ಕೆಂಡದಂತ ಕೋಪ ಬಂತು. ಸಂಜೆ ಅವರನ್ನೇ ಕಳಿಸಿದ್ದರಾಗುತ್ತಿತ್ತಲ್ಲಾ ಎಂದೆ ನನ್ನ ಮಾತು ಎಲ್ಲಿ ಕೇಳ್ತಾರೆ ಮೇಡಮ್ ಎಂದವಳು ಕಣ್ಣಲ್ಲಿ ನೀರು ಹಾಕಿದಳು  . ಎಲ್ಲಕ್ಕೂ ಅವಳನ್ನೆ ಕಳಿಸುತ್ತಾನಂತೆ


ಆಕೆ ಮತ್ತೆ ಅಲ್ಲಿಂದ ನಡೆಯಬೇಕು


 


 ನಮ್ಮ ಮನೆಯ ಐರನ್ ಮಾರುವ  ತುಳಸಮ್ಮನ ಗಂಡ ಒಂದು ಪೈಸೆ ದುಡಿಯುವುದಿಲ್ಲ ಆದರೂ ಹೆಂಡತಿಯನ್ನು ಹೊಡೆಯುವದನ್ನು ತಪ್ಪುವುದಿಲ್ಲ ಅವಳ ಮೇಲೆ ಸಂಶಯ. ಬೆಳಗ್ಗೆ ಎಲ್ಲಾ ದುಡಿತ  ರಾತ್ರಿ ಗಂಡನಿಂದ  ಬೈಗುಳ ಹಾಗು ಹೊಡೆತ.


ನಮ್ಮ ಮನೆಯ ಪಕ್ಕದಲ್ಲೇ ಇರುವ ಫ್ಲಾಟ್‌ನಲ್ಲಿ ಇರುವ ಗಂಡ ಹೆಂಡತಿಯರಿಬ್ಬರೂ ಒಟ್ಟಿಗೆ ಕೆಲಸಕ್ಕೆ ಹೋಗುತ್ತಾರೆ ರಾತ್ರಿ ಬರುತ್ತಾರೆ. ಬಂದೊಡನೆ ಗಂಡ ಆರಾಮಾವಾಗಿ ಟಿವಿ ನೋಡುತ್ತಿರುತ್ತಾನೆ. ಹೆಂಡತಿ ಅಡುಗೆ ಮನೆ ಸೇರಿರುತ್ತಾಳೆ


ಅಷ್ಟೇಕೆ ನಮ್ಮಮನೆಯಲ್ಲು ಸಹಾ ಅದೇ ಗೋಳು. ಇಷ್ಟೆಲ್ಲಾ ಮಾಡಿದರು ದುಡಿದರೂ ಮನೆಯಲ್ಲಿ ನನ್ನದೇ ಕೆಲಸಗಳು. ಗಂಡನೆನಿಸಿಕೊಂಡವರು ಮಾತ್ರ ಆರಾಮವಾಗಿರುತ್ತಾರೆ.


ಅಲ್ಲಾ ಹೆಣ್ಣಿಗೆ ಇನ್ನೂ ಸ್ವಾತಂತ್ರ್ಯ ಬರಲೇ ಇಲ್ಲ್ಲವಲ್ಲ.ಹೆಣ್ಣಿನ ಶೋಷಣೆ ಇನ್ನೂ ನಡೆಯುತ್ತಲೇ ಇದೆ. ಅದಕ್ಕೆ ಮೇಲಿನವುಗಳು ಉದಾಹರಣೆ ಮಾತ್ರ


ಹೆಂಡತಿಯಲ್ಲಿ ಮಾತ್ರ ಎಲ್ಲಾ ಗುಣಗಳನ್ನು ಬಯಸುವ ಇವುಗಳನ್ನು ಮಾಡಿದ್ದು ಗಂಡಸರೇ ಇರಬೇಕು.


ನನಗನ್ನಿಸಿದ್ದು


ರೂಪೇಶು ಲಕ್ಷ್ಮಿ(ರೂಪದ ಜೊತೆಗೆ ಹಣವೂ  )


ಶಯನೇಶು ರಂಭಾ(ಹೀಗೆ ಹೇಳಿ ಕರೆದಾಗಲೆಲ್ಲಾ ಬರುತ್ತಾಳೆಂಬ ಸ್ವಾರ್ಥ. ಅವಳ ನೋವು ಆಸಕ್ತಿ ಯಾವುದಕ್ಕೂ ಬೆಲೆ ಇರಬಾರದು ಎಂಬ ಕುಯುಕ್ತಿ)


ಕರುಣೇಶು ಮಂತ್ರಿ(ಗಂಡ ದಾರಿ ತಪ್ಪುವುದು ಸಾಮಾನ್ಯ ಎಂದು ವಿಧಿತವಾಗುತ್ತದೆ. ಆಗೆಲ್ಲಾ ಹೆಂಡತಿ ಸೆರಗು ಕಟ್ಟಿಕೊಂಡು ಒದ್ದಾಡಬೇಕು. ಅವನೇನಾದರೂ ದಾರಿ ತಪ್ಪಿದರೆ ನೀನು ಹೆಂಡತಿ ಏನ್ ಮಾಡುತ್ತಿದ್ದೆ  ಎಲ್ಲರ ಪ್ರಶ್ನೆ ಅವಳತ್ತ ಬರಲಿ )


ಬೋಜ್ಜ್ಯೇಶು ಮಾತಾ(ತಾಯಿ ಸ್ಥಾನಕ್ಕೇರಿಸಿ ನಾಲಿಗೆ  ಚಪಲ ತೀರಿಸಿಕೊಳ್ಳುವ ಆಸೆ . )


ಕಾರ್ಯೇಶು ದಾಸಿ(ಹೇಳಿದ್ದನ್ನಮಾಡಿಕೊಂಡು ಬಿದ್ದಿರಲಿ ಎಂಬ ದುರ್ಬುದ್ದಿ)


ಕ್ಷಮಯಾ ಧರಿತ್ರಿ(  ಏನಾದರೂ ಮಾಡಲಿ  ಹೆಂಡತಿ ಮಾತ್ರ ಕ್ಷಮಿಸಬೇಕು ಎಂಬ ಯೋಚನೆ ಇದು ಯಾವಕೆಟ್ಟ ಕೆಲಸಕ್ಕೆ ಕೈ ಹಾಕಲು ಪ್ರೇರಿಪಿಸುತ್ತದೆ)


ಅದಕ್ಕೆ  ಮದುವೆಯಾಗುವ , ಮದುವೆಯಾಗಿರುವ ಗಂಡಸರೇ


ಹೆಂಡತಿಯನ್ನು  ಕೇವಲ ಹೆಣ್ಣಾಗಿಯೇ ನಡೆಸಿಕೊಳ್ಳಿ ಅವಳಲ್ಲಿ ಅತಿಮಾನವ ಗುಣಗಳನ್ನು ಹುಡುಕಬೇಡಿ.


ಹೆಣ್ಣು ನಿಮ್ಮಂತೆ ಒಂದು ಜೀವಿ. ನಿಮ್ಮಲ್ಲಿ ಇದ್ದ ಹಾಗೆ ನವರಸಗಳು ಭಾವಗಳು ಅವಳಲ್ಲೂ ಇವೇ.


ನಿಮ್ಮ ಹೆಂಡತಿಯಲ್ಲಿ ನೀವು ಹುಡುಕುತ್ತಿರುವ ಗುಣಗಳು ನಿಮ್ಮಲ್ಲಿ ಇವೆಯೇ ಎಂದು ಪರೀಕ್ಷಿಸಿಕೊಳ್ಳಿ ನಂತರ ನಿಮ್ಮ ಹೆಂಡತಿಯಲ್ಲಿ ಹುಡುಕಿ.


(ಸುರೇಶ್‌ಗೆ : ನಿಮ್ಮಹೆಸರನ್ನು ಹಾಕಿರುವೆನಾದರೂ ನಿಮ್ಮನ್ನು ಉದ್ದೇಶಿಸಿ ಬರೆದಿಲ್ಲ  . ನಿಮಗೇನಾದರೂ ಹಾಗನ್ನಿಸಿದರೆ ಕ್ಷಮೆ ಇರಲಿ) 


 

Rating
Average: 1 (1 vote)

Comments